ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 70 ವರ್ಷದ ಸ್ಮರಣೋತ್ಸವ ಹಾಗೂ ರಥೋತ್ಸವ ಗುರುವಾರ ಇಲ್ಲಿನ ಜಯದೇವ ಸರ್ಕಲ್‌ನ ಶಿವಯೋಗಿ ಮಂದಿರದ ಆವರಣದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ದಾವಣಗೆರೆಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 70 ವರ್ಷದ ಸ್ಮರಣೋತ್ಸವ ಹಾಗೂ ರಥೋತ್ಸವ ಗುರುವಾರ ಇಲ್ಲಿನ ಜಯದೇವ ಸರ್ಕಲ್‌ನ ಶಿವಯೋಗಿ ಮಂದಿರದ ಆವರಣದಲ್ಲಿ ನಡೆಯಿತು.
ಸಂಜೆ ಶಿವಯೋಗಿ ಮಂದಿರದ ಆವರಣದಲ್ಲಿ ಲಿಂ.ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಸುಮಾರು ₹30 ಲಕ್ಷ ವೆಚ್ಚದಲ್ಲಿ 10.5 ಕೆಜಿಯ 2 ಅಡಿಯ ನೂತನ ಬೆಳ್ಳಿ ಮೂರ್ತಿಯನ್ನು 21 ಅಡಿ ಎತ್ತರ, 3 ಅಡಿ ಕಳಸ ಹೊಂದಿರುವ ನೂತನ ರಥದಲ್ಲಿ ರಥೋತ್ಸವ ನಡೆಯಿತು.ರಥೋತ್ಸವಕ್ಕೆ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು ಚಾಲನೆ ನೀಡಿದರು. ಶ್ರೀಗಳ ಬೆಳ್ಳಿಯ ಮೂರ್ತಿ, ಬಸವಾದಿ ಶರಣರ ಗ್ರಂಥಗಳು, ಜಾನಪದ ಕಲಾ ತಂಡಗಳೊಂದಿಗೆ ಸಾಗಿದ ರಥೋತ್ಸವ ಶಿವಯೋಗಿ ಮಂದಿರದ ಆವರಣದಲ್ಲಿ ವಿವಿಧ ಮಠಾಧೀಶರು, ಶ್ರೀಮಠದ ಸದ್ಭಕ್ತರ ಸಮ್ಮುಖ ನಡೆಯಿತು.
ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ, ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಇಳಕಲ್ ಗುರುಮಹಾಂತ ಸ್ವಾಮೀಜಿ, ಕುಂಚುಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ, ಶಿರಾಳಕೊಪ್ಪದ ಸಿದ್ದೇಶ್ವರ ಸ್ವಾಮೀಜಿ, ಮೈಸೂರಿನ ಮೋಕ್ಷಪತಿ ಸ್ವಾಮೀಜಿ, ಶಿರೂರು ಡಾ.ಬಸವಲಿಂಗ ಸ್ವಾಮೀಜಿ, ಕಲ್ಬುರ್ಗಿ ಶ್ರೀ ಸಿದ್ದಬಸವ ಕಬೀರ ಸ್ವಾಮೀಜಿ, ಯಾದವ ಗುರುಪೀಠದ ಬಸವ ಯಾದವಾನಂದ ಸ್ವಾಮೀಜಿ, ಹಾವೇರಿಯ ಶಿವಬಸವ ಸ್ವಾಮೀಜಿ, ಡಾ.ಬಸವರಮಾನಂದ ಸ್ವಾಮೀಜಿ, ಬಿನ್ನಾಳದ ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿ, ಹಾವೇರಿಯ ಬಸವ ಶಾಂತಲಿಂಗ ಸ್ವಾಮೀಜಿ, ಗುರುಮಠಕಲ್ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮೀಜಿ, ಶಿರಸಂಗಿ ಮಠದ ಬಸವ ಮಹಾಂತ ಸ್ವಾಮೀಜಿ, ಕುಂಬಾರ ಗುಂಡಯ್ಯ ಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಬೀದರ್‌ನ ಶಿವಾನಂದ ಸ್ವಾಮೀಜಿ, ಶಿಕಾರಿಪುರದ ಚನ್ನಬಸವ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು, ಟ್ರಸ್ಟಿನ ಎಂ.ಜಯಕುಮಾರ, ಅಂದನೂರು ಮುಪ್ಪಣ್ಣ, ಟಿ.ಎಂ. ವೀರೇಂದ್ರ, ಎಸ್.ಓಂಕಾರಪ್ಪ, ಸೋಗಿ ಶಾಂತಕುಮಾರ, ಹಾಸಬಾವಿ ಕರಿಬಸಪ್ಪ, ಕುಂಟೋಜಿ ಚನ್ನಪ್ಪ, ಬೆಳ್ಳೂಡಿ ಮಂಜುನಾಥ, ಶ್ರೀಮಠದ ಭಕ್ತರು ಭಾಗವಹಿಸಿದ್ದರು.- - -
-8ಕೆಡಿವಿಜಿ36:ರಥೋತ್ಸವಕ್ಕೆ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು ಚಾಲನೆ ನೀಡಿದರು. ವಿವಿಧ ಮಠಾಧೀಶರು, ಗಣ್ಯರು, ಅಪಾರ ಭಕ್ತರು ಪಾಲ್ಗೊಂಡಿದ್ದರು.