ಶಾರ್ಟ್ ಸರ್ಕ್ಯೂಟ್ ನಿಂದ ವಾಣಿಜ್ಯ ಕಟ್ಟಡಕ್ಕೆ ಬೆಂಕಿ

| Published : May 28 2024, 01:02 AM IST

ಶಾರ್ಟ್ ಸರ್ಕ್ಯೂಟ್ ನಿಂದ ವಾಣಿಜ್ಯ ಕಟ್ಟಡಕ್ಕೆ ಬೆಂಕಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನ ಮಹಾವೀರ ವೃತ್ತದಲ್ಲಿ ಗಿಗಾ ಬೈಟ್ ಎನ್ನುವ ಇಂಟರ್ ನೆಟ್ ಆಕ್ಸಸ್ ಅಂಗಡಿ ಮತ್ತು ಎಲೆಕ್ಟ್ರಿಕ್ ಬೈಕ್ ಗಳ ಅಂಗಡಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ನಂದಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಬೈಕ್ ಬ್ಯಾಟರಿ ಚಾರ್ಜ್ ಮಾಡುವಾಗ ಉಂಟಾದ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಸ್ಥಳೀಯ ಮಹಾವೀರ ವೃತ್ತದಲ್ಲಿ ಗಿಗಾ ಬೈಟ್ ಎನ್ನುವ ಇಂಟರ್ ನೆಟ್ ಆಕ್ಸಸ್ ಅಂಗಡಿ ಮತ್ತು ಎಲೆಕ್ಟ್ರಿಕ್ ಬೈಕ್ ಗಳ ಅಂಗಡಿಯಲ್ಲಿ ಸೋಮವಾರ ನಡೆದಿದೆ.

ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ಕ್ಷಣಾರ್ಧದಲ್ಲಿ ಎಲ್ಲ ವಸ್ತುಗಳು ಸುಟ್ಟು ಭಸ್ಮಗೊಂಡು ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ. ಬೆಂಕಿ ಅವಘಡದಲ್ಲಿ ಮೂರು ಎಲೆಕ್ಟ್ರಿಕ್ ವಾಹನಗಳು, ಎರಡು ಬೈಕ್ ಸುಟ್ಟು ಕರಕಲಾಗಿದೆ.

ವರುಣ ಎನ್ನುವವರಿಗೆ ಸೇರಿದ ಅಂಗಡಿಯಲ್ಲಿ ಅವಘಡ ಜರುಗಿದ್ದು, ಘಟನೆಯಿಂದ ಎರಡು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದ್ದು, ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹರಡಿಕೊಂಡಿದೆ. ಕಟ್ಟಡದೊಳಗೆ ಕಾರ್ಮಿಕರು ಸಿಲುಕಿಕೊಂಡಿದ್ದರು. ಶ್ರೀನಿವಾಸ ಎನ್ನುವ ಕಾರ್ಮಿಕ ಮೇಲಿನಿಂದ ಜಿಗಿದಿದ್ದು, ಕಾಲಿಗೆ ಪೆಟ್ಟಾಗಿದೆ. ಅಮೃತಾ ಎನ್ನುವ ಮಹಿಳೆ ಕೂಡ ತಪ್ಪಿಸಿಕೊಂಡಿದ್ದಾಳೆ. ಬೆಂಕಿ ಬಿದ್ದಿರುವ ಮಾಹಿತಿ ಪಡೆದ ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಯಿಂದಾಗಿ ಮಹಾವೀರ ವೃತ್ತದಲ್ಲಿರುವ ಎಲ್ಲ ಅಂಗಡಿಗಳು ವರ್ತಕರು ಆತಂಕಗೊಂಡಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಕೊಂಡಿದ್ದಾರೆ. ಅವಘಡ ಸಂಭವಿಸುತ್ತಿದ್ದಂತೆ ರಸ್ತೆಯಲ್ಲಿ ಜನ ದಟ್ಟಣೆಯಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.