ವಿಧಾನಸಭೆ ಅಧಿವೇಶನ ವೀಕ್ಷಣೆಗೆ ಬನ್ನಿ: ಸ್ಪೀಕರ್‌ ಯುಟಿ ಖಾದರ್

| Published : Feb 08 2024, 01:40 AM IST

ವಿಧಾನಸಭೆ ಅಧಿವೇಶನ ವೀಕ್ಷಣೆಗೆ ಬನ್ನಿ: ಸ್ಪೀಕರ್‌ ಯುಟಿ ಖಾದರ್
Share this Article
  • FB
  • TW
  • Linkdin
  • Email

ಸಾರಾಂಶ

ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ಇಕ್ಬಾಲ್ ಅನ್ಸಾರಿ ಅವರಿಗೆ ಸಲ್ಲುತ್ತದೆ. ಅವರು ಸೋತರೂ ಜನಪರ ಕಾರ್ಯದಲ್ಲಿದ್ದಾರೆ. ಅವರು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಾರೆ

ಗಂಗಾವತಿ: ವಿಧಾನಸಭೆ ಅಧಿವೇಶನ ವೀಕ್ಷಿಸಲು ಎಲ್ಲರು ಬನ್ನಿ, ಸಂವಿಧಾನ ತಿಳಿದುಕೊಳ್ಳಿ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.ರಾಯಚೂರಿನಿಂದ ಹೊಸಪೇಟೆಗೆ ತೆರಳುವ ಮಾರ್ಗದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.ರಾಜ್ಯದಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಅಧಿವೇಶನದಲ್ಲಿ ಪ್ರಮುಖ ವಿಷಯಗಳು ಚರ್ಚೆಯಾಗುತ್ತಿವೆ. ಇದನ್ನು ಗಮನಿಸಲು ಕಾರ್ಯಕರ್ತರು ಆಗಮಿಸಬೇಕೆಂದು ತಿಳಿಸಿದರು.ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ಇಕ್ಬಾಲ್ ಅನ್ಸಾರಿ ಅವರಿಗೆ ಸಲ್ಲುತ್ತದೆ. ಅವರು ಸೋತರೂ ಜನಪರ ಕಾರ್ಯದಲ್ಲಿದ್ದಾರೆ. ಅವರು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್, ಕಾಂಗ್ರೆಸ್ ಮುಖಂಡರಾದ ವಿಠಾಲಾಪುರ ಯಮನಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ನೀಲಪ್ಪ, ಎಸ್.ಬಿ. ಖಾದ್ರಿ, ನಗರಸಬಾ ಸದಸ್ಯ ಮನೋಹರಸ್ವಾಮಿ ಹಿರೇಮಠ, ಎಸ್ಟಿ ಸೆಲ್ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ.ಗೊಂಡಬಾಳ, ತಾಲೂಕು ಅಧ್ಯಕ್ಷ ಮಂಜುನಾಥ ಗೊಂಡಬಾಳ, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ಭೀಮೇಶ, ವಿಶ್ವನಾಥ ಮಾಲಿಪಾಟೀಲ್, ರಾಚಪ್ಪ ಗುಂಜಳ್ಳಿ, ಮಾರೇಶ, ಬಸವರಾಜ ಚಿಲ್ಕವಾಡಿ ಕಿನ್ನಾಳ ಇದ್ದರು.