ಗೋಮಾಂಸ ಕಬಾಬ್ ಮಾರಾಟ ಅಂಗಡಿ ವಿರುದ್ಧ ದೂರು

| Published : Mar 11 2024, 01:19 AM IST / Updated: Mar 11 2024, 01:20 AM IST

ಗೋಮಾಂಸ ಕಬಾಬ್ ಮಾರಾಟ ಅಂಗಡಿ ವಿರುದ್ಧ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಗೋಮಾಂಸದಿಂದ ತಯಾರಿಸಿದ ಕಬಾಬ್ ಮಾರಾಟ ಮಾಡುತ್ತಿದ್ದ ಅಂಗಡಿ ವಿರುದ್ಧ ಹಿಂದೂ ಸಂಘಟನೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಗೋಮಾಂಸ ನಿಷೇಧ ಕಾಯ್ಧೆ ಜಾರಿಯಲ್ಲಿದೆ. ಆದರೂ, ಭದ್ರಾವತಿ ನಗರದಲ್ಲಿ ಯಥೇಚ್ಛವಾಗಿ ಗೋಮಾಂಸ ಮಾರಾಟ ಮತ್ತು ಕಬಾಬ್ ಮಾರಾಟ ಮಳಿಗೆಗಳು ಪತ್ತೆಯಾಗುತ್ತಿದೆ ಎಂದು ಹಿಂದೂ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಭದ್ರಾವತಿ: ಗೋಮಾಂಸದಿಂದ ತಯಾರಿಸಿದ ಕಬಾಬ್ ಮಾರಾಟ ಮಾಡುತ್ತಿದ್ದ ಅಂಗಡಿ ವಿರುದ್ಧ ಹಿಂದೂ ಸಂಘಟನೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಗೋಮಾಂಸ ನಿಷೇಧ ಕಾಯ್ಧೆ ಜಾರಿಯಲ್ಲಿದೆ. ಆದರೂ, ನಗರದಲ್ಲಿ ಯಥೇಚ್ಛವಾಗಿ ಗೋಮಾಂಸ ಮಾರಾಟ ಮತ್ತು ಕಬಾಬ್ ಮಾರಾಟ ಮಳಿಗೆಗಳು ಪತ್ತೆಯಾಗುತ್ತಿದೆ ಎಂದು ಹಿಂದೂ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ತರೀಕೆರೆ ರಸ್ತೆಯ ಸಾದತ್ ದರ್ಗಾ ‌ಬಳಿ ಓರ್ವ ವ್ಯಕ್ತಿ ಗೋಮಾಂಸದಿಂದ ತಯಾರಿಸುವ ಕಬಾಬ್ ಮಾರಾಟ ಮಾಡುತ್ತಿದ್ದು, ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆ ಹಿಂದೂ ಜಾಗರಣೆ ವೇದಿಕೆಯ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅನಂತರ ಸ್ನೇಹಿತರಿಗೆ ಕಬಾಬ್ ಖರೀದಿಸಿ, ಠಾಣೆಗೆ ತರುವಂತೆ ಸೂಚಿಸಿದ್ದಾರೆ.

ಸ್ನೇಹಿತರಿಬ್ಬರು ಹಳೇ ನಗರ ಪೊಲೀಸ್ ಠಾಣೆಗೆ ಸಾದತ್ ದರ್ಗಾ ಬಳಿ ಕಬಾಬ್ ಮಾರಾಟ ಮಾಡುತ್ತಿದ್ದವನಿಂದ ಕಬಾಬ್ ಖರೀದಿಸಿ ತಂದು, ಠಾಣೆಗೆ ತೆರಳಿ, ಗೋವಿನ ಕಬಾಬ್‌ ಮಾರಾಟ ವಿರುದ್ಧ ದೂರು ದಾಖಲಿಸಿದ್ದಾರೆ.

- - - - ಸಿಒಡಬ್ಲ್ಯೂ.ಜೆಪಿಜಿ: (ಸಾಂದರ್ಭಿಕ ಚಿತ್ರ)