ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿ

| Published : Mar 06 2024, 02:20 AM IST

ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಇಂದಿನ ಯಾಂತ್ರಿಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ತುಂಬಾ ಸಹಕಾರಿಯಾಗಲಿವೆ ಎಂದು ವಿಶ್ವಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ವಿದ್ಯಾರ್ಥಿಗಳಿಗೆ ಇಂದಿನ ಯಾಂತ್ರಿಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ತುಂಬಾ ಸಹಕಾರಿಯಾಗಲಿವೆ ಎಂದು ವಿಶ್ವಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.

ಪಟ್ಟಣದ ವಿಶ್ವಗುರು ಶಿಕ್ಷಣ ಸಂಸ್ಥೆಯ ಮಹಾದೇವಮ್ಮ ಪಾಟೀಲ್ ಮೆಮೊರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತವಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ್ ಕರದಾಳ ವಿತರಿಸಿ ಮಾತನಾಡಿದ ಅವರು ನಮ್ಮ ಸಂಸ್ಥೆಯ ವತಿಯಿಂದ ಕಳೆದ ಮೂರು ವರ್ಷಗಳಿಂದ ತಾಲೂಕಿನ ಮಕ್ಕಳಲ್ಲಿ ಸ್ಪರ್ಧಾತ್ಮಕ ಆಸಕ್ತಿಯನ್ನು ಹೆಚ್ಚು ಮಾಡಲು ಇಂತಹ ಕಾರ್ಯಕ್ರಮವನ್ನು ಇಟ್ಟುಕೊಂಡು ಅನುಕೂಲ ಮಾಡಿಕೊಡಲಾಗಿದೆ ಇಲ್ಲಿ ಗೆದ್ದವರು ಅಷ್ಟೆ ಜಾಣರಲ್ಲ ಇದು ನಿಮ್ಮ ಮುಂದಿನ ಪರೀಕ್ಷೆಗಳಿಗೆ ಅನುಕೂಲಕರವಾಗಲಿ ಎನ್ನುವದೇ ನಮ್ಮ ಆಶಯ. ಸೊತವರು ನಿರಾಶರಾಗದಿರಿ ಎಂದು ಕಿವಿಮಾಡತು ಹೇಳಿದರು.

ಪ್ರಾಚಾರ್ಯ ಸೊಮಶೇಖರ ಕಲಶೆಟ್ಟಿ ಮಾತನಾಡಿ ಇಂದು ಒಟ್ಟು ೨೦ ಫ್ರೌಡಶಾಲೆಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದ್ದವು. ರಸಪ್ರಶ್ನೆ ಕಾರ್ಯಕ್ರಮಕ್ಕೆ ಕೊನೆಯ ಸುತ್ತಿಗೆ ೫ ಶಾಲೆಗಳಾದ ಆದರ್ಶ ವಿದ್ಯಾಲಯ, ನಾಗಾವಿ ಕ್ಯಾಂಪಸ್, ವಿದ್ಯಾನಿಕೇತನ ಶಾಲೆ, ಸರ್ಕಾರಿ ಫ್ರೌಡ ಶಾಲೆ ಭೀಮನಹಳ್ಳಿ, ಸಚ್ಚಿದಾನಂದ ಶಾಲೆ ರಾವುರ ಮತ್ತು ಸರ್ಕಾರಿ ಫ್ರೌಡಶಾಲೆ ಅಲ್ಲೂರ ಇದ್ದವು. ಕೊನೆ ಸುತ್ತಿನವರೆಗೂ ತೀವ್ರ ಕುತೂಹಲ ರೊಮಾಂಚನ ಉಂಟುಮಾಡಿದ ರಸಪ್ರಶ್ನೆಯಲ್ಲಿ ಸರ್ಕಾರಿ ಫ್ರೌಡ ಶಾಲೆ ಭೀಮನಹಳ್ಳಿ ಪ್ರಥಮ, ಸಚ್ಚಿದಾನಂದ ಫ್ರೌಡಶಾಲೆ ದ್ವೀತಿಯ ಮತ್ತು ಸರ್ಕಾರಿ ಫ್ರೌಡಶಾಲೆ ಅಲ್ಲೂರ(ಬಿ) ವಿದ್ಯಾರ್ಥಿಗಳು ತೃತೀಯ ಸ್ಥಾನದಲ್ಲಿ ವಿಜಯಶಾಲಿಯಾದರು ಎಂದು ತಿಳಿಸಿದರು.

ಮಹೇಶ ಭಾವಿಕಟ್ಟಿ, ಸೀಮಾ ಘಾವರಿಯ ಸಂಸ್ಥೆಯ ಶಿವಕುಮಾರ ಘಾವರಿಯ ಮಾತನಾಡಿದರು. ಶಿಕ್ಷಕಿ ಕವಿತಾ ಬಸನಗೌಡ ಸ್ವಾಗತಿಸಿರು. ಶಿಕ್ಷಕಿ ಬನ್ನಮ್ಮ ಜಗನಾಥರೆಡ್ಡಿ ನಿರೂಪಿಸಿದರು. ಬಸವರಾಜ ವಂದಿಸಿದರು.