ಸಾರಾಂಶ
ಗಜೇಂದ್ರಗಡ: ಸ್ವಾತಂತ್ರ್ಯ ಭಾರತದ ಆಶಯ ಈಡೇರಿಸಲು ನಾಗರಿಕರಿಗೆ ಆರೋಗ್ಯ, ಶಿಕ್ಷಣ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ಮೂಲಕ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದ್ದೇನೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಎಸ್‌ಎಂ ಭೂಮರಡ್ಡಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ತಾಲೂಕಾಡಳಿತದಿಂದ ಗುರುವಾರ ನಡೆದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸ್ವಾತಂತ್ರ್ಯ ಎಂದರೆ ಎಲ್ಲರು ಸಮಾನರು, ಅವರಿಗೆ ಎಲ್ಲ ಸೌಲಭ್ಯ ದೊರಕಬೇಕು ಎಂಬುದನ್ನು ಅರಿತಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸ್ವಾತಂತ್ರ್ಯದ ಆಶಯ ಈಡೇರಿಕೆಗೆ ಹಿಂದಿನಿಂದಲೂ ಶ್ರಮಿಸುತ್ತಾ ಬಂದಿದೆ. ಈ ದೇಸೆಯಲ್ಲಿ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ನವೆಂಬರ್ ತಿಂಗಳಲ್ಲಿ ಭೂಮಿಪೂಜೆ, ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಸ್ಟೇಲ್ ನಿರ್ಮಾಣಕ್ಕೆ ೪ ಅನುದಾನ ಮಂಜೂರು, ಕಾಯಂ ನ್ಯಾಯಾಲಯ ಆರಂಭಕ್ಕೆ ₹೯.೫ ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಟೆಂಡರ್ ಕರೆಯಲು ಸಿದ್ಧತೆಯಲ್ಲಿದೆ. ಹೀಗಾಗಿ ಒಂದೇ ಸೂರಿನಡಿ ತಾಲೂಕಿನ ಎಲ್ಲ ಕಚೇರಿಗಳ ಕಾರ್ಯಾರಂಭಕ್ಕೆ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದೇನೆ ಎಂದರು.
ದೇಶದಲ್ಲಿ ಎಲ್ಲರು ಸಮಾನರು ಎನ್ನುವ ಆಶಯಕ್ಕೆ ಪೂರಕವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಉಚಿತ ಹಾಗೂ ಗ್ಯಾರಂಟಿ ಯೋಜನೆ ಟೀಕಿಸಿದವರು ಇಂದು ಯೋಜನೆ ಸರ್ಕಾರ ನಿಲ್ಲಿಸಲಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ಸರ್ಕಾರ ಯಾವುದೇ ಯೋಜನೆ ನಿಲ್ಲಿಸುವದಿಲ್ಲ ಎಂದರು.ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ತ್ಯಾಗ, ಬಲಿದಾನದ ಮೂಲಕ ಸಿಕ್ಕಿರುವ ಸ್ವಾತಂತ್ರ್ಯ ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪುರಸಭೆ ವಿಪಕ್ಷ ಸದಸ್ಯ ಮುರ್ತುಜಾ ಡಾಲಾಯತ್, ಸದಸ್ಯರಾದ ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್, ಮುಖಂಡರಾದ ಸಿದ್ದಪ್ಪ ಬಂಡಿ, ಶ್ರೀಧರ ಬಿದರಳ್ಳಿ, ಬಸವರಾಜ ಹೂಗಾರ, ಹಸನ ತಟಗಾರ, ಬಿ.ಎಸ್. ಶೀಲವಂತರ, ಉಪನೋಂದಣಾಧಿಕಾರಿ ವಿರೂಪಾಕ್ಷಯ್ಯ ಚೌಕಿಮಠ, ಸಿಪಿಐ ಎಸ್.ಎಸ್.ಬೀಳಗಿ, ಪಿಎಸ್‌ಐ ಸೋಮನಗೌಡ ಗೌಡ್ರ, ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಬಿಇಒ, ತಾಪಂ ಇಒ ಸೇರಿ ವಿವಿಧ ಶಾಲೆಯ ಮುಖ್ಯೋಪಾಧ್ಯಯರು ಹಾಗೂ ಅಧಿಕಾರಿಗಳು ಇದ್ದರು.ಚೆನ್ನಮ್ಮ ವೃತ್ತ: ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ನಡೆದ ಮುಖಂಡ ಕಳಕಪ್ಪ ಸಂಗನಾಳ ೭೮ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದರು. ಮುಖಂಡರಾದ ಶರಣಪ್ಪ ಚಳಗೇರಿ, ಅಪ್ಪು ಮತ್ತಿಕಟ್ಟಿ ಮಾತನಾಡಿದರು.
ಈ ವೇಳೆ ದುರಗಪ್ಪ ಮುಧೋಳ, ಮಹಾಂತೇಶ ಮಳಗಿ, ಕೃಷ್ಣಾ ಗುಗಲೋತ್ತರ, ಯಮನೂರಪ್ಪ ಚಳಗೇರಿ, ಲಕ್ಷ್ಮಣ ಮಾಳೋತ್ತರ, ಎಸ್.ಬಿ. ಯರಕಲ್ ಸೇರಿ ಇತರರು ಇದ್ದರು.ಎಸ್‌ಎಂಭೂಮರಡ್ಡಿ ಪದವಿ ಪೂರ್ವ ಕಾಲೇಜು: ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ೭೮ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಪ್ರಾಚಾರ್ಯ ಜಿ.ಬಿ. ಗುಡಿಮನಿ ನೆರವೇರಿಸಿದರು. ಸಿ.ಎಸ್. ಮೂರಶಿಳ್ಳಿನ, ಎಂ.ವಿ. ನಾಡಗೇರ, ಬಿ.ವಿ. ಮುನವಳ್ಳಿ, ಎ.ಎಸ್. ವಡ್ಡರ, ಎಸ್.ಎಸ್.ವಾಲಿಕಾರ ಇದ್ದರು.
ಅಂಬೇಡ್ಕರ್ ವೃತ್ತ; ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.ಅಂಬೇಡ್ಕರ ಸೇವಾ ಸಮಿತಿ ಅಧ್ಯಕ್ಷ, ಬಸವರಾಜ ಬಂಕದ, ಪುರಸಭೆ ಸದಸ್ಯರಾದ ಕನಕಪ್ಪ ಅರಳಿಗಿಡದ,ರೂಪೇಶ ರಾಠೋಡ ಹಾಗೂ ಅಶೋಕ ಹೊಸಮನಿ,ಉಮೇಶ ರಾಠೋಡ, ಮಹೇಶ ಗಡೇವದರ,ಬುಡ್ಡಪ್ಪ ಮೂಲಿಮನಿ, ದಾನು ರಾಠೋಡ, ಸುರೇಶ ಹೊಸಮನಿ, ಶಿವಪ್ಪ ಚಲವಾದಿ ಸೇರಿ ಇತರರು ಇದ್ದರು.