ತಾಲೂಕಿನ ಗರುಡಪಾಳ್ಯದ ಸಚಿವ ಕೃಷ್ಣಬೈರೇಗೌಡ 21.16 ಎಕರೆ ಸರ್ಕಾರಿ ಜಮೀನಿಗೆ ಅಕ್ರಮವಾಗಿ ದಾಖಲೆ ಸೃಷ್ಟಿಸಿಕೊಂಡು ಖಾತೆ ಮಾಡಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಕೋಲಾರಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಾಲೂಕಿನ ಗರುಡಪಾಳ್ಯದಲ್ಲಿ ಸರ್ಕಾರಿ ಖರಾಬು ಜಮೀನು ೨೧ ಎಕರೆ ೧೬ ಗುಂಟೆ ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ, ಈ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸ ಬೇಕೆಂದು ಬಿಜೆಪಿ ಪಕ್ಷದ ಮುಖಂಡರಾದ ವಿಜಯ ಕುಮಾರ್, ಸಾ.ಮಾ.ಅನಿಲ್ ಕುಮಾರ್ ಹೈಕೋಟ್ ವಕೀಲರ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಸಮ್ಮುಖದಲ್ಲಿ ನಗರದ ಲೋಕಾಯುಕ್ತ ಕಚೇರಿಯಲ್ಲಿ ಜಿಲ್ಲಾ ಅಧೀಕ್ಷರಿಗೆ ಮನವಿಪತ್ರ ಸಲ್ಲಿಸಿದರು. ಓಂಶಕ್ತಿ ಚಲಪತಿ ಮಾತನಾಡಿ, ರಾಜ್ಯದಲ್ಲಿ ಮಿಸ್ಟರ್ ಕ್ಲೀನ್‌ಚೀಟ್ ಎಂಬ ಖ್ಯಾತಿ ಪಡೆದಿರುವಂತ ನಮ್ಮ ತಾಲೂಕಿನ ಗರುಡಪಾಳ್ಯದ ಸಚಿವ ಕೃಷ್ಣಬೈರೇಗೌಡ 21.16 ಎಕರೆ ಸರ್ಕಾರಿ ಜಮೀನಿಗೆ ಅಕ್ರಮವಾಗಿ ದಾಖಲೆ ಸೃಷ್ಟಿಸಿಕೊಂಡು ಖಾತೆ ಮಾಡಿಕೊಂಡಿದ್ದಾರೆ. ಈ ಕುರಿತು ಬಿಜೆಪಿ ಪಕ್ಷವು ನಗರದ ತಹಸೀಲ್ದಾರ್ ಕಚೇರಿ ಬಳಿ ಪ್ರತಿಭಟಿಸಿ ತನಿಖೆ ನಡೆಸಲು ಒತ್ತಾಯಿಸಿ ಮನವಿಪತ್ರ ಸಲ್ಲಿಸಲಾಗಿತ್ತು, ಆದರೆ ಈವರೆಗೆ ಯಾವುದೇ ರೀತಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಲೋಕಾಯುಕ್ತರಿಗೆ ದೂರು ನೀಡಿ ತನಿಖೆ ನಡೆಸಲು ಮನವಿ ಸಲ್ಲಿಸಿದ್ದೇವೆ, ಒಂದು ವೇಳೆ ಆಗಲು ತನಿಖೆ ನಡೆಸದಿದ್ದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.ಗರುಡಪಾಳ್ಯ ವ್ಯಾಪ್ತಿಗೆ ಸೇರಿದ ಸರ್ವೇ ಸಂಖ್ಯೆ 46ರಲ್ಲಿ 20 ಎಕರೆ 16 ಗುಂಟೆ ಹಾಗೂ ಸರ್ವೇ ಸಂಖ್ಯೆ 47ರಲ್ಲಿ 1 ಎಕರೆ ಸೇರಿದಂತೆ ಒಟ್ಟು 21 ಎಕರೆ 16 ಗುಂಟೆ ಜಮೀನು ಅಕ್ರಮವಾಗಿ ದಾಖಲೆಗಳು ಸೃಷ್ಟಿಸಿ ಕಬಳಿಸಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸಲು ತಹಸೀಲ್ದಾರ್‌ರಿಗೆ ದೂರು ನೀಡಿದ್ದೇವು. ಇದರಲ್ಲಿ ಸ್ಮಶನ ಮತ್ತು ಕೆರೆಗಳಿದ್ದವು. ಈಗಲು ಇದೇ ಇದಕ್ಕೆ ಅವರು ಫೇನ್ಸಿಂಗ್ ಹಾಕಿ ಕೊಂಡು ಫಾರಂ ಹೌಸ್ ಮಾಡಿಕೊಂಡಿದ್ದಾರೆ. ಸಾರ್ವಜನಿಕರಿಗೆ ಸೇರಿದ ಈ ಆಸ್ತಿ ಯಾವ ರೀತಿ ಅವರು ದಾಖಲೆ ಮಾಡಿಕೊಂಡಿದ್ದಾರೆ ಎಂಬುವುದು ತನಿಖೆಯಾಗಬೇಕೆಂದು ಒತ್ತಾಯಿಸಿದರು.ಈ ಆಸ್ತಿಯನ್ನು ಮೈಸೂರು ಮಹಾರಾಜರು ಇವರ ಕುಟುಂಬದವರಿಗೆ ಲೀಜ್‌ಗೆ ಕೊಟ್ಟಿದ್ದರು. ನಂತದಲ್ಲಿ ಅದನ್ನು ಹರಾಜಿನಲ್ಲಿ ಕ್ರಯ ಮಾಡಿಕೊಂಡಿದ್ದು ನ್ಯಾಯಾಲಯದ ಮೂಲಕ ವಿಭಾಗ ಮಾಡಿಕೊಂಡಿದ್ದೇವೆಂದು ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ. ಆದರೆ ಅದಕ್ಕೆ ಪೂರಕ ದಾಖಲೆಗಳನ್ನು ಪ್ರದರ್ಶಿಸುವಲ್ಲಿ ವಿಫಲವಾಗಿದ್ದಾರೆ. ಈಗಾಗಲೇ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಿಂದಲೂ ಬಿಜೆಪಿ ಹಾಗೂ ಜೆ.ಡಿ.ಎಸ್ ಪಕ್ಷಗಳು ಪ್ರತಿಭಟಿಸಿ ಸರ್ಕಾರವನ್ನು ಒತ್ತಾಯಿಸಿದರು ಸಹ ಯಾವುದೇ ರೀತಿ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಇಂದು ಲೋಕಯುಕ್ತ ಮೂಲಕ ತನಿಖೆ ನಡೆಸಲು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು. ಸರ್ಕಾರಿ ದಾಖಲೆಗಳಲ್ಲಿ ಗೋಮಾಳ ಸ್ಮಶಾನ, ಕೆರೆಗಳು ಎಂಬುವುದಾಗಿ ಇದೆ. ಈ ಆಸ್ತಿಗಳು ಸಚಿವರ ಹೆಸರಿಗೆ ಹೇಗೆ ವರ್ಗಾವಣೆಯಾಗಿದೆ ಎಂಬುವುದು ತನಿಖೆಯಿಂದ ಬಹಿರಂಗಪಡಿಸಬೇಕಾಗಿದೆ. ಆದರೆ ಈ ಹಿಂದೆ ಸದನದಲ್ಲಿ ಪ್ರಸ್ತವನೆಯಾದ ಸಂದರ್ಭದಲ್ಲಿ ದಾಖಲೆಗಳನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದಿದ್ದಾರೆ ಹೊರತಾಗಿ ಸಾರ್ವಜನಿಕರಿಗೆ ಅಥವಾ ಮಾದ್ಯಮದವರಿಗೆ ಬಿಡುಗಡೆ ಮಾಡಿ ಆರೋಪದಿಂದ ಏಕೆ ಮುಕ್ತವಾಗಿ ಮಿಸ್ಟರ್ ಕ್ಲೀನ್ ಚೀಟ್ ಎಂಬುವುದು ನಿರೂಪಿಸಲಿ, ಇಲ್ಲವೇ ಆರೋಪದ ಹಿನ್ನಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲು ಸಿದ್ದವಾಗಲಿ ಎಂದು ಸವಾಲು ಹಾಕಿದರು. ಕೆ.ಯು.ಡಿ.ಎ. ಮಾಜಿ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಶಿಳ್ಳೆಂಗೆರೆ ಮಹೇಶ್, ನಾಮಾಲು ಮಂಜುನಾಥ್ ಇದ್ದರು.