ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ದಾನಿಗಳಿಂದ ಕಲಿಕೋಪಕರಣ ಸಂಗ್ರಹಿಸಿ, ಅಗತ್ಯವಿರುವ ಮಕ್ಕಳಿಗೆ ತಲುಪಿಸುವ ಲಿಂಗಪಟ್ಟಣದ ಶಿಕ್ಷಕ ಸುಂದರಪ್ಪರ ಸೇವಾ ಕಾರ್ಯ ಶ್ಲಾಘನೀಯ ಎಂದು ಮೂಳೆ ತಜ್ಞ ಡಾ.ಸುನೀಲ್ ಕುಮಾರ್ ತಿಳಿಸಿದರು.ಹಲಗೂರು ಬಿಕ್ಷು ಮಠದ ಸಭಾಂಗಣದಲ್ಲಿ ತಂದೆ-ತಾಯಿ ಇಲ್ಲದ ವಿದ್ಯಾರ್ಥಿಗಳಿಗೆ ಲಿಂಗಪಟ್ಟಣದ ಸುಂದರಪ್ಪ ಆಯೋಜಿಸಿದ್ದ ವಸ್ತ್ರ, ನೋಟ್ ಪುಸ್ತಕ ಮತ್ತು ಕಲಿಕೋಪಕರಣ ವಿತರಣೆಯಲ್ಲಿ ಮಾತನಾಡಿದರು.
ಡಾ.ಅರುಣ್ ಕುಮಾರ್ ಮಾತನಾಡಿ, ನಗು ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ದಂತ ತಪಾಸಣೆ ಆಯೋಜಿಸಿದ್ದು, ಆಸಕ್ತರು ಮನವಿ ಮಾಡಿದರೆ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಬಿರ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.ಸುಂದ್ರಪ್ಪ ಲಿಂಗಪಟ್ಟಣ ಮಾತನಾಡಿ, ಯಾವುದೇ ಜಾತಿ, ಧರ್ಮ, ಭೇದ ಮಾಡದೆ ತಾಲೂಕಿನಲ್ಲಿ ತಂದೆ-ತಾಯಿ ಇಲ್ಲದ ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಎಲ್ಲರಿಗೂ ಪ್ರತಿ ವರ್ಷ ದಾನಿಗಳಿಂದ ಸಂಗ್ರಹಿಸಿ ಕೈಲಾದ ಪರಿಕರಗಳನ್ನು ವಿತರಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶ್ರಮಿಸಲಾಗುತ್ತಿದೆ ಎಂದರು.
ತಂದೆ, ತಾಯಿ ಕಳೆದುಕೊಂಡ ಮಕ್ಕಳ ಬದುಕು ಮುದುಡಿ ಹೋಗಬಾರದು. ಎಲ್ಲಾ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಜೀವ ಇರುವವರೆಗೂ ಇಂತಹ ವಿದ್ಯಾರ್ಥಿಗಳ ಊರುಗೋಲಾಗಿ ನಿಲ್ಲಬೇಕೆಂಬುದು ನನ್ನ ಆಶಯವಿದೆ ಎಂದು ಶಿಕ್ಷಕ ಬೋರೇಗೌಡ ತಿಳಿಸಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಶಶಿಕಲಾ, ಡಾ.ಅರುಣ್ ಕುಮಾರ್, ಡಾ.ವಿವೇಕ್ ಮಠಪತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ್, ಎನ್.ಕೆ.ಕುಮಾರ್, ಎಚ್.ಆರ್.ಪದ್ಮನಾಭ್, ಶ್ರೀನಿವಾಸಾಚಾರಿ, ಕಾರ್ಯಕ್ರಮ ಅಯೋಜಕರಾದ ಸುಂದ್ರಪ್ಪ, ಬೋರೇಗೌಡ, ಜಿ.ಎಸ್.ಕೃಷ್ಣ, ಸಾವಯವ ಕೃಷಿಕ ಮಹೇಶ್ ಕುಮಾರ್, ನಿವೃತ್ತ ಸೈನಿಕ ಸುರೇಶ್, ಮೋದಿ ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆ.೧೦ರಂದು ರಾಷ್ಟ್ರ ಸಮಿತಿ ಪಕ್ಷದ ಸಂಸ್ಥಾಪನಾ ದಿನಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ರಾಷ್ಟ್ರಸಮಿತಿ ಪಕ್ಷ ಸ್ಥಾಪನೆಯಾಗಿ ೬ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಸ್ಥಾಪನಾ ದಿನವನ್ನು ಆ.೧೦ರಂದು ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನವನದಲ್ಲಿ ಏರ್ಪಡಿಸಲಾಗಿದೆ ಎಂದು ರಾಜ್ಯ ಸಮಿತಿ ಉಪಾಧ್ಯಕ್ಷ ಸೋಮಸುಂದರ್ ತಿಳಿಸಿದರು.ಪಕ್ಷದ ಸಂಸ್ಥಾಪನಾ ದಿನ ಮತ್ತು ಮಹಾಧಿವೇಶನಕ್ಕೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ೧೦ ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ವರೆಗೆ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಗುರುವಾರ ಸುದ್ದಿಗೋಷ್ಠೀಯಲ್ಲಿ ಹೇಳಿದರು.
ಸಂಸ್ಥಾಪನಾ ದಿನದ ಹಿಂದಿನ ದಿನವಾದ ಆ.೯ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ಗಾಂಧೀಭವನದಲ್ಲಿ ಚುನಾವಣೆ ಸುಧಾರಣೆ ಮತ್ತು ಅದರ ಅವಶ್ಯಕತೆಯ ಕುರಿತ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಹೋರಾಟಗಾರ ಎಸ್.ಆರ್. ಹಿರೇಮಠ್ ಮಾತನಾಡುವರು. ಮಾಜಿ ಸಚಿವರಾದ ಬಿ.ಸೋಮಶೇಖರ್, ರೈತ ಮುಖಂಡರಾದ ಸುನಂದಾ ಜಯರಾಂ, ಬೋರಯ್ಯ ಭಾಗವಹಿಸುವವರು. ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸುವುದಾಗಿ ತಿಳಿಸಿದರು.ನಂತರ ಪಕ್ಷದ ಮುಖಂಡರ ನೇತೃತ್ವದಲ್ಲಿ ಕಳೆದ ವರ್ಷ ನಮ್ಮನ್ನಗಲಿದೆ ಪಕ್ಷದ ಕಾರ್ಯಾಧ್ಯಕ್ಷ ಎಚ್.ಎಸ್.ಲಿಂಗೇಗೌಡ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸಲಾಗುವುದು. ಬಳಿಕ ಗುರುಭವನದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಜಿ.ಎಂ.ರಮೇಶ್‌ಗೌಡ, ಅರುಣ್‌ಕುಮಾರ, ದೀಪಾ, ಡಿ.ಜಿ.ನಾಗರಾಜು, ಮಲ್ಲೇಶ, ಚಂದ್ರು ಇದ್ದರು.