ಸಾರಾಂಶ
ಹೊಸಕೋಟೆ: ತಾವರೆಕೆರೆ ಗ್ರಾಮದಲ್ಲಿ ಅನೇಕ ವರ್ಷಗಳ ಬೇಡಿಕೆಯಾಗಿದ್ದ ಸಮುದಾಯ ಭವನವನ್ನು ತಮ್ಮ ಅವಧಿಯಲ್ಲಿ ನಿರ್ಮಿಸಿ ಉದ್ಘಾಟನೆ ಮಾಡಲಾಗಿದ್ದು ಬಡವರಿಗೆ ಶುಭ ಸಮಾರಂಭ ಮಾಡಿಕೊಳ್ಳಲು ಅನುಕೂಲ ಆಗಲಿದೆ ಎಂದು ಗ್ರಾಪಂ ಅಧ್ಯಕ್ಷ ರಮೇಶ್ ತಿಳಿಸಿದರು.
ಹೊಸಕೋಟೆ: ತಾವರೆಕೆರೆ ಗ್ರಾಮದಲ್ಲಿ ಅನೇಕ ವರ್ಷಗಳ ಬೇಡಿಕೆಯಾಗಿದ್ದ ಸಮುದಾಯ ಭವನವನ್ನು ತಮ್ಮ ಅವಧಿಯಲ್ಲಿ ನಿರ್ಮಿಸಿ ಉದ್ಘಾಟನೆ ಮಾಡಲಾಗಿದ್ದು ಬಡವರಿಗೆ ಶುಭ ಸಮಾರಂಭ ಮಾಡಿಕೊಳ್ಳಲು ಅನುಕೂಲ ಆಗಲಿದೆ ಎಂದು ಗ್ರಾಪಂ ಅಧ್ಯಕ್ಷ ರಮೇಶ್ ತಿಳಿಸಿದರು.
ನಂದಗುಡಿ ಹೋಬಳಿ ತಾವರೆಕೆರೆ ಗ್ರಾಮದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಆವರಣದಲ್ಲಿ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಮದುವೆ, ನಾಮಕರಣ, ನಿಶ್ಚಿತಾರ್ಥ ಇತರೆ ಸಮಾರಂಭಗಳು ನಡೆಸಲು ಬಡವರಿಗೆ ಸಮುದಾಯ ಭವನ ನಿರ್ಮಿಸಿಕೊಡಲಾಗಿದೆ. ದುಬಾರಿ ವೆಚ್ಚದ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡಲು ಬಡವರಿಗೆ ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡು ನಮ್ಮ ಪಂಚಾಯಿತಿಯ ಶೇ.೨೫ರಷ್ಟು ಅನುದಾನದಲ್ಲಿ ೨೦ ಲಕ್ಷ ರು. ವೆಚ್ಚದಲ್ಲಿ ಸುಂದರವಾದ ಅಡುಗೆ ಮನೆ ಮೇಲ್ಭಾಗದಲ್ಲಿ ಸಮಾರಂಭದ ಕಾರ್ಯಗಳನ್ನು ನಡೆಸಲು ವಿಶಾಲವಾದ ಹಾಲ್ ನಿರ್ಮಿಸಿದ್ದು. ನೀರಿನ ಜತೆಗೆ ಎಲ್ಲಾ ಮೂಲಸೌಕರ್ಯ ಇದ್ದು. ಸಮಾರಂಭಗಳು ಮಾಡುವಾಗ ಜನತೆ ಪ್ಲಾಸ್ಟಿಕ್ ಮುಕ್ತಗೊಳಿಸಿ ಸ್ವಚ್ಛವಾಗಿ ನೋಡಿಕೊಳ್ಳಬೇಕು. ಇದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.ಪಿಡಿಒ ಮುನಿಗಂಗಯ್ಯ, ಉಪಾಧ್ಯಕ್ಷ ಅಸ್ಮಾತಾಜ್ ಜಿಯಾಉಲ್ಲಾ, ಗ್ರಾಪಂ ಮಾಜಿ ಅಧ್ಯಕ್ಷ ದಯಾನಂದ್ ಬಾಬು, ಬಸವಪ್ರಕಾಶ್, ಆರ್.ರವಿಕುಮಾರ್, ಎಸ್‌ಎಚ್‌ಟಿ ಮಂಜುನಾಥ್, ಪಿಡಿಒ ಮುನಿಗಂಗಯ್ಯ, ಸದಸ್ಯರಾದ ಪ್ರಿಯಾಂಕ ಡಿ.ರಮೇಶ್, ಪವಿತ್ರ, ಅಶ್ವಿನಿ, ಮಾಜಿ ಉಪಾಧ್ಯಕ್ಷ ಎಸ್.ಸುಧಾಕರ್, ಮಾಜಿ ಸದಸ್ಯ ದಂಡಪ್ಪ ಎಸ್‌ಡಿಎ ಮೀನಾಕ್ಷಿ, ಮಂಜುಳ, ಕರವಸೂಲಿಗಾರ ರಾಜಣ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.