ನೀರಾವರಿ ಯೋಜನೆಗಳ ಜಾರಿಗೆ ಬದ್ಧ

| Published : May 09 2025, 12:34 AM IST

ಸಾರಾಂಶ

ಕ್ಷೇತ್ರದ ಎಲ್ಲ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಮೊನ್ನೆ ಕೂಡ ಬಹುದೊಡ್ಡ ಏತ ನೀರಾವರಿ ಯೋಜನೆಯಾದ ಬಹದ್ದೂರ್ ಬಂಡಿ ನವಲ್ ಕಲ್ ನೀರಾವರಿ ಯೋಜನೆಗೆ ಟ್ರೈಯಲ್ ರನ್ ಮಾಡಿದ್ದೇವೆ. ಶೀಘ್ರದಲ್ಲಿ ಅಳವಂಡಿ-ಬೇಟೆಗೇರಿ ನೀರಾವರಿ ಯೋಜನೆಗೂ ಕೂಡ ಟ್ರೈಯಲ್‌ ರನ್‌ಗೆ ಚಾಲನೆ ನೀಡಲಿದ್ದೇವೆ.

ಕೊಪ್ಪಳ:

ಈಗಾಗಲೇ ಜಾರಿಯ ಹಂತದಲ್ಲಿರುವ ನೀರಾವರಿ ಯೋಜನೆಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲು ಬದ್ಧವಿರುವುದಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಬೇಳೂರು, ಹಿರೇಸಿಂದೋಗಿ, ಯತ್ನಟ್ಟಿ ಹಾಗೂ ಕಲಿಕೇರಿ ಗ್ರಾಮದಲ್ಲಿ ₹ 5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದ ಎಲ್ಲ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಮೊನ್ನೆ ಕೂಡ ಬಹುದೊಡ್ಡ ಏತ ನೀರಾವರಿ ಯೋಜನೆಯಾದ ಬಹದ್ದೂರ್ ಬಂಡಿ ನವಲ್ ಕಲ್ ನೀರಾವರಿ ಯೋಜನೆಗೆ ಟ್ರೈಯಲ್ ರನ್ ಮಾಡಿದ್ದೇವೆ. ಶೀಘ್ರದಲ್ಲಿ ಅಳವಂಡಿ-ಬೇಟೆಗೇರಿ ನೀರಾವರಿ ಯೋಜನೆಗೂ ಕೂಡ ಟ್ರೈಯಲ್‌ ರನ್‌ಗೆ ಚಾಲನೆ ನೀಡಲಿದ್ದೇವೆ, ಎರಡು ಯೋಜನೆಯ ಬಾಕಿ ಉಳಿದಿರುವ ಕಾಮಗಾರಿ ಕೈಗೆತ್ತಿಕೊಳ್ಳಲು ₹ 400 ಕೋಟಿ ಅನುದಾನ ಮಂಜೂರು ಆಗಿದೆ. ಸಿಂಗಟಾಲೂರು ನೀರಾವರಿ ಯೋಜನೆಡಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಮಧ್ಯಪ್ರದೇಶ ಮಾದರಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಅನುದಾನ ಮಿಸಲಿಟ್ಟು, ಟೆಂಡರ್ ಕೂಡ ಕರೆಯಲಾಗಿತ್ತು. ಆದರೆ, ಟೆಂಡರ್‌ನಲ್ಲಿ ಯಾರು ಕೂಡ ಭಾಗವಹಿಸದೆ ಇರುವುದರಿಂದ ಮರು ಟೆಂಡರ್ ಕರೆಯಲು ಸೂಚಿಸಲಾಗಿದೆ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಬಾಲಚಂದ್ರನ ಮುನಿರಬಾದ್, ಮುಖಂಡರಾದ ಪ್ರಸನ್ನ ಗಡಾದ, ಹನುಮರೆಡ್ಡಿ ಅಂಗನಕಟ್ಟಿ, ಗಾಳೆಪ್ಪ ಪೂಜಾರ, ವೆಂಕನಗೌಡ್ರ ಹಿರೇಗೌಡ್ರ, ಕೇಶವ ರೆಡ್ಡಿ, ನಿಂಗಪ್ಪ ಯತ್ನಟ್ಟಿ, ಗವಿ ಬೇಳೂರು, ನಗರಸಭೆ ಸದಸ್ಯ ಅಕ್ಬರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.