ಸಾರಾಂಶ
ಚಿಕ್ಕಮಗಳೂರು: ಸುಮಾರು 3 ಎಕರೆ ಕಾಫಿ ತೋಟ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿರುವ ಘಟನೆ ತಾಲೂಕಿನ ಕೆ.ಆರ್.ಪೇಟೆ ಬಳಿ ಇರುವ ಬಿಗ್ಗನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.ತೇಜಸ್ ಗೌಡ ಎಂಬುವವರಿಗೆ ಸೇರಿದ ಬಿಗ್ಗನಹಳ್ಳಿ ಗ್ರಾಮದ ಸರ್ವೆ ನಂಬರ್ 266 ರಲ್ಲಿನ 6 ಎಕರೆ ಕಾಫಿ ತೋಟದಲ್ಲಿ ಬುಧವಾರ ಬೆಂಕಿ ಬಿದ್ದಿದ್ದು, ಇದರಲ್ಲಿ ಸುಮಾರು 3 ಎಕರೆ ತೋಟ ಭಸ್ಮವಾಗಿದೆ. ಇದರಿಂದ ಸುಮಾರು 40 ಲಕ್ಷ ರುಪಾಯಿ ಯಷ್ಟು ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.ಸುಮಾರು 12 ವರ್ಷದ ಹಳೆಯದಾದ ಗಿಡಗಳಾಗಿದ್ದು, ಪ್ರತಿ ವರ್ಷ ಉತ್ತಮ ಬೆಳೆ ಬರುತ್ತಿತ್ತು. ಈ ಬಾರಿ ಮರಗಸಿ ಮಾಡ ಲಾಗಿದ್ದು, ಮುಂದಿನ ವರ್ಷದಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಲಾಗಿತ್ತು ಎಂದು ತೇಜಸ್‌ಗೌಡ ತಿಳಿಸಿದ್ದಾರೆ.ತೋಟದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದ್ದು, ಶಾರ್ಟ್ ಸಕ್ಯೂರ್ಟ್‌ನಿಂದ ಬೆಂಕಿ ತಗಲಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. 22 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಬಿಗ್ಗನಹಳ್ಳಿಯ ತೇಜಸ್‌ಗೌಡ ಅವರಿಗೆ ಸೇರಿದ ಕಾಫಿ ತೋಟ ಬೆಂಕಿಗೆ ಸುಟ್ಟು ಹೋಗಿರುವುದು.