ಜಾನಪದ ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ

| Published : Mar 28 2025, 12:36 AM IST

ಜಾನಪದ ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಬಹುಭಾಷೆಯ ಬಹು ಸಂಸ್ಕೃತಿಯ ದೇಶ, ಕಲೆಗಳಲ್ಲಿ ಜಗತ್ತಿನಲ್ಲಿ ಶ್ರೀಮಂತ ರಾಷ್ಟ್ರ ಭಾರತ ಹಾಗೆಯೇ ಜಾನಪದ ಕ್ಷೇತ್ರದಲ್ಲಿ ಭಾರತ ತನ್ನದೇ ಆದ ಶ್ರೀಮಂತಿಕೆಯನ್ನು ಹೊಂದಿದೆ

ಕನ್ನಡಪ್ರಭ ವಾರ್ತೆ ಹುಣಸೂರು ಆಧುನಿಕತೆಯ ಪ್ರಭಾವದಿಂದ ಅಳಿವಿನಂಚಿಗೆ ಹೋಗುತ್ತಿರುವ ಜಾನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಜನಾಂಗದ ಹೊಣೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹರವೆ ಮಹದೇವ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜಾನಪದ ಉತ್ಸವ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತ ಬಹುಭಾಷೆಯ ಬಹು ಸಂಸ್ಕೃತಿಯ ದೇಶ, ಕಲೆಗಳಲ್ಲಿ ಜಗತ್ತಿನಲ್ಲಿ ಶ್ರೀಮಂತ ರಾಷ್ಟ್ರ ಭಾರತ ಹಾಗೆಯೇ ಜಾನಪದ ಕ್ಷೇತ್ರದಲ್ಲಿ ಭಾರತ ತನ್ನದೇ ಆದ ಶ್ರೀಮಂತಿಕೆಯನ್ನು ಹೊಂದಿದೆ, ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಒಂದು ವೈಶಿಷ್ಟ್ಯ ಪೂರ್ಣವಾದ ಜಾನಪದ ಆಚಾರ ವಿಚಾರಗಳನ್ನು ಹೊಂದುವ ಮೂಲಕ ಭಾರತದ ಅಸ್ಮಿತೆಯೇ ಆಗಿದೆ ಎಂದರು.ಇಂದಿಗೂ ಹಳ್ಳಿಯಲ್ಲಿ ಜೀವಂತವಾಗಿ ದುಡಿಯುವ ವರ್ಗ ಹೆಂಗಸರು, ಜಾನಪದ ವೃತ್ತಿ ಗಾಯಕರು, ಜಾನಪದವನ್ನು ಉಳಿಸಿ ಬೆಳೆಸುತ್ತಿದ್ದಾರೆ, ಹಿಂದೆ ಮದುವೆಗಳು ಜಾನಪದ ಶೈಲಿಯಲ್ಲಿ ನಡೆಯುತ್ತಿತ್ತು ಇಂದು ಕಲ್ಯಾಣ ಮಂಟಪದಲ್ಲಿ ಆಧುನಿಕ ಶೈಲಿಯೊಂದಿಗೆ ನಡೆಯುತ್ತಿದೆ. ಹಳ್ಳಿಯ ಹಬ್ಬಗಳಲ್ಲಿ ಇಂದಿಗೂ ಕಂಸಾಳೆ ವಾದ್ಯ, ಡೋಲು, ತಂಬೂರಿಯನ್ನ ಹಿಡಿದು ಹಾಡುವವರು ಸಿಗುತ್ತಾರೆ. ಜನಪದ ಉತ್ಸವ ನಮ್ಮೆಲ್ಲರ ಜೀವನಾಡಿ. ನಾಡಿನ ಸಂಸ್ಕೃತಿ ಮೊಳಕೆಯೊಡೆದದ್ದು ಜನಪದದಿಂದಲೇ ಎನ್ನುವುದನ್ನು ನಾವು ಮರೆಯಬಾರದು ಎಂದು ಅವರು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಸ್ . ಮಂಜು ಮಾತನಾಡಿ, ಜಾನಪದ ಉತ್ಸವವನ್ನು ಇಂತಹ ದೊಡ್ಡ ಶ್ರೀಮಂತಿಕೆಯ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಇಂದಿನ ನಮ್ಮ ವಿದ್ಯಾರ್ಥಿನಿಯರ ಮೇಲಿದೆ ಎಂದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಎಂ.ಆರ್. ರಾಜಶೇಖರನ್, ಬಸವಲಿಂಗ ಸ್ವಾಮಿ, ನಂಜುಂಡಸ್ವಾಮಿ, ಎಚ್.ಆರ್. ವಿಶ್ವನಾಥ್, ಕುಮಾರ್. ಲಕ್ಷ್ಮಯ್ಯ. ರಜಿಯಾ ಸುಲ್ತಾನ, ಎನ್. ಕರುಣಾಕರ್. ಸಾಂಸ್ಕೃತಿಕ ಸಮಿತಿಯ ಸಂಚಾಲಕ ಬಿ.ಎಚ್. ಹನುಮಂತಪ್ಪ, ಕಾವ್ಯ, ಕಲಾಶ್ರೀ, ವಿದ್ಯಾರ್ಥಿ ಪ್ರತಿನಿಧಿ ಪೂಜಾ, ನೂರುನ್ನಿಸ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.ಚಿಕ್ಕ ಚಿಕ್ಕ ಮಡಿಕೆಗಳಲ್ಲಿ ದವಸ ಧಾನ್ಯಗಳನ್ನು ತುಂಬಿ ರಾಗಿ ಬೀಸುವ ಕಲ್ಲು, ಜನಪದ ಆಟದ ಸಲಕರಣೆಗಳನ್ನ ತಂದು ವಿಶೇಷವಾಗಿ ಜಾನಪದ ಉತ್ಸವ ಆಚರಿಸಿತು.