ಸಾರಾಂಶ
ಮುಂಗಾರು ಮಳೆಯ ಅಬ್ಬರಕ್ಕೆ ರಾಜ್ಯದ ಪ್ರಮುಖ ಜಲಪಾತಗಳು ಮೈದುಂಬಿವೆ. ಕ್ಷೀರಧಾರೆಯಂತೆ ಧುಮ್ಮಿಕ್ಕುತ್ತಿರುವ ಈ ಜಲಧಾರೆಗಳ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಪ್ರಕೃತಿ ಸೌಂದರ್ಯದ ಈ ಜಲರಾಶಿಯ ಸಣ್ಣ ಝಲಕ್ ಇಲ್ಲಿದೆ.
- ಜೋಗ ಫಾಲ್ಸ್ :
ಹೋಗೋದು ಹೇಗೆ? -
ಶಿವಮೊಗ್ಗ ಜಿಲ್ಲೆ ಸಾಗರದಿಂದ 31 ಕಿ.ಮೀ., ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಿಂದ 19 ಕಿ.ಮೀ. ದೂರದಲ್ಲಿದೆ. ಸಾಗರ, ಸಿದ್ದಾಪುರದಿಂದ ರೋಡ್ ಮೂಲಕ ಹೋಗಬಹುದು. ಬಸ್‌ಗಳ ಸೌಲಭ್ಯವೂ ಉಂಟು
.- ಭರಚುಕ್ಕಿ-ಗಗನಚುಕ್ಕಿ:
ಹೋಗೋದು ಹೇಗೆ? -
ಚಾಮರಾಜನಗರ-ಮಂಡ್ಯ ಜಿಲ್ಲೆಗಳ ಗಡಿಭಾಗದಲ್ಲಿವೆ. ಮಳವಳ್ಳಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದು, ಬೆಂಗಳೂರಿನಿಂದ ಮಳವಳ್ಳಿ-ಕೊಳ್ಳೇಗಾಲ ರಸ್ತೆ ಮೂಲಕ ತೆರಳಬಹುದು.
- ಗೋಕಾಕ್ ಫಾಲ್ಸ್ :
ಹೋಗೋದು ಹೇಗೆ? -
ಬೆಳಗಾವಿ ಜಿಲ್ಲೆ ಗೋಕಾಕ್‌ನಿಂದ 6 ಕಿ.ಮೀ. ದೂರದಲ್ಲಿದೆ. ಗೋಕಾಕ್ ಜಲಪಾತದಿಂದ 10 ಕಿ.ಮೀ ದೂರದಲ್ಲಿ ಗೊಡಚಿನಮಲ್ಕಿ ಎಂಬ ಹಳ್ಳಿ ಇದೆ. ಇಲ್ಲಿಂದ 2 ಕಿ.ಮೀ. ನಡೆದರೆ ಜಲಪಾತದತ್ತ ಸಾಗಬಹುದು.
- ಕಲ್ಲತ್ತಗಿರಿ ಫಾಲ್ಸ್:
ಹೋಗೋದು ಹೇಗೆ?-
ಚಿಕ್ಕಮಗಳೂರು ಜಿಲ್ಲೆ ಕೆಮಣ್ಣುಗುಂಡಿಯಿಂದ 10 ಕಿ.ಮೀ.ದೂರದಲ್ಲಿದೆ. ಜಿಲ್ಲಾ ಕೇಂದ್ರದಿಂದ 52 ಕಿ.ಮೀ. ದೂರದಲ್ಲಿದ್ದು, ಚಿಕ್ಕಮಗಳೂರಿನಿಂದ ತರೀಕೆರೆ ದಾರಿಯಲ್ಲಿ ಲಿಂಗದಹಳ್ಳಿ ಸಮೀಪ ತಿರುಗಬೇಕು.
- ಸಿರಿಮನೆ ಫಾಲ್ಸ್:
ಹೋಗೋದು ಹೇಗೆ?-
ಶೃಂಗೇರಿಯಿಂದ ಮಂಗಳೂರು ರಸ್ತೆಯಲ್ಲಿ ಸುಮಾರು 7 ಕಿ.ಮೀ. ಪ್ರಯಾಣಿಸಿದರೆ ಕಿಗ್ಗಾ ಗ್ರಾಮ ಸಿಗಲಿದೆ. ಅಲ್ಲಿಂದ 4 ಕಿ.ಮೀ. ಪ್ರಯಾಣಿಸಿದರೆ ಸಿರಿಮನೆ ಫಾಲ್ಸ್‌ಗೆ ಹೋಗಬಹುದು. ಕಿಗ್ಗಾದವರೆಗೆ ಪ್ರಯಾಣಿಸಲು ಮಾತ್ರ ಬಸ್ಸಿನ ವ್ಯವಸ್ಥೆ ಇದೆ.
- ಅಬ್ಬಿ ಫಾಲ್ಸ್:
ಹೋಗೋದು ಹೇಗೆ?-
ಕೊಡಗಿನ ಮಡಿಕೇರಿಯಿಂದ 6 ಕಿ.ಮೀ. ದೂರದಲ್ಲಿದೆ. ಬಸ್ ಸಂಚಾರ ಇಲ್ಲ. ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳಿ ಅಲ್ಲಿಂದ, ಟ್ಯಾಕ್ಸಿಯಲ್ಲಿ ಹೋಗಬಹುದು. ಖಾಸಗಿ ವಾಹನಗಳ ಮೂಲಕವೂ ತೆರಳಬಹುದು.
- ಮಾಗೋಡು ಫಾಲ್ಸ್:
ಹೋಗೋದು ಹೇಗೆ?-
ಕಾರವಾರ-ಹುಬ್ಬಳ್ಳಿ ಮಾರ್ಗದಲ್ಲಿ ಯಲ್ಲಾಪುರಕ್ಕೆ ಹೋಗಿ, ಅಲ್ಲಿಂದ 3 ಕಿ.ಮೀ. ದೂರ ಸಾಗಿ, ಎಡಮಾರ್ಗದಲ್ಲಿ ಸುಮಾರು 13 ಕಿ.ಮೀ. ದೂರದಲ್ಲಿ ಸಾಗಿದರೆ ಮಾಗೋಡು ಗ್ರಾಮವಿದ್ದು, ಇಲ್ಲಿ ಜಲಪಾತವಿದೆ. ಜಲಪಾತದ ಬಳಿಯವರೆಗೂ ವಾಹನವನ್ನು ಒಯ್ಯಬಹುದು.
- ಸಾತೋಡಿ ಫಾಲ್ಸ್:
ಹೋಗೋದು ಹೇಗೆ?-
ಯಲ್ಲಾಪುರ ತಲುಪಿ, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ 5 ಕಿ.ಮೀ. ಸಾಗಿ, ಎಡಕ್ಕೆ ತಿರುಗಿ 25 ಕಿ.ಮೀ. ಸಾಗಿದರೆ ಸಾತೋಡಿ ಸಿಗುತ್ತದೆ. 2 ಕಿ.ಮೀ. ನಷ್ಟು ಕಚ್ಚಾರಸ್ತೆಯಲ್ಲಿ ನಡೆದು ಸಾಗಿದರೆ ಜಲಪಾತ ಸಿಗುತ್ತದೆ.