ಸಾರಾಂಶ
ಸರಸ್ವತೀಪುರದ ಶ್ರೀ ಕೊಲ್ಲಾಪುರದಮ್ಮ ದೇಗುಲ ಆವರಣದಲ್ಲಿ ಜಾಗೃತಿ ರಥಕ್ಕೆ ಸ್ವಾಗತ
ಕನ್ನಡಪ್ರಭ ವಾರ್ತೆ, ಕಡೂರುಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನ ನೀಡಿರುವ ಸಮಾನತೆ ಹಕ್ಕಿನಿಂದಲೇ ಇಂದು ನಮ್ಮಂತವರು ಜನ ಪ್ರತಿನಿಧಿಗಳಾಗುವ ಜೊತೆಗೆ ಸಾಮಾನ್ಯ ವ್ಯಕ್ತಿಯೊಬ್ಬ ದೇಶದ ಅತ್ಯುನ್ನತ ಸ್ಥಾನಕ್ಕೇರುವ ಅವಕಾಶ ಕಲ್ಪಿಸಿ ಕೊಟ್ಟಿದೆ ಎಂದು ಸರಸ್ವತೀಪುರ ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್ ಹೇಳಿದರು. ತಾಲೂಕಿನ ಸರಸ್ವತೀಪುರದ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ಸಂವಿಧಾನ ಜಾಗೃತಿ ಜಾಥಾ ರಥ ಸ್ವಾಗತಿಸಿ ಮಾತನಾಡಿದರು. ಪ್ರತೀ ಭಾರತೀಯರಿಗೆ ಸಮಾನ ಹಕ್ಕುಗಳನ್ನು ನೀಡಿರುವ ಸಂವಿಧಾನದ ಬಗ್ಗೆ, ಪ್ರತಿಯೊಬ್ಬರಲ್ಲೂ ಅರಿವು ಮತ್ತು ಗೌರವ ಮೂಡಬೇಕು. ಭಾರತದ ಸಂವಿಧಾನ ಇತರೆ ರಾಷ್ಟ್ರಗಳಿಗೆ ಆದರ್ಶ ಮತ್ತು ಅನುಕರಣೀಯ. ಈ ಉದ್ದೇಶದಿಂದಲೇ ಸಂವಿಧಾನ ರಥಯಾತ್ರೆಯನ್ನು ರಾಜ್ಯ ಸರ್ಕಾರ ಆಯೋಜಿಸಿದೆ. ಸಂವಿಧಾನ ನೀಡಿರುವ ಸಮಾನ ಹಕ್ಕಿನಿಂದಲೇ ಇಂದು ಸಾಮಾನ್ಯ ವ್ಯಕ್ತಿಯೊಬ್ಬ ದೇಶದ ಅತ್ಯುನ್ನತ ಸ್ಥಾನಕ್ಕೇರುವ ಅವಕಾಶ ಸಿಕ್ದಿದೆ.
ಕೆಲವರು ಸಂವಿಧಾನದ ಬಗ್ಗೆ ಅಗೌರವವಾಗಿ ಮಾತನಾಡುವುದು ಖಂಡನೀಯ. ಭಾರತದ ಪ್ರತಿಯೊಬ್ಬರೂ ಸಂವಿಧಾನಕ್ಕೆ ಧರ್ಮಾತೀತ, ಪಕ್ಷಾತೀತವಾಗಿ ಗೌರವ ನೀಡಬೇಕು. ನಮ್ಮ ನಾಯಕ ಸಿದ್ದರಾಮಯ್ಯ ಸರ್ಕಾರ ಅಂಬೇಡ್ಕರ್ ಬರೆದ ಸಂವಿಧಾನದ ಆಶಯಗಳನ್ನು ಆದರ್ಶವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದರು.ರಥಯಾತ್ರೆಯನ್ನು ರಾಷ್ಟ್ರೀಯ ಹೆದ್ದಾರಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಗ್ರಾಮಕ್ಕೆ ಕರೆತರಲಾಯಿತು. ಜಾನಪದ ಕಲಾ ತಂಡಗಳೊಂದಿಗೆ ಶಾಲಾಮಕ್ಕಳು ಮೆರವಣಿಗೆಯಲ್ಲಿ ಸಾಗಿದರು. ಸರಸ್ವತೀಪುರ ಆಶ್ರಮ ಶಾಲೆ ಮಕ್ಕಳು ಅಭಿನಯಿಸಿದ ನೃತ್ಯರೂಪಕ ಎಲ್ಲರ ಗಮನ ಸೆಳೆಯಿತು.
ಸಮಾಜ ಕಲ್ಯಾಣಾಧಿಕಾರಿ ಎಚ್.ಡಿ.ರೇವಣ್ಣ, ಕೊಪ್ಪ ಸಮಾಜ ಕಲ್ಯಾಣಾಧಿಕಾರಿ ಪಾಟೀಲ್, ಗಿರಿಜನ ಇಲಾಖೆ ಅಧಿಕಾರಿ ಭಾಗೀರಥಿ, ಗ್ರಾಪಂ ಸದಸ್ಯರು. ಪಿಡಿಒ ಗಳಾದ ಬಸವರಾಜ ನಾಯ್ಕ, ನರಸಿಂಹ ಮೂರ್ತಿ, ಪದ್ಮನಾಭ, ತಿಮ್ಮಶೆಟ್ಟರು, ಡಿಎಸ್ಎಸ್ ಜಿಲ್ಲಾ ಸಂಚಾಲಕ ಶ್ರೀಕಾಂತ್, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು ಹಾಜರಿದ್ದರು.22ಕೆಕೆಡಿಯು2
ಕಡೂರು ತಾಲ್ಲೂಕಿನ ಸರಸ್ವತೀಪುರದ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣಕ್ಕೆ ಬಂದ ಸಂವಿಧಾನ ಜಾಗೃತಿ ಜಾಥಾದ ರಥ ಸ್ವಾಗತಿಸಲಾಯಿತು.