ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ದೇಶದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಮಠ-ಮಂದಿರಗಳನ್ನು ವಕ್ಫ್ ಕಬಳಿಸಲು ನಿಂತಿದೆ. 33 ಲಕ್ಷ ಎಕರೆ ತನ್ನದೆಂದು ವಕ್ಫ್ ಡಿಮ್ಯಾಂಡ್ ಮಾಡುತ್ತಿದೆ. ಹೀಗಾದರೆ ದೇಶದಲ್ಲಿ ಹಿಂದುಗಳು ಉಳಿಯುವುದಿಲ್ಲ. ಆದ್ದರಿಂದ ಧರ್ಮ ಮತ್ತು ದೇಶ ರಕ್ಷಣೆಗಾಗಿ ಎಲ್ಲಾ ಮಠಾಧೀಶರೂ ಹೊರಬಂದು ಮಾತನಾಡಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.ಸಮೀಪದ ಸೈದಾಪುರ ಗ್ರಾಮದಲ್ಲಿ ಜರುಗಿದ ಶಿವಲಿಂಗೇಶ್ವರ ದೇವಸ್ಥಾನ ಉದ್ಘಾಟನೆ, ಲಿಂಗ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣದ ಪ್ರಯುಕ್ತ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಇಂದು ಮಠಾಧೀಶರನ್ನು ಹೆದರಿಸುತ್ತಿದ್ದಾರೆ. ಇಂದು ಮಾತನಾಡದಿದ್ದರೆ ಮುಂದೆಂದೂ ಮಾತನಾಡದ ಸ್ಥಿತಿ ಬರುತ್ತದೆ. ಈಗಲೇ ಗಟ್ಟಿಯಾಗಿ ಮಾತನಾಡಿ. ಪಾಕಿಸ್ತಾನದ ಮೂರು ಪಟ್ಟು ಭೂಮಿ ಕೇಳುತ್ತಿರುವ ವಕ್ಫ್, ಪಾಪದ ಬಡ್ಡಿ ಸಮೇತ ನಾಶವಾಗುತ್ತದೆ ಎಂದು ಭವಿಷ್ಯ ನುಡಿದರು.
ನಿಡಸೋಸಿ ಸಿದ್ದಸಂಸ್ಥಾನ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುಡಿ ಗುಂಡಾರಗಳಿಗೆ, ವಿಶೇಷ ಸ್ಥಾನಮಾನ, ಪರಂಪರೆಯಿದೆ. ಮನುಷ್ಯ ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ. ಮನಸ್ಸು ಚೆನ್ನಾಗಿದ್ದರೆ ಮನೆ ಚೆನ್ನಾಗಿರುತ್ತದೆ. ಗುಡಿ ಕಟ್ಟದ ನೀವು ಪರಸ್ಪರ ಮನಸ್ಸು ಕಟ್ಟಿಕೊಳ್ಳಿ ಎಂದರು.ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಭಾರತ ಆಧ್ಯಾತ್ಮದ ಶಕ್ತಿಕೇಂದ್ರ. ದೇಹ ದೇಗುಲವಾಗಬೇಕು, ತಲೆ ಕಳಸವಾಗಬೇಕು, ದೇಹ ಶಿವಲಿಂಗನ ದೇಗುಲವಾಗಬೇಕು. ಲಿಂಗಕ್ಕೆ ಮನ, ಜಂಗಮಕ್ಕೆ ಧನ ಅರ್ಪಿಸಿ ಎಂದರು.
ಮರೇಗುದ್ದಿಯ ಡಾ.ನಿರುಪಾಧೀಶ್ವರ ಸ್ವಾಮೀಜಿ, ಚಿಮ್ಮಡದ ಪ್ರಭು ಸ್ವಾಮೀಜಿ, ರಬಕವಿಯ ಗುರುಸಿದ್ದೇಶ್ವರ ಸ್ವಾಮಿಜಿ ಆಶೀರ್ವಚನ ನೀಡಿದರು. ಚಿಕ್ಕಪಡಸಲಗಿಯ ಕಲ್ಯಾಣಯ್ಯ ಬಬಲಾದಿಮಠ, ನಿಜಗುಣಯ್ಯ ಹಿರೇಮಠ, ಈರಯ್ಯ ಮಠಪತಿ, ಮಹಾಂತೇಶ ಶ್ರೀಗಳು ಇದ್ದರು. ಕೆಎಂಎಫ್ ಮಾಜಿ ಅಧ್ಯಕ್ಷ ರಂಗನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿವಲಿಂಗೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಮುರಿಗೆಪ್ಪ ಗುಣದಾಳ, ಗ್ರಾಪಂ ಸದಸ್ಯ ಮಲ್ಲಪ್ಪ ಕೌಜಲಗಿ, ಪಿಕೆಪಿಎಸ್ ಅಧ್ಯಕ್ಷ ಬಸವಣ್ಣೆಪ್ಪ ಬ್ಯಾಳಿ, ಗೌಡಪ್ಪಗೌಡ ಪಾಟೀಲ, ಸಿದ್ದುಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗಪ್ಪ ಸನದಿ, ಯಮುನಪ್ಪ ಉಪ್ಪಾರ, ಮಲಗೌಡ ಪಾಟೀಲ, ರಾಮನಗೌಡ ಪಾಟೀಲ, ಮುತ್ತಪ್ಪ ಭೀ.ನಾಯಕ, ಮಹಾದೇವ ಗುಣದಾಳ, ಶಿವಲಿಂಗ ಸತ್ಯಪ್ಪ ಪಾಶ್ಚಾಪುರ, ಅರ್ಜುನ ಪಾಶ್ಚಾಪುರ, ಮಂಜು ಪಾಶ್ಚಾಪುರ,ಮಹಾಲಿಂಗ ಪಾಶ್ಚಾಪುರ,ಮಲ್ಲಪ ನಿ.ಪಾಶ್ಚಾಪುರ, ಮಹಾದೇವ ಪಾಶ್ಚಾಪುರ,ಕಲ್ಲಪ್ಪ ಉಳ್ಳಾಗಡ್ಡಿ, ಲಕ್ಷ್ಮಣ ಪಾಶ್ಚಾಪುರ, ಶಿವಲಿಂಗ ಮುಗಳಖೋಡ, ಸಿದ್ಧಪ್ಪ ಪಾಶ್ಚಾಪುರ,ರಮೇಶ ಚಿಂಚಲಿ, ಶಿವಪ್ಪ ಮಹಾಲಿಂಗ ಪಾಶ್ಚಾಪುರ, ಪರಮಾನಂದ ಉಳ್ಳಾಗಡ್ಡಿ, ಶಂಕರ ಪಾಶ್ಚಾಪುರ, ಗುರುಪಾದ ಗುಣದಾಳ, ಆನಂದ ಕೇತಗೌಡ, ನಾಗಪ್ಪ ಕೇತಗೌಡ, ಬಸವರಾಜ ಮುತ್ತಪ್ಪಗೋಳ, ಪುಂಡಲೀಕಪ್ಪ ಕೌಜಲಗಿ, ಶಿವಪ್ಪ ಹೋಳ್ಕರ, ಮಹಾಲಿಂಗಪ್ಪ ಬಾಯಪ್ಪಗೋಳ, ಬಾಳನಾಯಕ ನಾಯಕ ಮತ್ತು ಶಿವಲಿಂಗೇಶ್ವರ ಸೇವಾ ಮಂಡಳಿ ಸದಸ್ಯರು ಮತ್ತು ಹಿರಿಯರಿದ್ದರು.
ರೇಖಾ ಬಿರಾದಾರ ಮತ್ತು ಕುಮಾರ ಬಡಿಗೇರ ಪ್ರಾರ್ಥಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು.