ಸಾರಾಂಶ
ರೋಣ: ಗ್ರಾಮೀಣ ಭಾಗದ ಬಡ ಮಕ್ಕಳಿಗಾಗಿ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ, ಉದ್ಯೋಗವಂತರನ್ನಾಗಿಸುವಲ್ಲಿ ₹ 50 ಕೋಟಿ ವೆಚ್ಚದಲ್ಲಿ ರೋಣ ಪಟ್ಟಣದ ಬದಾಮಿ ರಸ್ತೆಯಲ್ಲಿ ಅನೇಕ ಸೌಲಭ್ಯಗಳುಳ್ಳ ಜೆಟಿಟಿಸಿ ಕಾಲೇಜ್ ಪ್ರಾರಂಭಿಸಲು ಕ್ರಮಕೈಗೊಂಡಿದ್ದು, ಕಾಲೇಜ್ ಕಟ್ಟಡವು ಒಂದೇ ವರ್ಷದಲ್ಲಿ ಪೂರ್ಣಗೊಳಿಸುವಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ. ಜಿ.ಎಸ್. ಪಾಟೀಲ ಹೇಳಿದರು.
ಅವರು ಪಟ್ಟಣದ ಬದಾಮಿ ರಸ್ತೆಯಲ್ಲಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ . ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ವತಿಯಿಂದ ₹50 ಕೋಟಿ ವೆಚ್ಚದಲ್ಲಿ ನೂತನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜೆಟಿಟಿಸಿ ) ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ,ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.ಎನ್.ಟಿ.ಟಿ.ಎಫ್ ಮಾದರಿಯಲ್ಲಿಯೇ ಜೆಟಿಟಿಸಿ ಕಾಲೇಜ್ ಕಾರ್ಯ ಕೈಗೊಳ್ಳಲಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಉಪಕರಣಗಾರ ಮತ್ತು ತರಬೇತಿ ನೀಡುವಲ್ಲಿ ಕಾಲೇಜ್ ಪ್ರಾರಂಬಿಸಲಾಗುವುದು. ಜೆಟಿಟಿಸಿ ಕಾಲೇಜ ಕಟ್ಟಡದ ನೀಲನಕ್ಷೆ ಸಿದ್ದವಾಗಿದೆ. ಕಟ್ಟಡ ನಿರ್ಮಾಣಕ್ಕೆ ಒಂದು ವರ್ಷ ಕಳೆಯಬಹುದು. ಆದರೆ ಇದೇ ಪ್ರಸಕ್ತ ವರ್ಷ ಅಕ್ಟೋಬರ್ ದಿಂದ ಕಾಲೇಜ್ ಪ್ರಾರಂಭಿಸಲಾಗುವುದು. ಇದಕ್ಕಾಗಿ ಈ ಹಿಂದೆ ಇದ್ದಿರುವ ಬಸನಗೌಡ ಗಿರಡ್ಡಿ ಪದವಿ ಕಾಲೇಜ್ ಕಟ್ಟಡದಲ್ಲಿಯೇ ಜೆಟಿಟಿಸಿ ಕಾಲೇಜ್ ಪ್ರಾರಂಬಿಸಲಾಗುವದು. ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದವರು ರಾಜ್ಯದಲ್ಲಿನ 70 ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಉದ್ಯೋಗಾವಕಾಶ ಸೀಗಲಿದ್ದು, ಇದಕ್ಕಾಗಿಯೇ ಕಾರ್ಖಾನೆಗಳೊಂದಿಗೆ ಸರ್ಕಾರ ಒಪ್ಪಂದವನ್ನು ಮಾಡಿಕೊಂಡಿದೆ. ಆದ್ದರಿಂದ ಗ್ರಾಮೀಣ ಭಾಗದ ಯುವಕರು ಭವಿಷ್ಯದ ಜೀವನ ಉಜ್ವಲತೆಗೆ ಜೆಟಿಟಿಸಿ ಕಾಲೇಜ್ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು .ಕೌಶಲ್ಯದ ಕೊರತೆ ನೀಗಿಸಲು ಜೆಟಿಟಿಸಿ ಸಹಕಾರಿಯಾಗಲಿದೆ ಎಂದರು.
₹ 8 ಕೋಟಿ ವೆಚ್ಚದಲ್ಲಿ ಪಾಲಿಟೆಕ್ನಿಕ್ ಕಾಲೇಜ್ ಗ ನಿರ್ಮಿಸಲಾಗಿದ್ದು, ಹಿಂದಿನ ಅವದಿಯಲ್ಲಿದ್ದ( 22018-2023) ಶಾಸಕರು ಪಾಲಿಟೆಕ್ನಿಕ್ ಕಾಲೇಜ್ ಬೇರಡೆ ಸ್ಥಳಾಂತರಿಸಿದರು. ಇದರಿಂದ ಆ ಕಟ್ಟಡ ಖಾಲಿಯಿದ್ದು, ಆ ಕಟ್ಟಡದಲ್ಲಿ ಅಲ್ಪ ಸಂಖ್ಯಾತರ ವಸತಿ ನಿಲಯ ಪ್ರಾರಂಭಿಸಲಾಗುವದು. ವಸತಿ ನಿಲಯಕ್ಕೆ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ನಿರ್ಮಿಸಲು ಪುರಸಭೆಗೆ ಸೂಚನೆ ನೀಡಲಾಗಿದೆ. ಕಾರ್ಮಿಕ ಸಂಘದವರು ರೋಣದಲ್ಲೊಂದು ಕಾರ್ಮಿಕ ಭವನ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದರು, ಕಾರ್ಮಿಕ ಭವನ ಬದಲಾಗಿ ಕಾರ್ಮಿಕರ ವಸತಿ ಶಾಲೆ ಪ್ರಾರಂಭಿಸುವುದು. ಅತೀ ಮುಖ್ಯವೆಂದು ಕಾರ್ಮಿಕ ಸಂಘಟಕರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಶೀಘ್ರದಲ್ಲಿಯೇ ರೋಣದಲ್ಲಿ ಕಾರ್ಮಿಕರ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದರು.ಸಾನ್ನಿಧ್ಯವನ್ನು ವಹಿಸಿ ಗುಲಗಂಜಿ ಮಠದ ಗುರುಪಾದ ಸ್ವಾಮಿಜಿ ಆಶಿರ್ವದಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಗ್ಯಾರಂಟಿ ಅನುಷ್ಠಾನ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಮಿಥುನ ಜಿ. ಪಾಟೀಲ, ವ್ಹಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ, ಶರಣಪ್ಪ ಬೇಟಗೇರಿ, ಯೂಶೂಪ ಇಟಗಿ, ಅಕ್ಷಯ ಪಾಟೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಮೇಶ ಪಲ್ಲೇದ, ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಬಸವರಾಜ ಪಲ್ಲೇದ, ಪರಶುರಾಮ ಅಳಗವಾಡಿ, ಶಂಕರಗೌಡ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಅನೀಲ ನವಲಗುಂದ ನಿರೂಪಿಸಿ, ವಂದಿಸಿದರು.