ಪಂ.ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ: ಸ್ವರ ಸಂಗೀತೋತ್ಸವ

| Published : Jul 06 2024, 12:52 AM IST

ಪಂ.ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ: ಸ್ವರ ಸಂಗೀತೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವರ ಸಂಗೀತೋತ್ಸವದಲ್ಲಿ ಪಂ. ಬಿ.ಎಸ್. ಮಠ ಹಾಗೂ ವಿದೂಷಿ ಅಕ್ಕಮಹಾದೇವಿ ಮಠ ಅವರ ವಯೋಲಿನ್ ವಾದನದಲ್ಲಿ ರಾಗ ಶುದ್ಧ ಸಾರಂಗ ಪ್ರಸ್ತುತ ಪಡಿಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ದರ್ಬಾರ ಸಂಗೀತ ಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಪಂ.ಪಂಚಾಕ್ಷರಿ ಗವಾಯಿಗಳವರ 80ನೇ ಪುಣ್ಯಸ್ಮರಣೆ ಹಾಗೂ ಸ್ವರ ಸಂಗೀತೋತ್ಸವ-2024” ಕಾರ್ಯಕ್ರಮವನ್ನು ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ತಬಲಾ ವಾದಕ ಪಂ.ಸಾತಲಿಂಗಪ್ಪ ಕಲ್ಲೂರ ದೇಸಾಯಿ, ಉಮೇಶ ಮುನವಳ್ಳಿ, ಪ್ರಕಾಶ ಬಾಳಿಕಾಯಿ, ಡಾ. ಎ.ಎಲ್. ದೇಸಾಯಿ, ಡಾ. ಗುರುಬಸವ ಮಹಾಮನೆ ಆಗಮಿಸಿದ್ದರು. ಹಿರಿಯ ಹಿಂದೂಸ್ಥಾನಿ ಗಾಯಕ ಪಂ.ಸೋಮನಾಥ ಮರಡೂರ ಅಧ್ಯಕ್ಷತೆ ವಹಿಸಿದ್ದರು.

ನಂತರ ಜರುಗಿದ ಸ್ವರ ಸಂಗೀತೋತ್ಸವದಲ್ಲಿ ಪಂ. ಬಿ.ಎಸ್. ಮಠ ಹಾಗೂ ವಿದೂಷಿ ಅಕ್ಕಮಹಾದೇವಿ ಮಠ ಅವರ ವಯೋಲಿನ್ ವಾದನದಲ್ಲಿ ರಾಗ ಶುದ್ಧ ಸಾರಂಗ ಪ್ರಸ್ತುತ ಪಡಿಸಿದರು. ಮಳೆಮಲ್ಲೇಶ ಹೂಗಾರ ತಬಲಾ ಸಾಥ್ ಸಂಗತ ನೀಡಿದರು. ರಘುನಂದನಗೋಪಾಲ ಹೂಗಾರ ಮತ್ತು ತಂಡದಿಂದ ಜರುಗಿದ ಕ್ಲಾಸಿಕಲ್ ಪ್ಯೂಜನ್ ಕಾರ್ಯಕ್ರಮ ಕೇಳುಗರ ಹೃನ್ಮನ ತಣಿಸಿತು.

ತಬಲಾದಲ್ಲಿ ಗುರುಸ್ವಾಮಿ ಮಠಪತಿ, ಅಮೋಘ ಮುನವಳ್ಳಿ ಹಾಗೂ ಹಾರ್ಮೊನಿಯಂದಲ್ಲಿ ವಿನೋದ ಪಾಟೀಲ ಹಾಗೂ ಸೋಹಿಲ್ ಸಯ್ಯದ ಸಾಥ್ ಸಂಗತ ನೀಡಿದರು. ದರ್ಬಾರ ಸಂಗೀತ ಕಲಾ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ರಾಗಗಳನ್ನು ಪ್ರಸ್ತುತ ಪಡಿಸಿದರು.

ಇದೇ ಸಂದರ್ಭದಲ್ಲಿ ಪಂ.ಪುಟ್ಟರಾಜ ಗವಾಯಿಗಳ ಹಿರಿಯ ಶಿಷ್ಯರಾದ ಪಂ. ಬಿ.ಎಸ್. ಮಠ ಮತ್ತು ವಿದುಷಿ ಅಕ್ಕಮಹಾದೇವಿ ಮಠ ಅವರನ್ನು ಸನ್ಮಾನಿಸಲಾಯಿತು.

ರವಿ ಕುಲಕರ್ಣಿ ನಿರೂಪಿಸಿದರು. ದರ್ಬಾರ ಸಂಗೀತ ಸಂಸ್ಥೆಯ ಅಧ್ಯಕ್ಷ ಬಸವರಾಜ ಹೂಗಾರ ಸ್ವಾಗತಿಸಿದರು. ಎನ್.ಜಿ. ಗುರುಪುತ್ರನವರ ವಂದಿಸಿದರು.