ಸಾರಾಂಶ
ಕಡೂರು, ಹಣ್ಣು ಕಾಯಿ ದೇವರ ಪೂಜೆ ನಂತರ ಪ್ರಸಾದವಾಗಿ ಹೊರಬರುವಂತೆ ವಿದ್ಯಾರ್ಥಿ ಗಳು ಕಾಲೇಜಿನಿಂದ ಸಂಸ್ಕಾರ ವಂತ ರಾಗಿ ಹೊರಬನ್ನಿ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.
ಸಖರಾಯಪಟ್ಟಣದ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಜಾನಪದ ಉತ್ಸವ
ಕನ್ನಡಪ್ರಭ ವಾರ್ತೆ, ಕಡೂರುಹಣ್ಣು ಕಾಯಿ ದೇವರ ಪೂಜೆ ನಂತರ ಪ್ರಸಾದವಾಗಿ ಹೊರಬರುವಂತೆ ವಿದ್ಯಾರ್ಥಿ ಗಳು ಕಾಲೇಜಿನಿಂದ ಸಂಸ್ಕಾರ ವಂತ ರಾಗಿ ಹೊರಬನ್ನಿ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.
ತಾಲೂಕಿನ ಸಖರಾಯಪಟ್ಟಣದ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಜಾನಪದ ಉತ್ಸವ ಉದ್ಘಾಟಿಸಿ ಮಾತನಾಡಿದರು, ನಮ್ಮ ದೇಶ ನಮ್ಮ ಸಂಸ್ಕೃತಿ ಇಡೀ ಪ್ರಪಂಚಕ್ಕೆ ಮಾದರಿ. ಸಂಸ್ಕೃತಿ ಮತ್ತು ಸಂಸ್ಕಾರಗಳು ನಮ್ಮ ಹಿರಿಯರಿಂದ ಬಂದ ಬಳುವಳಿ. ಜನಪದವೂ ಕೂಡ ಹಿರಿಯರು ಹಾಕಿ ಕೊಟ್ಟ ಬುನಾದಿ. ಅದನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ವಿದ್ಯಾರ್ಥಿಗಳು ಜನಪದ ಕಲೆಗಳನ್ನು ಅಭ್ಯಾಸಿಸಬೇಕು. ಜಾನಪದ ಕಲೆ ಸಂಸ್ಕತಿ ಉಡುಗೆ ತೊಡುಗೆ ಆಹಾರ ಪದ್ಧತಿ ಸಂಪ್ರದಾಯ ಗಳನ್ನು ಸ್ವಲ್ಪವಾದರೂ ಪಾಲಿಸಿ ಉಳಿಸಬೇಕು. ಅನುಭವಗಳ ಸಾರವೇ ಆಗಿರುವ ಜಾನಪದ ವೈಜ್ಞಾನಿಕ ವಾಗಿಯೂ ಪೂರಕವಾಗಿದೆ ಎಂದರು. ದೇವಾಲಯದ ಪೂಜೆಗೆ ಹೋದ ಹಣ್ಣುಕಾಯಿ ಪ್ರಸಾದವಾಗಿ ಬರುತ್ತದೆಯೋ ಅದೇ ರೀತಿ ನೀವೂ ಕಾಲೇಜಿಗೆ ಬಂದು ಹೋಗುವಾಗ ಸಂಸ್ಕಾರವಂತರಾಗಿ ಹೆಸರು ತನ್ನಿ ಎಂದರು.ಪದವಿ ವಿದ್ಯಾರ್ಥಿ ವಿದ್ಯಾ ಮಾತನಾಡಿ, ಜನರ ಬಾಯಿಂದ ಬಾಯಿಗೆ ಹರಿದು ಬಂದ ಸಾಹಿತ್ಯ ಜನಪದ. ಇದನ್ನು ವಿದ್ಯಾರ್ಥಿ ದಿಸೆಯಿಂದಲೇ ಉಳಿಸಿ ಬೆಳೆಸುವುದು ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಜನಪದ ಉತ್ಸವ ಆಯೋಜಿಸ ಲಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಗತೀಕರಣದ ಕಾಲದಲ್ಲಿ ಮರೆಯಾಗುತ್ತಿರುವ ಜನಪದ ಕಲೆಯ ಜಾಗೃತಿ ವಿದ್ಯಾರ್ಥಿಗಳಲ್ಲಿ ಮೂಡಿಸುವುದೇ ಕಾರ್ಯಕ್ರಮದ ಉದ್ದೇಶ. ವಿದ್ಯಾರ್ಥಿಗಳ ಕುಟುಂಬಗಳು ಭಾರತೀಯ ಸಂಸ್ಕೃತಿಯನ್ನು ಹಿರಿಯರಿಂದ ತಿಳಿದು ರೂಢಿಸಿಕೊಳ್ಳಬೇಕು. ಖರ್ಚಿಲ್ಲದ ಜನಪದ ಕಲೆಗಳನ್ನು ಮರೆಯದೆ ನಮ್ಮ ಹಳ್ಳಿಗಳಲ್ಲಿ ಎಲ್ಲರೊಂದಿಗೆ ಬೆರೆತು ಸಂಭ್ರಮಿಸಬೇಕು ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಜಾಲತಾಣದ ಉಪಾಧ್ಯಕ್ಷ ಸಚಿನ್ ಎತ್ತಿನಮನೆ, ಹಿರಿಯ ಉಪನ್ಯಾಸಕ ಜಗದೀಶ್, ಕಲಾವತಿ ಜನಪದ ಕಲೆಗಳ ಬಗ್ಗೆ ಮಾತನಾಡಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಾಂಪ್ರಾದಾಯಿಕ ಜಾನಪದ ಉಡುಗೆ ತೊಡುಗೆ ಗಳನ್ನು ಹಾಕಿ ಗಮನಸೆಳೆದರು.31ಕೆಕೆಡಿಯು2.ಕಡೂರು ತಾಲೂಕಿನ ಸಖರಾಯಪಟ್ಟಣದ ಪದವಿ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವವನ್ನು ರಾಗಿ ರಾಶಿಗೆ ಪೂಜೆ ಮಾಡುವ ಮೂಲಕ ಶಾಸಕ ಎಚ್. ಡಿ. ತಮ್ಮಯ್ಯ ಉದ್ಘಾಟಿಸಿದರು.