ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅಲಯನ್ಸ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ಮೈಸೂರು ಮತ್ತು ಮಂಡ್ಯ ಜಿಲ್ಲಾ ಘಟಕಗಳ ಉದ್ಘಾಟನಾ ಕಾರ್ಯಕ್ರಮ ''''ಓಂಕಾರ'''' ಭಾನುವಾರ ಮೈಸೂರಿನ ಪೊಲೀಸ್ ಆಯುಕ್ತ ಬಿ. ರಮೇಶ್ ಮತ್ತು ಅಲಯನ್ಸ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆಯ ಮಾಜಿ ಅಂತಾರಾಷ್ಟ್ರೀಯ ಅಧ್ಯಕ್ಷ ಹಾಗೂ ಅಲಯನ್ಸ್ ನ ಸ್ಥಾಪಕರಾದ ತಿರುಪತಿ ರಾಜು ಅವರಿಂದ ನೆರವೇರಿತು.ಲಯನ್ಸ್ ಇಂಟರ್ ನ್ಯಾಷನಲ್ ಸೇವಾ ಸಂಸ್ಥೆಯು ಭಾರತೀಯರಿಂದ, ಭಾರತೀಯರಿಗಾಗಿ, ಭಾರತದಲ್ಲಿ ಕೇಂದ್ರ ಸ್ಥಾನವನ್ನು ಹೊಂದಿ, 32 ಕ್ಕಿಂತಲೂ ಅಧಿಕ ರಾಷ್ಟ್ರಗಳಲ್ಲಿ ಜಿಲ್ಲಾ ಕೇಂದ್ರಗಳನ್ನು ಹೊಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹದಿನೈದು ವರ್ಷಗಳಿಂದ ನಿರಂತರವಾಗಿ ತನ್ನ ಸೇವೆಯನ್ನು ಮುಂದುವರೆಸುತ್ತಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹಾಗೂ ಸಕ್ಕರೆ ನಾಡು ಮಂಡ್ಯದಲ್ಲಿ ಸ್ವದೇಶಿ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಇಂದು ಅದ್ಧೂರಿಯಾಗಿ 600ಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಪ್ರಾರಂಭಗೊಂಡಿತು,
ಪೊಲೀಸ್ ಆಯುಕ್ತ ಬಿ. ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು.ಮಾಜಿ ಅಂತಾರಾಷ್ಟ್ರೀಯ ಅಧ್ಯಕ್ಷರೂ ಹಾಗೂ ಈ ಸಂಸ್ಥೆಯನ್ನು ಹುಟ್ಟುಹಾಕಿದಂಥ ತಿರುಪತಿ ರಾಜು ಅವರು ಮೈಸೂರು ಹಾಗೂ ಮಂಡ್ಯ ಜಿಲ್ಲಾ ರಾಜ್ಯಪಾಲರಿಗೆ ಬ್ಯಾನರ್ ಹಸ್ತಾಂತರಿಸಿದರು ಹಾಗೂ ಅವರ ಹೊಸ ಕ್ಯಾಬಿನೆಟ್ ಅನ್ನು ಸ್ಥಾಪನೆ ಮಾಡಿದರು.
ಅಲೈ ತಿರುಪತಿ ರಾಜು ಅವರು ಮಾತನಾಡಿ, ಭಾರತದಲ್ಲಿ ಪ್ರಾರಂಭವಾದ ಅಲಯನ್ಸ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ. 15 ವರ್ಷದ ಹಿಂದೆ ಪ್ರಾರಂಭವಾದ ಸೇವಾ ಸಂಸ್ಥೆ. ಭಾರತ ದೇಶ ಅಲ್ಲದೇ 32ಕ್ಕೂ ಅಧಿಕ ಹೊರದೇಶದಲ್ಲೂ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಸುಮಾರು 50 ಸಾವಿರ ಸದಸ್ಯರನ್ನು ಹಾಗೂ 1,800 ಶಾಖೆಗಳನ್ನು ಹೊಂದಿದ್ದು, ಅತೀ ವೇಗದಲ್ಲಿ ದೇಶದ ಪ್ರತಿ ರಾಜ್ಯ ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಪ್ರಾರಂಭಿಸಿದೆ. ಇದರ ಮುಖ್ಯ ಅನುಕೂಲ ಏನೆಂದರೆ ಅತೀ ಕಡಿಮೆ ಸೇವಾ ಶುಲ್ಕ ಮತ್ತು ನಿರಂತರ ನಾಯಕತ್ವ ಅಭಿವೃದ್ಧಿ.ಮೈಸೂರು ಮತ್ತು ಮಂಡ್ಯದಲ್ಲಿ 40 ಕ್ಲಬ್‌ಗಳ ಜಿಲ್ಲೆಗಳು ಪ್ರಾರಂಭವಾಗಲು ಅಂತಾರಾರಾಷ್ಟ್ರೀಯ ನಿರ್ದೇಶಕರಾದ ನಾಗರಾಜ್ ಬೈರಿ ಹಾಗೂ ಮಾಜಿ ಅಂತರ ರಾಷ್ಟ್ರೀಯ ನಿರ್ದೇಶಕರಾದ ಜಿ.ಪಿ. ದಿವಾಕರ್ ಅವರು ಕಾರಣ ಎಂದು ಕೊಂಡಾಡಿದರು. ಮತ್ತು ಇದಕ್ಕೆ ಬೆಂಬಲ ನೀಡಿದ ಮಾಜಿ ರಾಜ್ಯಪಾಲರಾದ ಕೆ.ಎಂ. ಮುನಿಯಪ್ಪ ಮತ್ತು ಅಜಂತಾ ರಂಗಸ್ವಾಮಿ ಕೊಂಡಾಡಿದರು.
ಮುಖ್ಯವಾಗಿ ಹಸಿವು ನಿವಾರಣೆ, ವಿಶೇಷ ಚೇತನರ ಅಭಿವೃದ್ಧಿ, ಆರೋಗ್ಯ ತಪಾಸಣೆ, ಅವಶ್ಯಕತೆ ಇರುವಂತಹ ಸೇವಾ ಕಾರ್ಯಗಳನ್ನು ಗುರುತಿಸಿ ಎಲ್ಲ ಸದಸ್ಯರು ಒಂದುಗೂಡಿ ಸಾರ್ವಜನಿಕರಿಗೆ ಸಹಾಯ ಹಸ್ತ ನೀಡುವುದು ನಮ್ಮ ಗುರಿ. ಈಗಾಗಲೇ ಮೈಸೂರು ನಗರದಲ್ಲಿ 25 ಶಾಖೆಗಳು ಪ್ರಾರಂಭಗೊಂಡು ಸೇವಾ ಕಾರ್ಯಕ್ರಮ ಪ್ರಾರಂಭಿಸಿವೆ ಹಾಗೂ ಮಂಡ್ಯ ದಲ್ಲಿ 15 ಕ್ಲಬ್ಗಳು ಪ್ರಾರಂಭಗೊಂಡು ಸೇವಾ ಕಾರ್ಯಕ್ರಮ ಪ್ರಾರಂಭಿಸಿವೆ. ಈ ಸೇವಾ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ಅನುಮತಿಯು ಸಿಕ್ಕಿದೆ. ನೆರೆಯ ರಾಜ್ಯಗಳಾದ ಆಂಧ್ರ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅತೀ ಹೆಚ್ಚು ಶಾಖೆಗಳು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು,ಮೈಸೂರು ಜಿಲ್ಲೆಯಾದ 255 ರ ರಾಜ್ಯಪಾಲರಾಗಿ ಅಲೈ ನಂಜುಂಡಸ್ವಾಮಿ ಅವರು ಅಧಿಕಾರ ವಹಿಸಿಕೊಂಡರು ಹಾಗೂ ಮಂಡ್ಯ ಜಿಲ್ಲೆ 268 ರ ರಾಜ್ಯಪಾಲರಾಗಿ ಕೆ.ಟಿ. ಹನುಮಂತು ಅಧಿಕಾರ ವಹಿಸಿಕೊಂಡು ಆವರವರ ಕ್ಯಾಬಿನೆಟ್ ಅನ್ನು ಸಭಿಕರಿಗೆ ಪರಿಚಯಿಸಿದರು.
ಬಾಲಕೃಷ್ಣ ರಾಜು ಹಾಗೂ ಮಾದೇಗೌಡರು ಒಂದನೇ ಉಪ ರಾಜ್ಯಪಾಲರಾಗಿ ಹಾಗೂ ವೆಂಕಟೇಶ್ ಮತ್ತು ಕೆ.ಆರ್. ಶಶಿಧರ್ ಈಚಗೆರೆ ಅವರು ಎರಡನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು.ಸಂತೋಷ್ ಕುಮಾರ್, ಗಂಗಾಧರಪ್ಪ, ರವೀಂದ್ರನಾಥ್, ರಮೇಶ್, ಚಂದ್ರಶೇಖರ, ಅಪ್ಪಾಜಿ, ಅತಿತೇಯಾ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಬೈರಿ, ಕಾರ್ಯದರ್ಶಿ ಶ್ರೀಶೈಲ, ಉಪಾಧ್ಯಕ್ಷರು ಕೃಷ್ಣಾಜಿ ರಾಯ್, ಕೋ ಛೇರ್ಮನ್ ಶೋಭಾ ಸಿರಿ ಬಾಲು, ಖಜಾಂಚಿ ಸಂಪತ್ ಕುಮಾರ್ ಶೆಟ್ಟಿ ಇದ್ದರು.