ದಾಬಸ್‍ಪೇಟೆ: ಹೊಸ ವರ್ಷದ ಮೊದಲ ಹಬ್ಬಸಂಕ್ರಾಂತಿ ದಿನ ಶಿವಗಂಗೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ನಡೆದಿರುವುದು ಸಂತಸ. ಈ ವರ್ಷ ಮಳೆ-ಬೆಳೆ ಉತ್ತಮವಾಗಲಿ, ರೈತರು ಸುಭೀಕ್ಷೆವಾಗಿರಲಿ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ದಾಬಸ್‍ಪೇಟೆ: ಹೊಸ ವರ್ಷದ ಮೊದಲ ಹಬ್ಬಸಂಕ್ರಾಂತಿ ದಿನ ಶಿವಗಂಗೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ನಡೆದಿರುವುದು ಸಂತಸ. ಈ ವರ್ಷ ಮಳೆ-ಬೆಳೆ ಉತ್ತಮವಾಗಲಿ, ರೈತರು ಸುಭೀಕ್ಷೆವಾಗಿರಲಿ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಸೋಂಪುರ ಹೋಬಳಿಯ ಶಿವಗಂಗೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ಪ್ರಯುಕ್ತ ಗಂಗಾಧರೇಶ್ವರ ಹಾಗೂ ಹೊನ್ನಾದೇವಿ ಅಮ್ಮನವರಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಿ ಮಾತನಾಡಿದರು.

ನಾನು ಶಾಸಕನಾದ ಮೇಲೆ ಮೂರನೇ ಬಾರಿಗೆ ತಾಲೂಕಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದೆ. ಈ ಗಿರಿಜಾ ಕಲ್ಯಾಣ ಮಹೋತ್ಸವನ್ನು ಲಕ್ಷಾಂತರ ನೋಡಿ ಕಣ್ತುಂಬಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಾಲೂಕು ಆಡಳಿತ ಹಾಗೂ ಧಾರ್ಮಿಕ ಧತ್ತಿ ಇಲಾಖೆ ಜವಾವ್ದಾರಿಯಾಗಿ ಕಾರ್ಯ ನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ದಿಗೆ ಅನುದಾನ ತಂದು ಅಭಿವೃದ್ದಿಪಡಿಸುತ್ತೇನೆ ಎಂದರು.

ಶ್ರೀ ಗಂಗಾಧರೇಶ್ವರ ಹೊನ್ನಾದೇವಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್.ಬೃಂದ ಮಾತನಾಡಿ ಧಾರ್ಮಿಕ ಧತ್ತಿ ಇಲಾಖೆ, ಜಿಲ್ಲೆ ಮತ್ತು ತಾಲೂಕು ಆಡಳಿತದಿಂದ ಗಿರಿಜಾ ಕಲ್ಯಾಣೋತ್ಸವಕ್ಕೆ ಕಳೆದ ಎರಡು ಮೂರು ತಿಂಗಳಿಂದ ಸಿದ್ದತೆ ಮಾಡಿಕೊಳ್ಳಲಾಗಿತ್ತು. ನಿರೀಕ್ಷೆಗೂ ಮೀರಿದ ಭಕ್ತರು ಆಗಮಿಸಿದ್ದು, ಯಾವುದೇ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಿ ದೇವರ ದರ್ಶನದ ವ್ಯವಸ್ಥೆ ಮಾಡಲಾಗಿತ್ತು ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಎನ್.ಶ್ರೀನಿವಾಸ್, ತಾ.ಪಂ.ಮಾಜಿ ಅಧ್ಯಕ್ಷೆ ಮಮತಾ ಗೋವಿಂದರಾಜು, ಎನ್ ಪಿ ಎ ಅಧ್ಯಕ್ಷ ಎಂ.ಕೆ.ನಾಗರಾಜು ಕುಟುಂಬಸ್ಥರನ್ನು ಗಂಗಾಧರೇಶ್ವರ ಹೊನ್ನಾದೇವಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸೋಮಶೇಖರ್, ಜಂಟಿ ಕಾರ್ಯದರ್ಶಿ ಹೊನ್ನಗಂಗಶೆಟ್ಟಿ ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು.

ಪೋಟೋ 5 : ಗಂಗಾಧರೇಶ್ವರ ದೇವರ ದರ್ಶನ ಪಡೆದ ಶಾಸಕ ಎನ್.ಶ್ರೀನಿವಾಸ್ ಕುಟುಂಬಸ್ಥರು

(ಪೋಟೋ ಕಡ್ಡಾಯ) ಪೋಟೋ 6 : ಗಂಗಾಧರೇಶ್ವರ ಹೊನ್ನಾದೇವಿ ಚಾರಿಟೇಬಲ್ ಟ್ರಸ್ಟ್ ನಿಂದ ಶಾಸಕ ಎನ್.ಶ್ರೀನಿವಾಸ್ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.