ಸಾರಾಂಶ
ಪಠ್ಯೇತರ ವಿಚಾರ ಕುರಿತು ವಿವಿಧ ಶಾಲಾ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಕಾರ್ಯಕ್ರಮ ಸಂಘಟನೆ ಹೆಚ್ಚು ಉಪಯುಕ್ತ ವಾಗುತ್ತದೆ ಎಂದು ಕರಕುಚ್ಚಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಮ್ಮ ಶಾಲೆ ನಮ್ಮ ಟ್ರಸ್ಟ್ ಅಧ್ಯಕ್ಷ ಎನ್.ವಿ.ಅರುಣ್ ಕುಮಾರ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ತರೀಕೆರೆ
ಪಠ್ಯೇತರ ವಿಚಾರ ಕುರಿತು ವಿವಿಧ ಶಾಲಾ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಕಾರ್ಯಕ್ರಮ ಸಂಘಟನೆ ಹೆಚ್ಚು ಉಪಯುಕ್ತ ವಾಗುತ್ತದೆ ಎಂದು ಕರಕುಚ್ಚಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಮ್ಮ ಶಾಲೆ ನಮ್ಮ ಟ್ರಸ್ಟ್ ಅಧ್ಯಕ್ಷ ಎನ್.ವಿ.ಅರುಣ್ ಕುಮಾರ್ ಹೇಳಿದ್ದಾರೆ.ಕರಕುಚ್ಚಿ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಿಂದ ಶಾಲೆಯಲ್ಲಿ ಏರ್ಪಡಿಸಿದ್ದ ಗ್ರಾಪಂ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಫರ್ಧೆ ಮತ್ತು ನೂತನ ವರ್ಷದ ಶಾಲಾ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಇದು ಮಕ್ಕಳಲ್ಲಿ ಸ್ಪರ್ಧಾತ್ಮಕ ದೃಷ್ಠಿಕೋನ ಮತ್ತು ಅವರ ತಿಳುವಳಿಕೆ ಹೆಚ್ಚಿಸುತ್ತದೆ. 2024ರ ಹೊಸ ವರ್ಷದ ಹೊಸ್ತಿಲಿನಲ್ಲಿರುವ ಈ ಸಮಯದಲ್ಲಿ ಕರಕುಚ್ಚಿ ಗ್ರಾಮದ ಶಾಲೆಯಲ್ಲಿ ವಿಶೇಷ ಪಠ್ಯ ಚಟುವಟಿಕೆ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಗಮನ ಸೆಳೆದಿದೆ. ಅಕ್ಷರ ಫೌಂಡೆಷನ್‌ನಿಂದ ಕರಕುಚ್ಚಿ ಗ್ರಾಪಂ ಮಟ್ಟದ ಶಾಲೆಗಳ ವಿದ್ಯಾರ್ಥಿಗಳಿಗೆ ಗಣಿತ ಸ್ಫರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಫರ್ಧಾತ್ಮಕ ಚಟುವಟಿಕೆಯಲ್ಲಿ ಕರಕುಚ್ಚಿ-ಎ ಕಾಲೋನಿ, ಬಿ-ಕಾಲೋನಿ ಚೌಡಾಭೋವಿ ಕಾಲೋನಿ ಶಾಲೆ ಮತ್ತು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 90 ಜನ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸ ತಂದಿದೆ. ಶಾಲೆಯ ಸುಂದರ ಫೋಟೊಗಳು ಶಾಲೆಯ ವಿವಿಧ ಸಾಧನೆಗಳ ಘಟನಾವಳಿಗಳ ಭಾವಚಿತ್ರಗಳೊಂದಿಗೆ ತಯಾರಿಸಲಾದ ಶಾಲಾ ಕ್ಯಾಲೆಂಡರ್ ವಿಶಿಷ್ಠವಾಗಿ ಮೂಡಿಬಂದಿದೆ. ಶಾಲೆ ಅಭಿವೃದ್ಧಿ ಘೋಷವಾಕ್ಯಗಳು ಸೇರಿದಂತೆ ವೈವಿಧ್ಯಮಯವಾದ ಮಾಹಿತಿಯನ್ನು ಈ ಕ್ಯಾಲೆಂಡರ್ ಒಳಗೊಂಡಿದೆ. ಅನೇಕ ಗಣ್ಯರ ಆರ್ಥಿಕ ಸಹಕಾರದೊಂದಿಗೆ ಕ್ಯಾಲೆಂಡರ್ ಮುದ್ರಿಸಲಾಗಿದೆ ಎಂದು ಹೇಳಿದರು.ಗಣಿತ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕರಕುಚ್ಚಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಕುಮುದಾ ಕೆ. ಬಿ ಗಣಿತ ಕಲಿಕಾ ಆಂದೋಲನದ ಮಹತ್ವ ತಿಳಿಸಿದರು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷೆ ಪುಷ್ಪಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅನೇಕ ಗಣ್ಯರು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಹಳೆಯ ವಿದ್ಯಾರ್ಥಿಗಳಾದ ಸಂಜನಾ ಕೆ. ಎಸ್ .ಸುಮಲತಾ ಕೆ. ಎಚ್. ಸಹನಾ ಎಸ್ ಕುಮಾರ್ , ಅರುಣ್ ಕುಮಾರ್ ಎನ್. ವಿ ಹಾಗೂ ರಂಗಶಿಕ್ಷಕರಾದ ಮಹಾಬಲೇಶ್ವರ ಬಿ. ಕೆ ಅವರಿಗೆ ಪ್ರಶಂಶನಾ ಪತ್ರ ನೀಡಿ ಅಭಿನಂದಿಸಲಾಯಿತು.
ಗ್ರಾಪಂ ಉಪಾಧ್ಯಕ್ಷರಾದ ರೇಖಾ ನವೀನ್, ಎಚ್. ರಾಮನಾಯ್ಕ, ಕೆ. ಜೆ . ಮೋಹನ್, ರಕ್ಷಿತ್, ಕೆ. ಆರ್ . ಅಣ್ಣಪ್ಪ ಕೆ. ಎಚ್ .ಶಿವಕುಮಾರ್ , ಮುಖ್ಯಶಿಕ್ಷಕ ದೇವೇಂದ್ರನಾಯ್ಕ. ಸಹಶಿಕ್ಷಕರಾದ ಪವಿತ್ರ ಎಚ್. ಎಸ್, ಶಿವರಾಜ್ ಎಲ್, ಮಂಜುನಾಥ್, ತಿಮ್ಮಯ್ಯ, ಲೋಕೇಶ್, ಅಂಬಿಕಾ , ಶಿವಪ್ಪ ಭಾಗವಹಿಸಿದ್ದರು,.30ಕೆಟಿಆರ್.ಕೆ.9
ತರೀಕೆರೆ ಸಮೀಪದ ಕರಕುಚ್ಚಿ ಗ್ರಾಮದಲ್ಲಿ ಸ.ಹಿ.ಮಾ.ಪ್ರಾ.ಶಾಲೆಯಲ್ಲಿ ಏರ್ಪಡಿಸಿದ್ದ ಗ್ರಾಪಂಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯಲ್ಲಿ ನಮ್ಮ ಶಾಲೆ ನಮ್ಮ ಟ್ರಸ್ಟ್ ಅಧ್ಯಕ್ಷ ಎನ್.ವಿ.ಅರುಣ್ ಕುಮಾರ್ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ನೆರವೇರಿಸಿದರು. ಗ್ರಾಪಂ ಉಪಾಧ್ಯಕ್ಷ ರೇಖಾ ನವೀನ್ ,ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷೆ ಪುಷ್ಪಾ ಮತ್ತಿತರರು ಇದ್ದರು.