ಪತ್ರಿಕಾ ರಂಗದಲ್ಲಿರುವವರಿಗೆ ಬದ್ಧತೆ, ಪ್ರಾಮಾಣಿಕತೆ ಮುಖ್ಯ: ಮೊದಲಿಯಾರ್

| Published : Apr 14 2024, 01:50 AM IST

ಪತ್ರಿಕಾ ರಂಗದಲ್ಲಿರುವವರಿಗೆ ಬದ್ಧತೆ, ಪ್ರಾಮಾಣಿಕತೆ ಮುಖ್ಯ: ಮೊದಲಿಯಾರ್
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಿಕಾ ರಂಗದಲ್ಲಿರುವರಿಗೆ ಪ್ರಜ್ಞೆ, ಬದ್ಧತೆ, ಪ್ರಾಮಾಣಿಕತೆ ಮುಖ್ಯ. ಪತ್ರಕರ್ತರು ವೃತ್ತಿ ಧರ್ಮ ಎತ್ತಿ ಹಿಡಿದು ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ಎ. ಮೊದಲಿಯಾರ್ ತಿಳಿಸಿದರು.

ಸುರುಚಿ ಸಭಾಂಗಣದಲ್ಲಿ ಸಂಘದ ಸದಸ್ಯರಿಗೆ ಗುರತಿನ ಕಾರ್ಡ್ ವಿತರಣೆ

ಕನ್ನಡಪ್ರಭ ವಾರ್ತೆ, ಕಡೂರು

ಪತ್ರಿಕಾ ರಂಗದಲ್ಲಿರುವರಿಗೆ ಪ್ರಜ್ಞೆ, ಬದ್ಧತೆ, ಪ್ರಾಮಾಣಿಕತೆ ಮುಖ್ಯ. ಪತ್ರಕರ್ತರು ವೃತ್ತಿ ಧರ್ಮ ಎತ್ತಿ ಹಿಡಿದು ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ಎ. ಮೊದಲಿಯಾರ್ ತಿಳಿಸಿದರು.

ಪಟ್ಟಣದ ಸುರುಚಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ 2024-25ನೇ ಸಾಲಿನ ಸದಸ್ಯರಿಗೆ ಕಾರ್ಡ್ ವಿತರಿಸಿ ಮಾತನಾಡಿ, ಈ ಹಿಂದೆ ಪತ್ರಿಕಾ ಧರ್ಮ ಅನ್ನುವುದು ಇತ್ತು. ಆದರೆ ಅದು ಇದೀಗ ಉದ್ಯಮವಾಗಿ ಬದಲಾಗಿದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ವೃತ್ತಿ ಧರ್ಮ ಕಾಣುತ್ತಿಲ್ಲ. ಪತ್ರಿಕಾ ರಂಗದ ಆರಂಭದ ದಿನಗಳಲ್ಲಿ ಇದ್ದ ಪ್ರಜ್ಞೆ, ಬದ್ಧತೆ, ಪ್ರಾಮಾಣಿಕತೆ ಮಾಯಾವಾಗುತ್ತಿರುವುದು ಬೇಸರದ ಸಂಗತಿ. ಪತ್ರಕರ್ತರು ತಮ್ಮ ಜವಾಬ್ದಾರಿ ಅರಿತು ವೃತ್ತಿ ನಿಷ್ಠೆ ಕಾಪಾಡಿಕೊಂಡು ಸಮಾಜದ ತಪ್ಪುಗಳನ್ನು ತಿದ್ದುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.ತಾಲೂಕು ಅಧ್ಯಕ್ಷ ಬೀರೂರು ಎನ್. ಗಿರೀಶ್ ಮಾತನಾಡಿ, ತಾಲೂಕು ಸಂಘ ಕ್ರಿಯಾಶೀಲತೆಯಿಂದ ಕಾರ್ಯ ಚಟುವಟಿಕೆ ಗಳನ್ನು ನಡೆಸಲಾಗುತ್ತಿದೆ. ಸಂಘದ ಬೆಳವಣಿಗೆಗೆ ಸದಸ್ಯರ ಸಹಕಾರ ಅತ್ಯಗತ್ಯವಾಗಿದ್ದು. ನಿಟ್ಟಿನಲ್ಲಿ ರಾಜ್ಯ ಸಂಘ ಪತ್ರಕರ್ತರ ಹಿತ ಕಾಪಾಡುವಲ್ಲಿ ಹೆಚ್ಚಿನ ಒತ್ತು ನೀಡುತ್ತಿದೆ. ಸಂಘದಿಂದ ನೀಡಿರುವ ಕಾರ್ಡ್ ಗಳನ್ನು ದುರುಪಯೋಗ ಪಡಿಸಿ ಕೊಳ್ಳದೆ ವೃತ್ತಿ ಧರ್ಮಕ್ಕೆ ನ್ಯಾಯ ಒದಗಿಸಬೇಕಿದೆ ಎಂದರು.ಜಿಲ್ಲಾ ಸಂಘದ ಗೌರವಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ತಿಪ್ಪೇರುದ್ರಪ್ಪ ಮಾತನಾಡಿ, ಕಾರ್ಯನಿರತ ಪತ್ರಕರ್ತ ಸಂಘ ಪತ್ರಕರ್ತರ ಹಲವು ಬೇಡಿಕೆ ಈಡೇರಿಸುವಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ. ತಾವು ಕಾರ್ಯನಿರ್ವಹಿಸುವ ಪತ್ರಿಕೆಗಳಲ್ಲಿ ಭ್ರಷ್ಟಾಚಾರದ ಧ್ವನಿಎತ್ತುವ ವರದಿ ನೀಡುವ ಮೂಲಕ ಸಾರ್ವಜನಿಕರಿಗೆ ಸ್ಪಂದಿಸಿ, ಜೊತೆಗೆ ಲೋಕಸಭಾ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಕುರಿತು ಮತದಾನ ಜಾಗೃತಿ ಮೂಡಿಸುವ ಹೊಣೆಗಾರಿಕೆ ನಿಮ್ಮದು. ಈ ನಿಟ್ಟಿನಲ್ಲಿ ಸಧೃಡ ಭಾರತ ನಿರ್ಮಾಣದ ನಿರ್ಮಾತೃಗಳು ನಾವಾಗೋಣ ಎಂದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್, ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಆರ್. ದೇವರಾಜ್, ಹಿರೇನಲ್ಲೂರು ಶಿವು, ಕೆ.ಜಿ.ಲೋಕೇಶ್ವರ್, ಎಚ್.ಎಸ್.ಪರಮೇಶ್, ಸುಬ್ರಹ್ಮಣ್ಯ, ಟಿ.ಆರ್.ಭೈರೇಶ್, ರಮೇಶ ನಾರಿನಿಂಗಜ್ಜಿ ಸೇರಿದಂತೆ ಸಂಘದ ಸದಸ್ಯರು ಇದ್ದರು.13 ಬೀರೂರು 1

ಕಡೂರು ಪಟ್ಟಣದ ಸುರುಚಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಡೂರು ತಾಲೂಕು ಘಟಕದ ಸದಸ್ಯರಿಗೆ ಗುರುತಿನ ಕಾರ್ಡ್ ವಿತರಣೆ ಮಾಡಿದರು.ತಾಲೂಕು ಅಧ್ಯಕ್ಷ ಎನ್.ಗಿರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್, ಹಿರೇನಲ್ಲೂರು ಶಿವು, ಕೆ.ಜಿ.ಕೋಕೆಶ್ವರ್ ಇದ್ದರು.