ಮುಂಡರಗಿ ಎಪಿಎಂಸಿ ಅಭಿವೃದ್ಧಿಗೆ ಬದ್ಧ- ಡಾ. ಚಂದ್ರು ಲಮಾಣಿ

| Published : Feb 07 2024, 01:46 AM IST

ಮುಂಡರಗಿ ಎಪಿಎಂಸಿ ಅಭಿವೃದ್ಧಿಗೆ ಬದ್ಧ- ಡಾ. ಚಂದ್ರು ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ಪಟ್ಟಣದಲ್ಲಿರುವ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ರೈತರ ಹಾಗೂ ವ್ಯಾಪಾರಸ್ಥರ ಅನುಕೂಲಕ್ಕಾಗಿ ಅಭಿವೃದ್ಧಿ ಪಡಿಸಲು ತಾವು ಬದ್ಧರಾಗಿರುವುದಾಗಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಮುಂಡರಗಿ: ಮುಂಡರಗಿ ಪಟ್ಟಣದಲ್ಲಿರುವ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ರೈತರ ಹಾಗೂ ವ್ಯಾಪಾರಸ್ಥರ ಅನುಕೂಲಕ್ಕಾಗಿ ಅಭಿವೃದ್ಧಿ ಪಡಿಸಲು ತಾವು ಬದ್ಧರಾಗಿರುವುದಾಗಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಅವರು ಭಾನುವಾರ ಪಟ್ಟಣದ ವಿ.ಜಿ. ಲಿಂಬಿಕಾಯಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಎಪಿಎಂಸಿ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರಿಗೆ ಪೂರಕವಾಗಿ ವಹಿವಾಟುಗಳನ್ನು ನಡೆಸುವ ಇಲ್ಲಿನ ಎಪಿಎಂಸಿ ವರ್ತಕರು ತಮ್ಮ ವ್ಯಾಪಾರದಲ್ಲಿ ಸದಾ ಪಾರದರ್ಶಕತೆಯನ್ನು ಕಾಯ್ದುಕೊಂಡು ಸೇವೆಯನ್ನು ನೀಡುತ್ತಿದ್ದಾರೆ ಎಂದರು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಮುಂಡರಗಿ ಎಪಿಎಂಸಿಯಲ್ಲಿ 1.80 ಕೋಟಿ ರು.ಗಳ ಸೆಸ್ ಸಂಗ್ರಹವಾಗುತ್ತಿದೆ. ಇಲ್ಲಿನ ಉತ್ಪನ್ನಗಳ ಹೆಚ್ಚಳದಿಂದಾಗಿ ಎಪಿಎಂಸಿ ಅಭಿವೃದ್ಧಿಗೊಳಿಸಲು ಸಹಕಾರಿಯಾಗಿದೆ ಎಂದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಈಶಣ್ಣ ಮುನವಳ್ಳಿ ಮಾತನಾಡಿ, ಸರ್ಕಾರಕ್ಕೆ ನೂರಾರು ಕೋಟಿ ರು.ಗಳ ತೆರಿಗೆ ಪಾವತಿಸುವ ವರ್ತಕರು ನಾವಾಗಿದ್ದೇವೆ. ಆದರೆ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಸಹ ನಮಗಾಗಿ ಏನೊಂದೂ ಅನುಕೂಲತೆಗಳನ್ನು ಮಾಡುವುದಿಲ್ಲ ಎಂದರು. ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವರ್ತಕರ ಸಂಘದ ಅಧ್ಯಕ್ಷ ಕೊಟ್ರೇಶ ಅಂಗಡಿ ಮಾತನಾಡಿ, ಇಲ್ಲಿನ ಎಲ್ಲ ವರ್ತಕರ ಸಹಾಯ, ಸಹಕಾರದಿಂದ ಮುಂಡರಗಿ ಎಪಿಎಂಸಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಂಡು ಹೋಗಲಾಗುವುದು ಎಂದರು.

ಗಣ್ಯ ವರ್ತಕರಾದ ಆರ್.ಆರ್. ಹೆಗಡಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವರ್ತಕರ ಸಂಘದಿಂದ ಶಾಸಕ ಡಾ.ಚಂದ್ರು ಲಮಾಣಿ, ಕರಬಸಪ್ಪ ಹಂಚಿನಾಳ, ವೀರಣ್ಣ ಬೇವಿನಮರದ, ಶಿವಕುಮಾರಗೌಡ ಪಾಟೀಲ, ಪ್ರಕಾಶ ಉಗಲಾಟದ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವೀರಣ್ಣ ಬೇವಿನಮರದ, ಪಾರಸ್ ಮಲ್ ಮೆಹತಾ, ಅಂದಪ್ಪ ಗೋಡಿ, ನಾಗರಾಜ ಹೆಗಡಾಳ, ಮುದುಕಪ್ಪ ಬೆಟಗೇರಿ, ಅಮೀನಸಾಬ್ ಬಿಸನಳ್ಳಿ, ಭರಮಪ್ಪ ಬೀಡನಾಳ, ಪವನ್ ಚೋಪ್ರಾ, ಕಾಶೀಂಸಾಬ್ ಹರಿವಾನ್, ಶಿವಕುಮಾರ ಬೆಟಗೇರಿ, ನಿಂಗರಾಜ ಉಪ್ಪಾರ, ಬಸವರಾಜ ಗೋಡಿ, ವೆಂಕಟೇಶ ಹೆಗಡಾಳ, ಗೌತಮಚಂದ್ ಚೋಪ್ರಾ, ಸಣ್ಣ ವೀರಣ್ಣ ಬೇವಿನಮರದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.