ಕೋಮು ಸೌಹಾರ್ದತೆಗೆ ಹೆಸರಾದ ಹಾವೇರಿ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪ್ರೇರಣೆಯಿಂದಾಗಿ ಕೋಮು ಘರ್ಷಣೆಗಳು ಹಾಗೂ ಹತ್ಯೆಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ರಾಜ್ಯ ಸರಕಾರ ವೋಟ್ ಬ್ಯಾಂಕ್ಗಾವಗಿ ಒಂದು ಸಮುದಾಯವನ್ನು ಓಲೈಕೆ ಮಾಡಿಕೊಂಡು ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹರಿಹಾಯ್ದರು.
ರಟ್ಟಿಹಳ್ಳಿ: ಕೋಮು ಸೌಹಾರ್ದತೆಗೆ ಹೆಸರಾದ ಹಾವೇರಿ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪ್ರೇರಣೆಯಿಂದಾಗಿ ಕೋಮು ಘರ್ಷಣೆಗಳು ಹಾಗೂ ಹತ್ಯೆಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ರಾಜ್ಯ ಸರಕಾರ ವೋಟ್ ಬ್ಯಾಂಕ್‍ಗಾಗಿ ಒಂದು ಸಮುದಾಯವನ್ನು ಓಲೈಕೆ ಮಾಡಿಕೊಂಡು ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹರಿಹಾಯ್ದರು.
ಪಟ್ಟಣದಲ್ಲಿ ಇತ್ತೀಚೆಗೆ ಹತ್ಯೆಯಾದ ಶಿವಾಜಿರಾವ್ ಬೈರೋಜಿಯವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ದೌರ್ಜನ್ಯಗಳು ಪದೇ ಪದೇ ನಡೆಯುತ್ತಿವೆ ಎಂದರು.ಕಳೆದ ವಾರ ನರೇಗಲ್‍ನಲ್ಲಿ ಕಾರ ಹುಣ್ಣಿಮೆ ದಿನ ಕಾನೂನಿನ ಭಯವಿಲ್ಲದೆ ಕಂದ್ಲಿ, ಕುಡುಗೋಲು ಮಾರಕಾಸ್ತ್ರಗಳಿಂದ ಮಾರಾಣಾಂತಿಕ ಹಲ್ಲೆ ಮಾಸುವ ಮುನ್ನವೇ ರಟ್ಟಿಹಳ್ಳಿ ಪಟ್ಟಣದ ಗೂಡಂಗಡಿ ವ್ಯಾಪಾರಿ ಶಿವಾಜಿರಾವ್ ಅವರನ್ನು ಕೇವಲ ಮೊಟ್ಟೆ ವಿಚಾರವಾಗಿ ₹500 ನೆಪ ಇಟ್ಟುಕೊಂಡು ಕ್ಷುಲ್ಲಕ ಕಾರಣಕ್ಕೆ ಹೊಡೆದು ಕೊಂದಿರುವುದು ಅತ್ಯಂತ ಹೇಯ ಕೃತ್ಯ, ರಾಜ್ಯ ಸರ್ಕಾರ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅದು ವೈಯಕ್ತಿಕ ಗಲಾಟೆ ಎಂದು ಪ್ರಕರಣಕ್ಕೆ ತೇಪೆ ಹಚ್ಚುವಂತ ಷಡ್ಯಂತ್ರ ನಡೆಯುತ್ತಿದೆ. ಹತ್ಯೆಯಾದ ಶಿವಾಜಿರಾವ್ ಮಗ ಬಜರಂಗದಳದ ಕಾರ್ಯಕರ್ತ ಅಂತ ಅವನ ಮೇಲೆ ನಾಲ್ಕೈದು ಬಾರಿ ಹಲ್ಲೆಗಳು ನಡೆದಿವೆ. ಆದರೂ ಸ್ಥಳೀಯ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ಹಿಂದೂಗಳ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಜಿಲ್ಲೆಯಲ್ಲಿ ಅನೇಕ ಕೋಮು ಘರ್ಷಣೆಗಳು ನಡೆದರೂ ಯಾವೊಬ್ಬ ಸಚಿವರಾಗಲಿ, ಶಾಸಕರಾಗಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಧೈರ್ಯ ತುಂಬುವಂತ ಗೋಜಿಗೆ ಹೋಗದ ನರ ಸತ್ತ ಸರ್ಕಾರಕ್ಕೆ ನಾಚಿಕೆಯಾಗಬೇಕು, ಹಾಗಾದರೆ ನಿಮಗೆ ಹಿಂದೂಗಳು ಓಟ್ ಹಾಕಿಲ್ಲವಾ ಎಂದು ಸರಕಾರಕ್ಕೆ ಪ್ರಶ್ನೆ ಮಾಡಿದರು.ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇವಲ ಅಮೆರಿಕ, ರಷ್ಯಾ ಹಾಗೂ ಆರ್.ಎಸ್.ಎಸ್. ಬಗ್ಗೆ ಮಾತನಾಡುತ್ತಾರೆ. ನಿಮಗೇನಾದರೂ ತಾಕತ್ತಿದ್ದರೆ ಯಾರು ಕೋಮು ಸೌಹಾರ್ದತೆಯನ್ನು ಕದಡುತ್ತಿದ್ದಾರೋ ಅಂತವರನ್ನು ಬಂಧಿಸಿ, ಬಿರಿಯಾನಿ ತಿನ್ನಿಸುವುದನ್ನು ಬಿಟ್ಟು ಮುಂದೆ ತಲೆ ಎತ್ತದಂತೆ ಹೆಡೆಮುರಿ ಕಟ್ಟುವಂತ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಪ್ರಾಮಾಣಿಕ ಹಿಂದೂ ಕಾರ್ಯಕರ್ತ, ಗೋ ರಕ್ಷಕ ಪುನೀತ್ ಕೆರಹಳ್ಳಿ ಅವರಿಗೆ ಕೊಲೆ ಬೆದರಿಕೆ ಹಾಕುವಂತವವನನ್ನು ಒದ್ದು ಒಳಗೆ ಹಾಕುವಂತ ಕೆಲಸ ಮಾಡುತ್ತಿಲ್ಲ. ಬದಲಾಗಿ ಯಾವನೋ ಹಾದಿ ಬೀದಿಯಲ್ಲಿ ಓಡಾಡುವಂತವನು ಕಂಪ್ಲೆಟ್ ಕೊಟ್ಟ ಕ್ಷಣಾರ್ಧದಲ್ಲಿ ಸುಳ್ಳು ಮೊಕ್ಕದ್ದಮೆ ಹೂಡಿ ಬಂಧಿಸಿದ್ದಾರೆ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರಕಾರ ಪದೇ ಪದೇ ಹಿಂದೂ ಕಾರ್ಯಕರ್ತರನ್ನು ಟಾರ್ಗೇಟ್ ಮಾಡಿ ಅಲ್ಪ ಸಂಖ್ಯಾಂತರ ಓಲೈಕೆ ರಾಜಕಾರಣದ ಪರಿಣಾಮ ಮತೀಯ ಶಕ್ತಿಗಳಿಗೆ ಧೈರ್ಯ ಬಂದಿದೆ ಎಂದರು.ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ, ನಿಮ್ಮ ಗ್ಯಾರಂಟಿ ಭ್ರಮೆಯಲ್ಲಿ ಇದ್ದೀರಿ, ಮುಂಬರುವ ದಿನಗಳಲ್ಲಿ ನಿಮಗೆ ತಕ್ಕಪಾಠ ಕಲಿಸಲಿದ್ದಾರೆ, ಮುಖ್ಯಮಂತ್ರಿಗಳು ನಿಮ್ಮ ಭಂಡಾಟ, ಬೂಟಾಟಿಕೆಗಳನ್ನು ಬಿಟ್ಟು ಹಿಂದೂಗಳ ರಕ್ಷಣೆ ಮುಂದಾಗಬೇಕು ಹಾಗೂ ಹತ್ಯೆಯಾದ ಶಿವಾಜಿರಾವ್ ಮಗಳಿಗೆ ಸರಕಾರಿ ನೌಕರಿ ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಂಡಳ ಅಧ್ಯಕ್ಷ ದೇವರಾಜ ನಾಗಣ್ಣನವರ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಪಾಲಾಕ್ಷಗೌಡ ಪಾಟೀಲ್, ಲಿಂಗರಾಜ ಚಪ್ಪರಹಳ್ಳಿ, ಜೆಪಿ ಪ್ರಕಾಶ, ಆರ್.ಎನ್. ಗಂಗೋಳ ಹಾಗೂ ಪಕ್ಷದ ಮುಖಂಡರು ಇದ್ದರು.