ಆನೆದಾಳಿಯಿಂದ ಮೃತಪಟ್ಟ ಕೇತೇಗೌಡ ಕುಟುಂಬಕ್ಕೆ ಪರಿಹಾರ ವಿತರಣೆ

| Published : Nov 20 2025, 12:30 AM IST

ಸಾರಾಂಶ

ಕಾಡಾನೆ ದಾಳಿಯಿಂದ ಮೃತಪಟ್ಟಿರುವ ಕುಟುಂಬದವರಿಗೆ ಧೈರ್ಯ ತುಂಬಿದ್ದೇವೆ. ಸರ್ಕಾರದ ವತಿಯಿಂದ 5 ಲಕ್ಷ ಪರಿಹಾರ ಚೆಕ್ ಮೊದಲ ಹಂತವಾಗಿ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಹನೂರು

ಆನೆ ದಾಳಿಯಿಂದ ಮೃತಪಟ್ಟ ಗೊಂಬೆಗಲ್ಲು ಗ್ರಾಮದ ಆದಿವಾಸಿ ಶಿಕಾರಿ ಕೇತೇಗೌಡ ಕುಟುಂಬಕ್ಕೆ ಬಿ.ಆರ್.ಟಿ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವಿಭಾಗದ ಎಸಿಎಫ್‌ ಅಕ್ಷಯ್ ಅವರು ಐದು ಲಕ್ಷ ರುಪಾಯಿ ಪರಿಹಾರದ ಚೆಕ್ ವಿತರಣೆ ಮಾಡಿದರು.

ಹನೂರು ತಾಲೂಕಿನ ಗೊಂಬೆಗಲ್ಲು ಗ್ರಾಮದ ಸೋಲಿಗ ಸಮುದಾಯದ ಹಿರಿಯ ಮುಖಂಡ ಶಿಕಾರಿ ಕೇತೇಗೌಡ ಆನೆ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೊದಲ ಹಂತವಾಗಿ ಕುಟುಂಬದವರಿಗೆ 5 ಲಕ್ಷ ರುಪಾಯಿ ಪರಿಹಾರದ ಚೆಕ್ ವಿತರಣೆ ಮಾಡಿ ನಂತರ ಮಾತನಾಡಿದ ಎಸಿಎಫ್ ಅಕ್ಷಯ್ ಅವರು, ಕಾಡಾನೆ ದಾಳಿಯಿಂದ ಮೃತಪಟ್ಟಿರುವ ಕುಟುಂಬದವರಿಗೆ ಧೈರ್ಯ ತುಂಬಿದ್ದೇವೆ. ಸರ್ಕಾರದ ವತಿಯಿಂದ 5 ಲಕ್ಷ ಪರಿಹಾರ ಚೆಕ್ ಮೊದಲ ಹಂತವಾಗಿ ನೀಡಲಾಗಿದೆ. ಮುಂದಿನ ದಿನದಲ್ಲಿ ಉಳಿದ ಪರಿಹಾರದ ಹಣವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಪ್ರಮೋದ್, ಹನೂರು ಇನ್ಸ್ಪೆಕ್ಟರ್ ಆನಂದ್ ಕುಮಾರ್ ಮತ್ತು ಮೃತರ ಕುಟುಂಬದವರು, ಗ್ರಾಮಸ್ಥರು ಉಪಸ್ಥಿತರಿದ್ದರು.

-----‘ಗೊಂಬೆಗಲ್ಲು ಗ್ರಾಮದ ಆದಿವಾಸಿ ಸಮುದಾಯದ ಹಿರಿಯ ಮುಖಂಡ ಶಿಕಾರಿ ಕೇತೇಗೌಡ ರವರು ಕಾಡಾನೆ ದಾಳಿಯಿಂದ ಮೃತಪಟ್ಟಿರುವ ವಿಚಾರ ತಿಳಿದು ತಕ್ಷಣ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೂ ಮಾತನಾಡಿ ಮತ್ತು ಕುಟುಂಬದವರಿಗೂ ಸಹ ಧೈರ್ಯ ತುಂಬಿದ್ದೇನೆ. ಈಗಾಗಲೇ ಸರ್ಕಾರದ ವತಿಯಿಂದ 5 ಲಕ್ಷ ರುಪಾಯಿ ಪರಿಹಾರದ ಚೆಕ್ ನೀಡಲು ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಪರಿಹಾರದ ಹಣವನ್ನು ಆದಷ್ಟು ಬೇಗ ಕೊಡಿಸಲು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅರಣ್ಯ ಅಂಚಿನ ಭಾಗಗಳಲ್ಲಿ ವಾಸಿಸುವ ನಿವಾಸಿಗಳು ಕಚ್ಚಾ ರಸ್ತೆಗಳಲ್ಲಿ ಓಡಾಡುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಓಡಾಡಬೇಕು. ಕಾಡುಪ್ರಾಣಿಗಳು ಇಲ್ಲದಿರುವುದನ್ನು ಮನದಟ್ಟು ಮಾಡಿಕೊಂಡು ಓಡಾಡಬೇಕು. ಇಂತಹ ಘಟನೆಗಳು ಜರುಗದಂತೆ ಅರಣ್ಯಾಧಿಕಾರಿಗಳು ಕಾಡಂಚಿನ ಗ್ರಾಮಗಳ ಬಳಿ ಎಚ್ಚರಿಕೆ ವಹಿಸಬೇಕು.’

ಎಂ.ಆರ್. ಮಂಜುನಾಥ್, ಶಾಸಕ, ಹನೂರು.