ಸಾರಾಂಶ
ಶರಣರು ಹಾಗೂ ದಾರ್ಶನಿಕರು ಸೇರಿದಂತೆ ಬಹುಮುಖ ಪ್ರತಿಭೆ ಹೊಂದಿರುವ ಸಮಾಜ ಸೇವಕರನ್ನು ಸ್ಮರಿಸುವ ಕೆಲಸಗಳು ನಡೆದಾಗ ಮಾತ್ರ ನಾವು ಬದುಕಿದ್ದ ಸಮಾಜದ ಋಣವನ್ನು ತೀರಿಸಿದಂತೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಬ್ಯಾಡಗಿ: ಶರಣರು ಹಾಗೂ ದಾರ್ಶನಿಕರು ಸೇರಿದಂತೆ ಬಹುಮುಖ ಪ್ರತಿಭೆ ಹೊಂದಿರುವ ಸಮಾಜ ಸೇವಕರನ್ನು ಸ್ಮರಿಸುವ ಕೆಲಸಗಳು ನಡೆದಾಗ ಮಾತ್ರ ನಾವು ಬದುಕಿದ್ದ ಸಮಾಜದ ಋಣವನ್ನು ತೀರಿಸಿದಂತೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ತಾಲೂಕಿನ ಕೊಲ್ಪಾಪುರ ಗ್ರಾಮದಲ್ಲಿ ಪಂ.ಪುಟ್ಟರಾಜ ಗವಾಯಿಗಳ ದೇವಸ್ಥಾನದ ಮಹಾದ್ವಾರ ನಿಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು. ಸ್ವತಃ ಅಂಧರಾಗಿದ್ದರೂ ಸಹ ಸಂಗೀತದಲ್ಲೇ ದೇವರನ್ನು ಕಂಡುಕೊಂಡಿದ್ದ ಪಂ.ಪುಟ್ಟರಾಜರು ದೈಹಿಕವಾಗಿ ಇಂದು ನಮ್ಮನ್ನಗಲಿದ್ದರೂ ಸಹ ಅವರ ಮಾಡಿದ ಊಹಿಸಲು ಅಸಾಧ್ಯವಾದ ಸಾಧನೆಗಳು ಎಂದೆಂದಿಗೂ ಅಜರಾಮರ ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಡಾ. ಪಂ. ಪುಟ್ಟರಾಜ ಗವಾಯಿ ಅವರು ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅವರ ನೀಡಿದ ಅಮೂಲ್ಯ ಕೊಡುಗೆ ಅವರ್ಣನೀಯ ಅಷ್ಟಕ್ಕೂ ಅವರು ನಮ್ಮ ಜಿಲ್ಲೆಯವರು ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ ಎಂದರು. ಈ ಸಂದರ್ಬದಲ್ಲಿ ಚೆನ್ನಬಸಪ್ಪ ಹುಲ್ಲತ್ತಿ, ಸುರೇಶಗೌಡ ಪಾಟೀಲ ಸೇರಿದಂತೆ ಗ್ರಾಮಸ್ಥರು ಹಾಗೂ ಮುಖಂಡರು ಉಪಸ್ಥಿತರಿದ್ದರು.