ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ವಿಶ್ವವಿಖ್ಯಾತ ದಸರಾ ಹಬ್ಬದ ಹಿನ್ನೆಲೆ ನಗರದ ಮನೆಯಲ್ಲಿ ಬೆಳಗ್ಗೆಯಿಂದಲೇ ಬನ್ನಿ ವಿನಿಮಯ ಕಾರ್ಯದಲ್ಲಿ ಸಚಿವ ಎಂ.ಬಿ.ಪಾಟೀಲ ಭಾಗಿಯಾಗಿದ್ದಾರೆ. ಸಚಿವ ಎಂ.ಬಿ.ಪಾಟೀಲ್ ನಿವಾಸಕ್ಕೆ ಬೆಳಗ್ಗೆಯಿಂದಲೂ ಕ್ಷೇತ್ರದ ಜನತೆ, ಅಭಿಮಾನಿಗಳು ಬನ್ನಿ ವಿನಿಮಯಕ್ಕೆ ಆಗಮಿಸುತ್ತಿದ್ದಾರೆ. ವಿದೇಶ ಪ್ರವಾಸ ಮುಗಿಸಿ ನಗರಕ್ಕೆ ಆಗಮಿಸಿರುವ ಸಚಿವರು ಪತ್ನಿ ಆಶಾ ಪಾಟೀಲ್, ಪುತ್ರ ಬಸನಗೌಡ ಪಾಟೀಲ ಕ್ಷೇತ್ರದ ಜನರೊಂದಿಗೆ ಬನ್ನಿ ವಿನಿಮಯದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಪಕ್ಷದ ಮುಖಂಡರು ಕಾರ್ಯಕರ್ತರು, ಆಪ್ತರು ಸೇರಿದಂತೆ ಕ್ಷೇತ್ರದ ಹಾಗೂ ನಗರದ ಜನರು ಹಾಗೂ ಮಹಿಳೆಯರು ಆಗಮಿಸಿ ಸಚಿವ ಎಂ.ಬಿ.ಪಾಟೀಲ ಕುಟುಂಬದೊಂದಿಗೆ ಬನ್ನಿಯನ್ನು ಹಂಚಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.