ಸಾರಾಂಶ
ಮಿಷನ್ ಕಾಂಪೌಂಡ್‌ನ ಯುನೈಟೆಡ್ ಬಾಸೆಲ್ ಮಿಷನ್ ಚರ್ಚ್ ಹಾಲ್‌ನಲ್ಲಿ ಶನಿವಾರ 2000ನೇ ಬ್ಯಾಚಿನ ಸಿವಿಲ್ ಮತ್ತು ಡಿಎಆರ್ ಸಿಬ್ಬದಿಗಳು ಪೊಲೀಸ್ ಇಲಾಖೆಯಲ್ಲಿ 25ನೇ ವರ್ಷ ಪೂರೈಸಿದ ರಜತ ಮಹೋತ್ಸವ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಆಸರೆ, ಸ್ಪಂದನೆ, ಮಕ್ಕಳ ಸಹಾಯವಾಣಿಯ ಮೂಲಕ ಪೊಲೀಸರು ಹಾಗೂ ಸಾರ್ವಜನಿಕರು ಒಂದಾಗಿದ್ದಾರೆ. ಇದು ರಾಜ್ಯಕ್ಕೆ ಮಾದರಿಯಾಗಿದೆ. ಪೊಲೀಸರು ಶ್ರದ್ಧೆ, ಪ್ರಾಮಾಣಿಕತೆಯನ್ನು ಮುಂದುವರಿಸಬೇಕು ಎಂದು ಸಿಐಡಿ ಡಿಜಿಪಿ ಡಾ ಎಂ. ಎ. ಸಲೀಂ ಹೇಳಿದರು.ಮಿಷನ್ ಕಾಂಪೌಂಡ್‌ನ ಯುನೈಟೆಡ್ ಬಾಸೆಲ್ ಮಿಷನ್ ಚರ್ಚ್ ಹಾಲ್‌ನಲ್ಲಿ ಶನಿವಾರ 2000ನೇ ಬ್ಯಾಚಿನ ಸಿವಿಲ್ ಮತ್ತು ಡಿಎಆರ್ ಸಿಬ್ಬದಿಗಳು ಪೊಲೀಸ್ ಇಲಾಖೆಯಲ್ಲಿ 25ನೇ ವರ್ಷ ಪೂರೈಸಿದ ರಜತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪೊಲೀಸರ ಮೂಲಕ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ನೆಲೆಗೊಳ್ಳಬೇಕು. ಈ ನಿಟ್ಟಿನಲ್ಲಿ ಉಡುಪಿ ಪೊಲೀಸರ ಬಗ್ಗೆ ಹೆಮ್ಮೆಯಿದೆ. ಉಡುಪಿಯಲ್ಲಿ ಸಮುದಾಯ ಪೊಲೀಸ್ ಭದ್ರವಾಗಿದೆ. ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಇಲ್ಲದಿದ್ದರೆ ಬೆಳವಣಿಗೆ ಸಾಧ್ಯವಿಲ್ಲ. ಸಮಾಜ ಶಾಂತಿಯುತವಾಗಿರಲು ಪೊಲೀಸರ ಪಾತ್ರವೂ ಬಹುಮುಖ್ಯವಾಗುತ್ತದೆ ಎಂದರು.ಜಿಲ್ಲಾಧಿಕಾರಿ ಡಾ ಕೆ.ವಿದ್ಯಾಕುಮಾರಿ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ಸಿಎಸ್‌ಪಿ ಪೊಲೀಸ್ ಅಧೀಕ್ಷಕ ಮಿಥುನ್ ಎಚ್.ಎನ್., ಕೆಎಸ್‌ಪಿಎಸ್ ಎಸ್‌ಪಿ ಎಂ.ಕುಮಾರ್, ಯುಬಿಎಂಸಿ ಚರ್ಚ್‌ನ ಟ್ರಸ್ಟಿ ಸೈಮನ್, ಜಿ.ಪಂ.ಸಿಇಓ ಪ್ರತೀಕ್ ಬಾಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಸಿದ್ಧಲಿಂಗಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ ಎಂ.ಎ.ಸಲೀಂ ಹಾಗೂ ಎಂ.ಕುಮಾರ್ ಅವರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಸ್ವಾಗತಿಸಿದರು. ಶಶಿಧರ ಶೆಟ್ಟಿ ಹಾಗೂ ಮಧುಸೂದನ ಪ್ರಸ್ತಾವನೆಗೈದರು. ಮನಮೋಹನ್ ನಿರೂಪಿಸಿದರು. ಸಭಾಕಾರ್ಯಕ್ರಮಕ್ಕೂ ಮುನ್ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.