ಕೇಂದ್ರ ಸರ್ಕಾರವು ಕಳೆದ ಎರಡು ತಿಂಗಳಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರವನ್ನು ಶೇ. ೭೦ರಷ್ಟು ಏರಿಕೆ ಮಾಡಿರುವುದು ಅವೈಜ್ಞಾನಿಕವಾಗಿದೆ.
ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ । ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಏರಿಕೆ ಅವ್ಶೆಜಾನಿಕ: ಚಂದ್ರಸಾಗರ್ ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ೨೪೦೦ ರಿಂದ ೩೨೦೦ ರು. ಗೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಸಾಗರ್ ಅವರ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ವೃತ್ತದಿಂದ ಬೆಂಗಳೂರು ಮೈಸೂರು ಹೆದ್ದಾರಿಯ ಪೊಲೀಸ್ ಠಾಣೆ ವೃತ್ತದವರೆಗೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ದ್ರಸಾಗರ್, ಕೇಂದ್ರ ಸರ್ಕಾರವು ಕಳೆದ ಎರಡು ತಿಂಗಳಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರವನ್ನು ಶೇ. ೭೦ರಷ್ಟು ಏರಿಕೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯಿಂದ ದೇಶದಲ್ಲಿ ಬೀದಿ ಬದಿ ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದ ಶೇ.೫೦ ರಷ್ಟು ಕುಟುಂಬಗಳ ಹೊತ್ತಿನ ತುತ್ತನ್ನು ಕಿತ್ತುಕೊಂಡು ಅತಂತ್ರ ಮಾಡಿದೆ. ಜೊತೆಗೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ತಿಂಡಿ ಮತ್ತು ಊಟ ಬೀದಿ ಬದಿಯ ತಿನಿಸುಗಳ ಬೆಲೆಯ ನಾಗಲೋಟದಂತೆ ಏರಿಕೆಯಾಗಿ, ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯಲಾಗಿದೆ. ಈ ಕೂಡಲೇ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಚುನಾವಣೆಗೆ ಮುನ್ನ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದರೆ ಪಂಚ ರಾಜ್ಯ ಚುನಾವಣೆಯಲ್ಲಿ ದೇಶದ ಜನರು ತಕ್ಕ ಬುದ್ದಿ ಕಲಿಸುತ್ತಾರೆ, ಐದು ರಾಜ್ಯದಲ್ಲಿ ನಾವು ಧೂಳಿಪಟ ಆಗುತ್ತೇವೆ ಎಂದು ಹೆದರಿ ಪಂಚ ರಾಜ್ಯ ಚುನಾವಣೆಯ ದರ ಏರಿಕೆ ಮಾಡಿದ್ದಾರೆ. ಇಂತಹವರು ದೇಶದ ಪ್ರಧಾನಿ ಆಗಿರುವುದು ನಮ್ಮ ದುರ್ದೈವವಾಗಿದ್ದು ಜನರು ಇಂತಹವರಿಗೆ ತಕ್ಕ ಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದ್ದು, ಬೂತ್‌ಮಟ್ಟದಲ್ಲಿ ಜನತೆಗೆ ಈ ಬಗ್ಗೆ ಅರಿವು ಮೂಡಿಸುತ್ತೇವೆ ಎಂದರು.ಜಿಲ್ಲಾ ಯೂತ್ ಕಾಂಗ್ರೆಸ್ ಉಸ್ತುವಾರಿ ಫರೋಮಿತ ದಾಸವರು ಮಾತನಾಡಿ, ನಾನು ಟೀ ಪಕೋಡ ಮಾರಿಕೊಂಡು ಮೇಲೆ ಬಂದೆ ಎನ್ನುವ ಮೋದಿ ಅವರು ಇಂದು ಬೀದಿಬದಿ ವ್ಯಾಪಾರಿಗಳು ಬಳಸುವ ಕಮರ್ಷಿಯಲ್ ಗ್ಯಾಸ್‌ಗೆ ಏಕಾಏಕಿ ೯೮೩ ರು. ಹೆಚ್ಚಳ ಮಾಡಿ ಬೀದಿ ಬದಿ ವ್ಯಾಪಾರವನ್ನು ನಂಬಿದ್ದ ಬಡ ಕುಟುಂಬಗಳ ತುತ್ತನ್ನು ಕಿತ್ತುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸುಜಯ್ ಕುಮಾರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಅರ್ಪಿತ , ಶರತ್, ಗ್ರಾಮಾಂತರ ಅಧ್ಯಕ್ಷ ಶಿವಕುಮಾರ್, ನಗರ ಅಧ್ಯಕ್ಷ ಪ್ರದೀಪ್, ಜಗದೀಶ್, ರಾಜೇಶ್, ಕಾರ್ತಿಕ್, ವಾಸಿಂ, ಮುಷಿರ್ ಸೇರಿದಂತೆ ಹಲವರು ಭಾಗವಹಿಸಿದ್ದರು.ಪೊಟೋ೫ಸಿಪಿಟಿ೪: ನಗರದ ಗಾಂಧಿ ಭವನದ ಬಳಿ ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.