ಅಪೌಷ್ಟಿಕತೆ ಹೋಗಲಾಡಿಸಲು ಸಾಮೂಹಿಕ ಜವಾಬ್ದಾರಿ ಮುಖ್ಯ

| Published : Sep 02 2024, 02:05 AM IST

ಸಾರಾಂಶ

ಅಪೌಷ್ಟಿಕತೆ ಎನ್ನುವುದು ಇದೊಂದು ಶಾಪ ಮಕ್ಕಳು ಮಹಿಳೆಯರು ಸೇರಿದಂತೆ ದೇಶದಲ್ಲಿ ಸಾಕಷ್ಟು ಜನರು ಇದಕ್ಕೆ ಬಲಿಯಾಗಿದ್ದಾರೆ.

ಹರಪನಹಳ್ಳಿ: ಅಪೌಷ್ಟಿಕತೆ ಹೋಗಲಾಡಿಸಿ ಪೌಷ್ಟಿಕತೆ ಹೆಚ್ಚಿಸಲು ಸಾಮೂಹಿಕ ಜವಾಬ್ದಾರಿ ಮುಖ್ಯ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ ಹೇಳಿದರು.

ಪಟ್ಟಣದ ತಾಲೂಕು ಪಂಚಾಯ್ತಿ ರಾಜೀವಗಾಂಧಿ ಸಭಾಂಗಣದಲ್ಲಿ ತಾ.ಪಂ, ಕಾನೂನು ಸೇವಾ ಸಮಿತಿ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೋಷಣ ಅಭಿಯಾನದ ಮುಖ್ಯ ಉದ್ದೇಶವೇ ಅಪೌಷ್ಟಿಕತೆ ಹೋಗಲಾಡಿಸುವುದು ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಇದನ್ನು ಜನಾಂದೊಲನವನ್ನಾಗಿ ರೂಪಿಸಬೇಕು ಎಂದು ಹೇಳಿದರು.

ಅಪೌಷ್ಟಿಕತೆ ಎನ್ನುವುದು ಇದೊಂದು ಶಾಪ ಮಕ್ಕಳು ಮಹಿಳೆಯರು ಸೇರಿದಂತೆ ದೇಶದಲ್ಲಿ ಸಾಕಷ್ಟು ಜನರು ಇದಕ್ಕೆ ಬಲಿಯಾಗಿದ್ದಾರೆ. ಇದನ್ನು ತಡೆಯಲು ಹೆಚ್ಚು ಜಾಗೃತಿ ಮೂಡಿಸಬೇಕಿದ್ದು, ಇದಕ್ಕೆ ಎಲ್ಲಾರೂ ಕೈಜೋಡಿಸಬೇಕು ಎಂದು ಹೇಳಿದರು.

ತಾಪಂ ಇಒ ವೈ.ಎಚ್.ಚಂದ್ರಶೇಖರ್ ಮಾತನಾಡಿ ಪೋಷಣ ಮಾಸಾಚರಣೆ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಇದನ್ನು ಜನಸಾಮಾನ್ಯರಿಗೆ ತಲುಪಬೇಕಿದ್ದು ಈ ನಿಟ್ಟಿನಲ್ಲಿ ಜಾಗೃತಿ ಆವಶ್ಯಕ ಎಂದು ಹೇಳಿದರು.ಸರ್ಕಾರ ನೀಡುವ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ಸರಿಯಾಗಿ ನೀಡುವ ಮೂಲಕ ಅವರನ್ನು ಆರೋಗ್ಯವಂತ ವ್ಯಕ್ತಿಗಳನ್ನಾಗಿ ರೂಪಿಸಬೇಕಾದ ಜವಾಬ್ದಾರಿ ಶಿಶು ಅಭಿವೃದ್ಧಿ ಇಲಾಖೆ ಮೇಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಪೃತ್ವಿ, ವಕೀಲರಾದ ಮೃತ್ಯುಂಜಯ, ನಾಗರಾಜನಾಯ್ಕ, ಆರೋಗ್ಯ ಇಲಾಖೆಯ ಗೌರಮ್ಮ, ಭುವನೇಶ್ವರಿ, ಶಿಶು ಅಭಿವೃದ್ಧಿ ಇಲಾಖೆಯ ರೇಣುಕಾ, ಮಂಜುಳಾ ಸೇಎರಿದಂತೆ ಇತರರು ಇದ್ದರು.

ಹರಪನಹಳ್ಳಿ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮವನ್ನು ತಾಪಂ ಇಒ ವೈ.ಎಚ್. ಚಂದ್ರಶೇಖರ್ ಉದ್ಘಾಟಿಸಿದರು.