ಕನ್ನಡಪ್ರಭ ವಾರ್ತೆ ತುಮಕೂರು
ಸದೃಢ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಎನ್ ಡಿ ಎನ್ ನೇತೃತ್ವದ ಮಿತ್ರ ಪಕ್ಷಗಳು ದೇಶವನ್ನ ಆಳುತ್ತಿದ್ದು ಈ ನಿಟ್ಟಿನಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಎನ್ ಡಿಎ ಅಂಗ ಪಕ್ಷ ವಾಗಿದ್ದು ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲಿದೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್ ಅವರು ತಿಳಿಸಿದರು.ತುಮಕೂರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದರು. ರಾಜ್ಯಾಧ್ಯಕ್ಷ ಜೆ.ಮಹಿಮಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈಗಾಗಲೇ ಪಕ್ಷ ಸಂಘಟನೆ ಮತ್ತು ಸದಸ್ಯತ್ವ ನೋಂದಣಿ ಆರಂಭಿಸಿದ್ದು ಉತ್ತಮ ಕಾರ್ಯಕಾರಿ ಸಮಿತಿ ರಚಿಸಲು ಪಕ್ಷ ಸಂಘಟನೆ ಮಾಡಲಾಗುವುದು ಎಂದರು.
ನಮ್ಮ ಪಕ್ಷದ ವರಿಷ್ಠ ನಿತೀಶ್ ಕುಮಾರ್ ಮತ್ತು ರಾಜ್ಯಾಧ್ಯಕ್ಷ ಮಾಹಿಮಾ ಪಾಟೇಲ್ ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸಿ ರೈತರ ಶ್ರಮಿಕರ ಕಾರ್ಮಿಕರ ಬಡವರ ಪರವಾದ ಅತ್ಯುತ್ತಮ ಆಡಳಿತ ನೀಡಲು ಚಿಂತನೆಯನ್ನು ಹೊಂದಿದೆ. ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಈಗಾಗಲೇ ನವೆಂಬರ್‌ನಲ್ಲಿ ಚುನಾವಣಾ ಸೂಚನಾ ಕರಡು ಹೊರಬಂದಿದ್ದು ಜೂನ್ ಜುಲೈ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು ಜೆಡಿಯು ಪಕ್ಷದಿಂದ ಎಂಎಲ್ಸಿ ಸ್ಥಾನಕ್ಕೆ ಡಾ.ನಾಗರಾಜ್ ಅವರು ಅಧಿಕೃತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ ಇದಕ್ಕೆ ಪೂರಕವಾಗಿ ಪಕ್ಷ ಸಂಘಟನೆ ಜೊತೆಗೆ ಸದಸ್ಯತ್ವ ಅಭಿಯಾನವನ್ನು ರಾಜ್ಯದಲ್ಲಡೆ ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾದ ನಿತೀಶ್ ಕುಮಾರ್ ಅವರ 75ನೇ ಹುಟ್ಟು ಹಬ್ಬ ಆಚರಣೆಯ ಸಂದರ್ಭದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಲು ರಾಜ್ಯ ಯುವ ಘಟಕಕ್ಕೆ ಉದ್ಯಮಿ ಹೇಮಂತ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ರಂಗನಾಥ್ ಅವರು ಆಯ್ಕೆ ಮಾಡಿ ಪಕ್ಷಕ್ಕೆ ಬರಮಾಡಿಕೊಂಡು ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಎಚ್.ಸಿ.ಸುರೇಶ್, ಮಂಜುನಾಥ್, ಪರಮೇಶ್ವರ್ ಸಿಂದಗಿ, ಬಸಣ್ಣ ಕುದೂರು, ಎಂ.ಆರ್.ಕುಶ. ಸೇರಿದಂತೆ ಇತರರು ಇದ್ದರು.
