ಜ್ಞಾನದಲ್ಲಿ ನಮ್ಮ ಹಳ್ಳಿಗಾಡಿನ ಮಕ್ಕಳು ಯಾರಿಗೂ ಕೂಡ ಕಡಿಮೆ ಇಲ್ಲ. ಗ್ರಾಮಿಣ ಪ್ರದೇಶದ ಶಾಲೆಯಲ್ಲಿ ಮಕ್ಕಳಿಗೆ ತಂತ್ರಜ್ಞಾನ, ತಂತ್ರಾಂಶ ಜ್ಞಾನ ಕಲಿಸಬೇಕು ಅಂದರೆ ಮಾತ್ರ ಗ್ರಾಮೀಣ ಮಕ್ಕಳು ತೀವ್ರವಾದ ಪೈಪೋಟಿ ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸವಣೂರು: ಜ್ಞಾನದಲ್ಲಿ ನಮ್ಮ ಹಳ್ಳಿಗಾಡಿನ ಮಕ್ಕಳು ಯಾರಿಗೂ ಕೂಡ ಕಡಿಮೆ ಇಲ್ಲ. ಗ್ರಾಮಿಣ ಪ್ರದೇಶದ ಶಾಲೆಯಲ್ಲಿ ಮಕ್ಕಳಿಗೆ ತಂತ್ರಜ್ಞಾನ, ತಂತ್ರಾಂಶ ಜ್ಞಾನ ಕಲಿಸಬೇಕು ಅಂದರೆ ಮಾತ್ರ ಗ್ರಾಮೀಣ ಮಕ್ಕಳು ತೀವ್ರವಾದ ಪೈಪೋಟಿ ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಕಳಸೂರ ಗ್ರಾಮದ ಶ್ರೀ ಎಸ್.ಎಚ್. ಪಾಟೀಲ ಸರ್ಕಾರಿ ಪ್ರೌಢಶಾಲೆಯ ರಜತ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಒಂದು ಕಾಲ ಇತ್ತು ಯಾರ ಬಳಿ ಭೂಮಿ ಇದೆ ಅವರು ಜಗತ್ತನ್ನು ಆಳುತ್ತಿದ್ದರು. ಅದಕ್ಕೆ ರಾಜರು ಭೂಮಿಗಾಗಿ ಇನ್ನೊಂದು ರಾಜ್ಯದ ಮೇಲೆ ಯುದ್ಧ ಮಾಡುತ್ತಿದ್ದರು. ಆದರೆ, 21ನೇ ಶತಮಾನ ಯಾರ ಬಳಿ ಜ್ಞಾನ ಇದೆ ಅವರು ಜಗತ್ತು ಆಳುತ್ತಾರೆ. ಜ್ಞಾನದಲ್ಲಿ ನಮ್ಮ ಹಳ್ಳಿಗಾಡಿನ ಮಕ್ಕಳು ಯಾರಿಗೂ ಕೂಡ ಕಡಿಮೆ ಇಲ್ಲ. ನಮ್ಮ ಮಕ್ಕಳು ಯಾರಿಗೂ ಕೂಡ ಕಡಿಮೆ ಇಲ್ಲ. ಆದರೆ, ಇಲ್ಲಿ ವ್ಯವಸ್ಥೆ ನಮ್ಮ ಕೈಯಲ್ಲಿ ಇಲ್ಲ. ಇವತ್ತು ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ಸಂಸ್ಥೆಗಳು ಮೆಡಿಕಲ್, ಎಂಜಿನಿಯರಿಂಗ್ ಇರಬಹುದು. ಐಟಿ ಬಿಟಿ ಯಾವುದೇ ಇರಬಹುದು ಎಲ್ಲವೂ ಅಂತಾರಾಷ್ಟ್ರೀಯ ಮಟ್ಡದಲ್ಲಿದೆ. ಆದ್ದರಿಂದ ಭಾರತ ತಂತ್ರಜ್ಞಾನದಿಂದ ಬೆಳೆಯಲು ಕಾರಣವಾಗಿದೆ. ಜ್ಞಾನ ಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನ ತಂತ್ರಾಂಶ ಜ್ಞಾನದಿಂದ ಕೃತಕ ಬುದ್ಧಿಮತ್ತೆ. ಮನುಷ್ಯನ ಅರ್ಧ ಕೆಲಸವನ್ನು ಎಐ ಮಾಡುತ್ತದೆ. ಯಾವುದೇ ಪ್ರಶ್ನೆ ಕೇಳಿದರೂ ಎಐ ಉತ್ತರ ಕೊಡುತ್ತದೆ. ಮೊಬೈಲ್‌ನಲ್ಲಿ ಚಾಟ್ ಜಪಿಟಿ ಅಂತ ಬಂದಿದೆ, ಅದನ್ನು ನೋಡಿ ಕಲಿತು ನೀವೆ ಶಿಕ್ಷಕರಿಗೆ ಹೇಳುತ್ತಿರಿ, ನಮ್ಮ ಮಕ್ಕಳು ನಮಗಿಂತ ವೇಗವಾಗಿದ್ದಾರೆ. ಅಷ್ಟು ವೇಗವಾಗಿ ವಿಜ್ಞಾನ ಬೆಳೆಯುತ್ತದೆ. ಗ್ರಾಮಿಣ ಪ್ರದೇಶದ ಶಾಲೆಯಲ್ಲಿ ಮಕ್ಕಳಿಗೆ ತಂತ್ರಾಂಶ, ತಂತ್ರಜ್ಞಾನ ಕಲಿಸಬೇಕು ಅಂದರೆ ಮಾತ್ರ ತೀವ್ರವಾದ ಪೈಪೋಟಿ ಮಾಡಲು ಸಾಧ್ಯ ಎಂದು ಹೇಳಿದರು.
ಬೇರು ಮರೆಯಬಾರದುಪಾಟೀಲರು ಈ ಸಂಸ್ಥೆಯನ್ನು ಪ್ರಿತಿಯಿಂದ ಬೆಳೆಸಿದ್ದಾರೆ. ಇದರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ನಮ್ಮ ಯಶಸ್ಸಿನ ಬಗ್ಗೆ ಬಹಳ ಗರ್ವ ಇರಬಾರದು. ನನ್ನ ಯಶಸ್ಸಿನಿಂದ ದೀನ ದಲಿತರಿಗೆ ಒಳ್ಳೆಯದಾದರೆ ಅದು ಸಾಧನೆ ಅಂತಹ ಸಾಧನೆ ಮಾಡಲು ಈ ಸಂಸ್ಥೆ ನಿಮಗೆ ಅವಕಾಶ ಕೊಟ್ಟಿದೆ. ಈ ಸಂಸ್ಥೆ ಸರಸ್ವತಿಯ ವಾಹನ ಪರಮಹಂಸ. ಅದು ಅತಿ ಎತ್ತರಕ್ಕೆ ಹಾರುತ್ತದೆ. ಕೈಲಾಸ ಮಾನಸ ಸರೋವರಕ್ಕೆ ಹೋದರೆ ಅಲ್ಲಿ ಪರಮಹಂಸ ಇರುತ್ತವೆ. ಹಿಮಾಲಯದ ಎತ್ತರಕ್ಕೆ ನಿಮ್ಮ ಸಾಧನೆ ಆಗಬೇಕು. ಆಗ ಈ ಸಂಸ್ಥೆ ಮರೆಯಬಾರದು ಯಾವಾಗಲೂ ಬೇರು ಮರೆಯಬಾರದು. ವಾಪಸ್ ಈ ಸಂಸ್ಥೆಗೆ ಕೊಡುವ ಕೆಲಸ ಮಾಡಿ. ಆಗ ಸಂಸ್ಥೆ ಬೆಳೆಯುತ್ತದೆ. ಎಲ್ಲರನ್ನು ನೋಡಿ ಬಹಳ ಸಮತೋಷವಾಯಿತು. ಸಂಸ್ಥೆಯ ಹೆಸರನ್ನು ಎತ್ತರಕೆ ಬರುವಂತೆ ಮಾಡಿ ಆಗ ಸಂಸ್ಥೆಯವರಿಗೂ ಖುಷಿಯಾಗುತ್ತದೆ ಎಂದು ಹೇಳಿದರು.