ಶೈಕ್ಷಣಿಕ ವರ್ಷಾರಂಭ- ಮೂಗೂರಿನಲ್ಲಿ ಜಾಥಾ

| Published : Jun 01 2024, 01:45 AM IST

ಸಾರಾಂಶ

ಎತ್ತಿನ ಗಾಡಿಯಲ್ಲಿ ವಿದ್ಯಾರ್ಥಿಗಳು ವೇಷ ಭೂಷಣ ತೊಟ್ಟು ಮೆರವಣಿಗೆ ನೇರೆವೇರಿಸಿ, ಶಾಲೆ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಸಡಗರದಿಂದ ರಜೆ ಕಳೆದು ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ, ಸಿಹಿ ಹಂಚಿ ಶಾಲೆಗೆ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಗೂರು

ಮೂಗೂರಿನ ಕೆ.ಪಿ.ಎಸ್ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಆರಂಭದ ಹಿನ್ನೆಲೆಯಲ್ಲಿ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರು ಹಾಗೂ ಬಾಲಕರ ಶಾಲೆ ವಿಭಾಗ ಮತ್ತು ಸರ್ಕಾರಿ ಪ್ರೌಢಶಾಲೆಯ ವಿಭಾಗದ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಜಾಥ ನಡೆಸಿದರು.

ಎತ್ತಿನ ಗಾಡಿಯಲ್ಲಿ ವಿದ್ಯಾರ್ಥಿಗಳು ವೇಷ ಭೂಷಣ ತೊಟ್ಟು ಮೆರವಣಿಗೆ ನೇರೆವೇರಿಸಿ, ಶಾಲೆ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಸಡಗರದಿಂದ ರಜೆ ಕಳೆದು ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ, ಸಿಹಿ ಹಂಚಿ ಶಾಲೆಗೆ ಸ್ವಾಗತಿಸಲಾಯಿತು.

ಈ ವೇಳೆ ಕೆ.ಪಿ.ಎಸ್ ಶಾಲೆಯ ಉಪ ಪ್ರಾಂಶುಪಾಲ ಪುಟ್ಟಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ, ಸಿದ್ದರಾಜು, ಸಿ.ಆರ್.ಪಿ ಶಿವರಾಜು, ಮುಖ್ಯ ಶಿಕ್ಷಕ ಕೃಷ್ಣೇಗೌಡ, ಸಲೀನ, ಎಸ್.ಡಿ.ಎಂಸಿ ಸದಸ್ಯರಾದ ರಾಜು, ಗುರುಸ್ವಾಮಿ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.