ಸರ್ಕಾರಿ ಆಸ್ತಿಗಳಿಗೆ ಇ-ಸ್ವತ್ತು ಇದೆಯಾ ಲೋಕಾಯುಕ್ತರಿಗೆ ದೂರುದಾರರ ಪ್ರಶ್ನೆ?

| Published : Oct 17 2024, 12:09 AM IST / Updated: Oct 17 2024, 12:10 AM IST

ಸರ್ಕಾರಿ ಆಸ್ತಿಗಳಿಗೆ ಇ-ಸ್ವತ್ತು ಇದೆಯಾ ಲೋಕಾಯುಕ್ತರಿಗೆ ದೂರುದಾರರ ಪ್ರಶ್ನೆ?
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ದೂರುಗಳ ಕುರಿತು ಚರ್ಚಿಸಿದರು. ವೃತ್ತ ನಿರೀಕ್ಷಕ ಶಶಿಕುಮಾರ್, ಸಾಮಾಜಿಕ ಕಾರ್ಯಕರ್ತ ದಶರಥ್ ಇದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚಾಮರಾಜನಗರ ಜಿಲ್ಲಾ ಲೋಕಾಯುಕ್ತ ವೃತ್ತ ನಿರೀಕ್ಷಕ ಶಶಿಕುಮಾರ್ ಮತ್ತು ಸಿಬ್ಬಂದಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಈ ವೇಳೆ ಅಣಗಳ್ಳಿ ದಶರಥ್, ಚಾಮರಾಜು ಸೇರಿದಂತೆ ಹಲವರು ಹತ್ತು ದೂರುಗಳನ್ನು ಸಲ್ಲಿಸಿದರು. ಕಂದಾಯ ಇಲಾಖೆ ಜಾಗ ಅತಿಕ್ರಮ, ಒತ್ತುವರಿ ದಾರಿ ತೆರವಿಗೆ ಸಂಬಂಧಿಸಿದಂತೆ 3ದೂರು, ಚೆಸ್ಕಾಂ ಇಲಾಖೆ ವಿರುದ್ದ 1, ಕೊಂಗರಹಳ್ಳಿ ಪಿಡಿಒ ವಿರುದ್ದ 1ದೂರು, ನಗರಸಭೆಗೆ ಸಂಬಂಧಿಸಿದಂತೆ 5 ದೂರುಗಳು ಸೇರಿ 10 ದೂರುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗೆ ದೂರುಗಳನ್ನು ಕಳುಹಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ದೂರುದಾರರ ಒತ್ತಾಯದ ಹಿನ್ನೆಲೆಯಲ್ಲಿ ಚಿಕ್ಕರಂಗನಾಥನ ಕೆರೆ ಮತ್ತು ಕೊಳ್ಳೇಗಾಲ ನಗರಸಭೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಇ-ಸ್ವತ್ತು ಮತ್ತು ಅತಿಕ್ರಮ ತೆರವು ವಿಚಾರದ ಕುರಿತು ಚರ್ಚಿಸಿದರು. ಈ ವೇಳೆ ಸಾಮಾಜಿಕ ಕಾರ್ಯಕರ್ತ ದಶರಥ್ ಮಾತನಾಡಿ, ಸಾಕಷ್ಟು ಸರ್ಕಾರಿ ಆಸ್ತಿಗಳು ಅತಿಕ್ರಮವಾಗಿವೆ, ನಿಜಕ್ಕೂ ಕೊಳ್ಳೇಗಾಲ ನಗರಸಭೆ ಸರ್ಕಾರಿ ಆಸ್ತಿಗಳಿಗೆ ಇ-ಸ್ವತ್ತು ನೀಡುತ್ತಿದ್ದೆಯೇ? ಖಚಿತಪಡಿಸಿಕೊಳ್ಳಿ ಎಂದು ಲೋಕಾಯುಕ್ತ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಸರ್ಕಾರಿ ಕಚೇರಿ ಸೇರಿದಂತೆ ಆಸ್ತಿಗಳಿಗೆ ಇ-ಸ್ವತ್ತು ನೀಡದೆ ನಗರಸಭೆ ಇನ್ನು ಯಾವ ರೀತಿ ಸಾರ್ವಜನಿಕರಿಗೆ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳು ಮನಗಾಣಬೇಕು ಎಂದರು.

ಕೆರೆಗೆ ಯುಜಿಡಿ ನೀರು ಬಿಡುಗಡೆ ವೀಕ್ಷಣೆ: ಈ ವೇಳೆ ವೃತ್ತ ನಿರೀಕ್ಷಕರು ರಂಗನಾಥನ ಕೆರೆಗೆ ನಗರಸಭೆ ಯುಜಿಡಿ ನೀರು ಬಿಡುತ್ತಿರುವ ದೃಶ್ಯವನ್ನು ವೀಕ್ಷಿಸಿದರು. ಈ ಕುರಿತು ನೀವು ಕ್ರಮಕೈಗೊಳ್ಳಬೇಕು ಎಂದು ದಶರಥ್ ಆಗ್ರಹಿಸಿದರು. ಕೂಡಲೆ ಲಿಖಿತ ದೂರು ಸಲ್ಲಿಸಿ ಸಂಬಂಧಪಟ್ಟ ನಗರಸಭಾಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮವಹಿಸುವೆ ಎಂದು ಭರವಸೆ ನೀಡಿದರು. ಈ ವೇಳೆ ಜಿಲ್ಲಾ ಲೋಕಾಯುಕ್ತ ಕಚೇರಿಯ ಮುಖ್ಯಪೇದೆ ಮಹಾಲಿಂಗಸ್ವಾಮಿ, ಪೇದೆ ಶ್ರೀನಿವಾಸ್, ಚಾಲಕ ಕೃಷ್ಣೇಗೌಡ ಇನ್ನಿತರರಿದ್ದರು.