ಬದ್ಧತೆ ಯಾದವರ ವಿಶೇಷ: ಬಸವಂತಪ್ಪ

| Published : Aug 17 2025, 01:40 AM IST

ಸಾರಾಂಶ

ಕೊಟ್ಟ ಮಾತಿಗೆ ಸತ್ಯ, ಪ್ರಾಮಾಣಿಕತೆಯಿಂದ ನಡೆದುಕೊಳ್ಳುವ ಹಾಗೂ ಶ್ರದ್ಧೆ, ಬದ್ಧತೆ, ಸತ್ಯ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಯಾದವ ಸಮುದಾಯ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- ಜಿಲ್ಲಾಡಳಿತ ನೇತೃತ್ವದಲ್ಲಿ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೊಟ್ಟ ಮಾತಿಗೆ ಸತ್ಯ, ಪ್ರಾಮಾಣಿಕತೆಯಿಂದ ನಡೆದುಕೊಳ್ಳುವ ಹಾಗೂ ಶ್ರದ್ಧೆ, ಬದ್ಧತೆ, ಸತ್ಯ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಯಾದವ ಸಮುದಾಯ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದ ಡಾ. ಜಿ.ಎಸ್. ಶಿವರುದ್ರಪ್ಪ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಯಾದವ ಸಮಾಜದ ಸಹಯೋಗದಲ್ಲಿ ಆಯೋಜಿಸಲಾದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ರುದ್ರಕಟ್ಟೆ ಬಳಿ ಸಮುದಾಯ ಭವನ ನಿರ್ಮಾಣ, ವಿದ್ಯಾರ್ಥಿನಿಲಯ ಹಾಗೂ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಸಮಾಜಕ್ಕೆ ಉಪಯೋಗ ಆವಾಗುವಂತೆ 2 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಸಮುದಾಯದವರು ಸದುಪಯೋಗ ಮಾಡಿಕೊಂಡು ಉನ್ನತಮಟ್ಟಕ್ಕೆ ಬೆಳೆಯಬೇಕು. ಇಡೀ ಗೊಲ್ಲ ಸಮುದಾಯಕ್ಕೆ ಸದಾ ಬೆಂಬಲವಾಗಿ ನಿಂತು ಎಲ್ಲ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಾಮಾಣಿಕ ಪ್ರಯತ್ನಿಸುವುದರ ಜೊತೆಗೆ ಸದಾ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

ಶ್ರೀ ಕೃಷ್ಣ ಜಯಂತಿ ಅಂಗವಾಗಿ ದಾದಾಪೀರ್ ನವಿಲೇಹಾಳ್ ಉಪನ್ಯಾಸ ನೀಡಿದರು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್, ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಜಿಲ್ಲಾ ಗೊಲ್ಲ (ಯಾದವ) ಸಮುದಾಯ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಗಂಗಾಧರಪ್ಪ, ಸಮಾಜದ ಮುಖಂಡರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

- - -

(ಟಾಪ್‌ ಕೋಟ್‌) ಕೃಷ್ಣ ಮಾನವ ಕುಲಕ್ಕೆ ದಾರಿ ತೋರಿದ ದೇವತಾ ಪುರುಷ. ಅಂತಹ ಮಹಾನ್ ವ್ಯಕ್ತಿಯನ್ನು ಕುಲದೈವವಾಗಿ ಸ್ವೀಕರಿಸಿದವರು ಗೊಲ್ಲ, ಯಾದವ ಸಮುದಾಯ. ದುಷ್ಟರ ಸಂಹಾರ ಮಾಡಿದ ದೇವತಾ ಮನುಷ್ಯ ಇಡೀ ಜಗತ್ತಿಗೆ ಬೇಕಾದವನು. ಯಾದವ ಸಮಾಜ ಹಿಂದುಳಿದ ಸಮುದಾಯವೇನಲ್ಲ. ದೇಶದ ಎಲ್ಲ ಮೂಲೆಗಳಲ್ಲೂ ಹರಡಿರುವ ಬಹುದೊಡ್ಡ ಸಮೂಹ ಸಮುದಾಯ. ಸ್ವಾಭಿಮಾನದಿಂದ ಬದುಕು ನಡೆಸುವ ಸಮಾಜ. ಅಂತಹ ಮಹಾನ್ ವ್ಯಕ್ತಿಯ ಆಚರಣೆ ತುಂಬಾ ಸಂತೋಷ ತಂದಿದೆ.

- ಬಿ.ಪಿ. ಹರೀಶ್, ಶಾಸಕ, ಹರಿಹರ ಕ್ಷೇತ್ರ.

- - -

-16ಕೆಡಿವಿಜಿ 54, 55.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಶಾಸಕ ಕೆ.ಎಸ್. ಬಸವಂತಪ್ಪ ಉದ್ಘಾಟಿಸಿದರು.