ಜಾತಿಗಣತಿ ಆಧಾರದ ಮೇಲೆ ಮರಾಠರಿಗೆ ಮೀಸಲಾತಿ

| Published : Mar 11 2024, 01:19 AM IST

ಸಾರಾಂಶ

ರಾಮನಗರ: ಜಾತಿ ಗಣತಿ ಆಧಾರದ ಮೇಲೆ ರಾಜ್ಯದ ಮರಾಠ ಸಮುದಾಯದವರಿಗೆ ರಾಜ್ಯ ಸರ್ಕಾರ ಮೀಸಲಾತಿ ನೀಡಲಿದ್ದು, ಈ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಹೇಳಿದರು.

ರಾಮನಗರ: ಜಾತಿ ಗಣತಿ ಆಧಾರದ ಮೇಲೆ ರಾಜ್ಯದ ಮರಾಠ ಸಮುದಾಯದವರಿಗೆ ರಾಜ್ಯ ಸರ್ಕಾರ ಮೀಸಲಾತಿ ನೀಡಲಿದ್ದು, ಈ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಹಾಗೂ ರಾಮನಗರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ಜಾತಿಗಣತಿ ವರದಿಯು ಸರ್ಕಾರದ ಕೈ ಸೇರಿದ್ದು, ಈ ವರದಿಯಲ್ಲಿ ಸಮುದಾಯದ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ರಾಜ್ಯದಲ್ಲಿನ ಮರಾಠ ಸಮುದಾಯದವರಿಗೆ ಮೀಸಲಾತಿ ನೀಡಲಿದೆ ಎಂದರು.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಮರಾಠ ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಅದೇ ರೀತಿ ರಾಮನಗರ ಜಿಲ್ಲೆಯಲ್ಲಿಯೂ ಈ ಕೆಲಸ ಆಗಲಿದೆ. ಮರಾಠ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಬಣ್ಣಗಳು ಭಾತೃತ್ವ ಮತ್ತು ಸಹೋದರತೆಯನ್ನು ಮರೆಮಾಚಿಸುವ ಕೆಲಸ ಮಾಡುತ್ತಿದೆ. ಕೇಸರಿ ತ್ಯಾಗದ ಸಂಕೇತವಾದರೆ, ಹಸಿರು ಅಭಿವೃದ್ಧಿಯ ಸಂಕೇತವಾಗಿದೆ. ಬಿಳಿಯು ಶಾಂತಿಯನ್ನು ಸೂಚಿಸಿದೆ. ಈ ಆಧಾರದ ಮೇಲಿನ ನಮ್ಮ ದೇಶದ ಧ್ವಜವನ್ನು ರೂಪಿಸಲಾಗಿದೆ. ಆದರೆ, ತೀರಾ ಇತ್ತೀಚಿಗೆ ಬಣ್ಣಗಳನ್ನು ಧರ್ಮಾಧಾರಿತ ಕೆಲಸಕ್ಕೆ ಸೀಮಿತ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾತ್ರಾ ಹಾಗೂ ವಿಶೇಷ ಧಾರ್ಮಿಕ ಕೈಂಕರ್ಯದ ವೇಳೆ ಗ್ರಾಮದ ದೇವತೆಗಳಿಗೆ ಹಸಿರು ಬಣ್ಣದ ಸೀರೆಯನ್ನು ತೊಡಿಸಲಾಗುತ್ತದೆ. ಅದೇ ರೀತಿ ಬೇರೆ ಸಮುದಾಯದಲ್ಲಿ ಕೇಸರಿ ಬಣ್ಣವನ್ನು ಉಪಯೋಗಿಸುತ್ತಾರೆ. ಕೇಸರಿ ಬಣ್ಣ ತೋರಿಸಿ ಧ್ವೇಷ ಬಿತ್ತುವ ಕೆಲಸ ನಿಲ್ಲಿಸಬೇಕು ಎಂದು ಶ್ರೀನಿವಾಸ ಮಾನೆ ಹೇಳಿದರು.

ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿರ್ದೇಶಕ ಡಾ.ಪ್ರಕಾಶ್ ಪಾಗೋಜಿ ಮಾತನಾಡಿ, ಮರಾಠ ಸಮುದಾಯದ ಅಭಿವೃದ್ಧಿಗೆ ನಿಗಮ ಮಂಡಳಿಯಲ್ಲಿ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ. ಇದನ್ನು ಸಮುದಾಯದ ವರು ಸದ್ಬಳಕೆ ಮಾಡಿಕೊಳ್ಳಬೇಕು. ಉತನ್ನವಿದ್ಯಾಬ್ಯಾಸಕ್ಕಾಗಿ ನಿಗಮದಿಂದ ಶೇ.2ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಜತೆಗೆ, ವಿದೇಶದಲ್ಲಿ ವ್ಯಾಸಂಗ ಮಾಡಲುಇಚ್ಛಿಸುವವರಿಗೆ ಶೂನ್ಯ ಬಡ್ಡಿದರದಲ್ಲಿ 20 ಲಕ್ಷದ ತನಕ ಸೌಲಭ್ಯ ನೀಡಲಾಗುತ್ತದೆ. ಇದನ್ನು ಸದ್ಬಳಕೆಮಾಡಿಕೊಳ್ಳಬೇಕು ಎಂದು ಹೇಳಿದರು.

ಮರಾಠದ ಇತಿಹಾದಲ್ಲಿ ಶಿವಾಜಿ ಮಹಾರಾಜರಷ್ಟೆ ಹೆಸರು ಮಾಡಿದ್ದ ಛತ್ರಪತಿ ಸಾಹುಮಹರಾಜರು, ಇವರಿಗೆ ಜನತೆ ರಾಜಶ್ರೀ ಎಂದು ಬಿರುದು ನೀಡಿದ್ದರು.ಇವರ ದೇಶದಲ್ಲಿ ಪ್ರಥಮ ಬಾರಿಗೆ ಮೀಸಲಾತಿ ನೀಡಿದರು. ನಂತರ ಕೃಷ್ಣರಾಜ ಒಡೆಯರ್ ಮೈಸೂರಿನಲ್ಲಿ ಮೀಸಲಾತಿ ನೀಡಿದರು. ಸಾಮಾಜಿಕ ಸಮಾನತೆ ಹಾಗೂ ಮೇಲು ಕೀಳುಗಳನ್ನು ಮೆಟ್ಟಿ ನಿಲ್ಲುವ ಸಲುವಾಗಿ ಮಹಾರಾಜು ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನದ ಮಠದ ವೇದಾಂತ ಚಾರ್ಯ ಮಂಜುನಾಥ ಸ್ವಾಮಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರನ್ನು ವಿವಿಧ ಆಯಾಮದಲ್ಲಿ ನೋಡುವ ಕೆಲಸ ಮಾಡಲಾಗುತ್ತಿದೆ. ಶಿವಾಜಿ ಮಹಾರಾಜರನ್ನು ಧಾರ್ಮಿಕ ಹಿನ್ನಲೆಯಲ್ಲಿ ಮುಖ್ಯ ಸಿದ್ಧಾಂತವಾಗಿ ನೋಡಬೇಕಾಗಿದೆ. ಕೆಲವರಿಗೆ ಶಿವಾಜಿ ಮಹಾರಾಜರು ಮರಾಠ ಧರ್ಮದ ಪ್ರತಿಪಾದನೆ, ಹಿಂದವಿ ರಾಜ್ಯ ಸ್ಥಾಪನೆ, ಸ್ವರಾಜ್ಯ ಸ್ಥಾಪನೆಯ ಪ್ರಾತಿಪಾದನೆಯಾಗಿ ಕಾಣಿಸಲಿದ್ದಾರೆ ಎಂದರು.

ಈ ವೇಳೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ರಾಜ್ಯಾಧ್ಯಕ್ಷ ಸುರೇಶ್ ರಾವ್ ಸಾಠೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿದರು.

ಪರಿಷತ್‌ನ ರಾಜ್ಯ ಖಜಾಂಚಿ ವೆಂಕಟರಾವ್ ಚವ್ಹಾಣ್, ರಾಜ್ಯ ಪ್ರಧಾನ ಕಾರ್‍ಯದರ್ಶಿ ಸುನೀಲ್ ಚವ್ಹಾಣ್, ಉಪಾಧ್ಕ್ಷ ಎಸ್.ಆರ್.ಶೀಂಧೆ, ವ್ಯವಸ್ಥಾಪಕ ಶ್ರೀನವಾಸ್ ಮಗರ್, ಮರಾಠ ಮುಖಂಡರಾದ ಜನಗ್ನಾಥ್ ರಾವ್ ಸಿಂಧೆ, ವಿಜೇಂದ್ರ ಜಾಧವ್, ಡಾ.ಉಮಾಮೂರ್ತಿರಾವ್, ಸೋಮಶೇಖರ್ ಕಾಂಬ್ಳೆ, ಪ್ರವೀಣ್ ಮಾನೆ, ಸೋನಾಬಾಯಿ ಖಾಂಡೆ, ಕವಿತರಾವ್ ಜಗತಾಪ್, ಅರವಿಂದ್ ರನ್ನೋರೆ ಉಪಸ್ಥಿತರಿದ್ದರು.

ಮೆರವಣಿಗೆ:

ವೇದಿಕೆ ಕಾರ್ಯಕ್ರಮ ಮುನ್ನಾ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಮುದಾಯದ ಜನರು , ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.10ಕೆಆರ್ ಎಂಎನ್ 7.ಜೆಪಿಜಿ

ರಾಮನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತ್ಯುತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.