5 ಮಹಿಳೆಯರಿಗೆ ಉಚಿತ ಇ-ಆಟೋ ವಿತರಿಸಿದ ಆಯುಕ್ತ ದಯಾನಂದ್‌

| Published : Oct 02 2024, 01:06 AM IST

5 ಮಹಿಳೆಯರಿಗೆ ಉಚಿತ ಇ-ಆಟೋ ವಿತರಿಸಿದ ಆಯುಕ್ತ ದಯಾನಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ನಗರ ಪೊಲೀಸ್‌, ಪರಿಹಾರ ಸಂಸ್ಥೆ, ಯುನೈಟೆಡ್‌ ವೇ ಬೆಂಗಳೂರು ಸಂಸ್ಥೆ, ಎನ್‌ಟಿಟಿ ಡಾಟಾ ಕಂಪನಿ ಸಹಯೋಗದಲ್ಲಿ ಐವರು ಮಹಿಳೆಯರಿಗೆ ಉಚಿತವಾಗಿ ಎಲೆಕ್ಟ್ರಿಕ್‌ ಆಟೋಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ನಗರ ಪೊಲೀಸ್‌, ಪರಿಹಾರ ಸಂಸ್ಥೆ, ಯುನೈಟೆಡ್‌ ವೇ ಬೆಂಗಳೂರು ಸಂಸ್ಥೆ, ಎನ್‌ಟಿಟಿ ಡಾಟಾ ಕಂಪನಿ ಸಹಯೋಗದಲ್ಲಿ ಐವರು ಮಹಿಳೆಯರಿಗೆ ಉಚಿತವಾಗಿ ಎಲೆಕ್ಟ್ರಿಕ್‌ ಆಟೋಗಳನ್ನು ವಿತರಿಸಲಾಯಿತು.

ನಗರದ ಪೊಲೀಸರ ಕಮಾಂಡ್‌ ಸೆಂಟರ್‌ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಐವರು ಮಹಿಳೆಯರಿಗೆ 5 ಇ-ಆಟೋಗಳನ್ನು ಹಸ್ತಾಂತರಿಸಿದರು. ಇದರ ಜತೆಗೆ ಮೊಬೈಲ್‌ ಫೋನ್‌ಗಳು ಹಾಗೂ ಡ್ಯಾಶ್‌ ಬೋರ್ಡ್‌ ಕ್ಯಾಮೆರಾಗಳನ್ನು ವಿತರಿಸಿದರು.

ನಗರ ಪೊಲೀಸರು ನಡೆಸುತ್ತಿರುವ ಪರಿಹಾರ ಸಂಸ್ಥೆಯು ಜೀವನದಲ್ಲಿ ನೊಂದ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಆಪ್ತ ಸಮಾಲೋಚನೆ ನಡೆಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವು ನೀಡುತ್ತಿದೆ. ಈ ಸಂಸ್ಥೆಯನ್ನು ಸಂಪರ್ಕಿಸಿದ ಮಹಿಳೆಯರ ಪೈಕಿ ಐವರನ್ನು ಆಯ್ಕೆ ಮಾಡಿ ಉಚಿತವಾಗಿ ಇ-ಆಟೋ ಚಾಲನೆ ತರಬೇತಿ ಕೊಡಿಸಿ ಇದೀಗ ಉಚಿತವಾಗಿ ಇ-ಆಟೋಗಳನ್ನು ನೀಡಲಾಗಿದೆ. ಪ್ಯಾನಲ್‌ ಪೋಟೋ..

(ಇ-ಆಟೋ ವಿತರಣೆ)ಪೋಟೋ ಕ್ಯಾಪ್ಷನ್‌...

ಪೊಲೀಸರ ಕಮಾಂಡ್‌ ಸೆಂಟರ್‌ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಮಹಿಳೆಯರಿಗೆ ಎಲೆಕ್ಟ್ರಿಕ್‌ ಆಟೋವನ್ನು ಹಸ್ತಾಂತರಿಸಿದರು.