ಅವೈಜ್ಞಾನಿಕ ಡಿವೈಡರ್ ಪರಿಶೀಲನೆಗೆ ಐಆರ್ ಸಿ ಗೆ ದೂರು

| Published : Oct 16 2024, 12:32 AM IST

ಸಾರಾಂಶ

ಚಿತ್ರದುರ್ಗ ನಗರದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಡಿವೈಡರ್ ಸೋಮವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮತ್ತೆ ಮಾರ್ದನಿಸಿದೆ. ತೆರವುಗೊಳಿಸದ ಅಧಿಕಾರಿಗಳ ಮೇಲೆ ಶಾಸಕ ವೀರೇಂದ್ರ ಪಪ್ಪಿ ಹರಿಹಾಯ್ದಿದ್ದಾರೆ. ಚಿತ್ರದುರ್ಗ ಸರ್ಕಾರಿ ಆಸ್ಪತ್ರೆ ಮುಂಭಾಗ, ತುರುವನೂರು ರಸ್ತೆ ಸೇರುವ ಜಾಗದಲ್ಲಿ 20 ಮೀಟರ್ ನಷ್ಟು ಡಿವೈಡರ್ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಜೆಸಿಆರ್ ಬಡಾವಣೆಯಲ್ಲಿ ಮಾತ್ರ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳ ವೀರೇಂದ್ರ ಪಪ್ಪಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಚಿತ್ರದುರ್ಗ ನಗರದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಡಿವೈಡರ್ ಸೋಮವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮತ್ತೆ ಮಾರ್ದನಿಸಿದೆ. ತೆರವುಗೊಳಿಸದ ಅಧಿಕಾರಿಗಳ ಮೇಲೆ ಶಾಸಕ ವೀರೇಂದ್ರ ಪಪ್ಪಿ ಹರಿಹಾಯ್ದಿದ್ದಾರೆ. ಚಿತ್ರದುರ್ಗ ಸರ್ಕಾರಿ ಆಸ್ಪತ್ರೆ ಮುಂಭಾಗ, ತುರುವನೂರು ರಸ್ತೆ ಸೇರುವ ಜಾಗದಲ್ಲಿ 20 ಮೀಟರ್ ನಷ್ಟು ಡಿವೈಡರ್ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಜೆಸಿಆರ್ ಬಡಾವಣೆಯಲ್ಲಿ ಮಾತ್ರ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳ ವೀರೇಂದ್ರ ಪಪ್ಪಿ ಆಕ್ರೋಶ ವ್ಯಕ್ತಪಡಿಸಿದ್ದರು. ಡಿವೈಡರ್ ವಿಷಯದಲ್ಲಿ ಅಧಿಕಾರಿಗಳು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ಏಗಾಡುತ್ತಿದ್ದಾರೆ. ಕಟ್ಟಲು ಸರ್ಕಾರಿ ಹಣ ಬಳಕೆಯಾಗಿದ್ದು, ತೆರವು ಹಾಗೂ ನಂತರ ಪುನರ್ ಸ್ಥಾಪಿಸಲು ಯಾವ ಅನುದಾನ ಬಳಕೆ ಮಾಡಬೇಕೆಂಬ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಏತನ್ಮಧ್ಯೆ ಚಿತ್ರದುರ್ಗದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಡಿವೈಡರ್ ಪರಿಶೀಲನೆ ಸಂಬಂಧ ಸಭೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಡಾ. ಎಚ್.ಎಂ. ಸದಾನಂದ್ ನೇರವಾಗಿ ಐಆರ್ ಸಿ(ಇಂಡಿಯನ್ ರೋಡ್ ಕಾಂಗ್ರೆಸ್) ಗೆ ಪತ್ರ ಬರೆದಿದ್ದಾರೆ.

ವೈಜ್ಞಾನಿಕವಲ್ಲದ ರಸ್ತೆ ವಿಭಜಕ ನಿರ್ಮಾಣ ಮತ್ತು ಪ್ರಾಣಾಪಾಯ ಅಪಘಾತಗಳನ್ನು ಪರಿಗಣಿಸಿ, ಚಿಂತನೆಗಳನ್ನು ಪರಿಹರಿಸಲು ಮತ್ತು ಪ್ರಾಥಮಿಕ ಮಾಹಿತಿ ಸಂಗ್ರಹಿಸಲು ಸಭೆ ನಡೆಸುವುದು ಅನಿವಾರ್ಯವೆಂದು ಅವರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.ಐಆರ್ ಸಿ ಮಾರ್ಗಸೂಚನೆ ಉಲ್ಲಂಘಿಸಿ ಇಪ್ಪತ್ತು ಅಡಿ ಅಗಲದ ಏಕಮುಖ ರಸ್ತೆ (ಒನೇ ವೇ)ಯಲ್ಲಿ ವಿಭಜಕ ನಿರ್ಮಿಸಿ ನಂತರ ತೆರವುಗೊಳಿಸಲಾಗಿದೆ. ಚಿತ್ರದುರ್ಗದಲ್ಲಿರುವ ವಿಭಜಕಗಳಿಗೆ ವಾಹನಗಳು ಡಿಕ್ಕಿಯಾಗಿ ಈಗಾಗಲೇ ನಾಲ್ವರು ಮೃತಪಟ್ಟಿದ್ದಾರೆ. ಈ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ಶಾಸಕ ವೀರೇಂದ್ರ ಪಪ್ಪಿ ದನಿ ಎತ್ತಿದ ನಂತರ ಅಲ್ಲಲ್ಲಿ ವಿಭಜಕಗಳ ತೆರವುಗೊಳಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

20 ಅಡಿ ಏಕಮಾರ್ಗದ ರಸ್ತೆಯಲ್ಲಿ 4 ಅಡಿ ಅಗಲದ ವಿಭಜಕ ಏಕೆ ನಿರ್ಮಿಸಲಾಯಿತು? ವಿನ್ಯಾಸ ಮತ್ತು ಕಾರ್ಯನಿರ್ವಹಣೆ ದೋಷಗಳು ಏನು ? ತೆರವುಗೊಳಿಸಲು ಏನು ಪ್ರೇರೇಪಿಸಿತು ಮತ್ತು ಎದುರಿಸಿದ ಸವಾಲುಗಳು ಏನು? ಡಿವೈಡರ್ ನಿರ್ಮಾಣದಿಂದಾಗಿ ಘಟಿಸಿದ ಆರ್ಥಿಕ ಪರಿಣಾಮ ? ನಿರ್ಮಾಣಕ್ಕೆ ಆದ ವೆಚ್ಚ, ತೆರವಿಗೆ ಆದ ಖರ್ಚು, ಕಚ್ಚಾ ವಸ್ತುಗಳು ಮತ್ತು ಕಾರ್ಮಿಕರ ನಷ್ಟ, ನಷ್ಟವನ್ನು ಹೇಗೆ ಭರಿಸರಲಾಗಿದೆ ? ವೈಜ್ಞಾನಿಕವಲ್ಲದ ನಿರ್ಮಾಣಕ್ಕೆ ಯಾರು ಹೊಣೆ? ಹೊಣೆಗಾರರ ವಿರುದ್ಧ ಏನು ಕ್ರಮ ಕೈಗೊಳ್ಳಲಾಯಿತು? ಎಂಬಿತ್ಯಾದಿ ಪ್ರಶ್ನೆಗಳನ್ನು ಸದಾನಂದ್ ಪತ್ರದಲ್ಲಿ ಎತ್ತಿದ್ದಾರೆ.

ಐಆರ್ ಸಿ ಮಾರ್ಗಸೂಚಿಗಳು ಮತ್ತು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಹೆಚ್ಚಿಸುವುದು, ಪಾಲುದಾರರ (ಅಭಿಯಂತರರು, ಅಧಿಕಾರಿಗಳು, ಸ್ಥಳೀಯರು) ನಡುವೆ ಸಂವಾದವನ್ನು ಉತ್ತೇಜಿಸುವುದು, ಉತ್ತಮ ರಸ್ತೆ ಮೂಲಸೌಕರ್ಯಕ್ಕಾಗಿ ಪರಿಹಾರಗಳನ್ನು ಗುರುತಿಸುವುದು, ಭವಿಷ್ಯಕ್ಕಾಗಿ ವಾಸ್ತವಾಂಶ ದಾಖಲಿಸುವುದಕ್ಕಾಗಿ ಚಿತ್ರದುರ್ಗದಲ್ಲಿ ಸಭೆ ನಡೆಸುವುದು ಅನಿವಾರ್ಯವಾಗಿದೆ. ಈ ಸಂಬಂಧ ದಿನಾಂಕ ನಿಗದಿಪಡಿಸಬೇಕು, ವ್ಯಾಪಕ ಪ್ರಚಾರ ಕೈಗೊಳ್ಳಬೇಕೆಂದು ಸದಾನಂದ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.ಡಿವೈಡರ್ ಗಳು ಭೀತಿ ಮೂಡಿಸುತ್ತಿವೆ

ಚಿತ್ರದುರ್ಗದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಡಿವೈಡರ್ ಗಳು ಭೀತಿ ಮೂಡಿಸುತ್ತಿವೆ. ಸರ್ಕಾರಿ ಅನುದಾನ ವೆಚ್ಚ ಮಾಡಿ ಪ್ರಾಣಾಪಾಯ ಯಾಕೆ ತಂದೊಡ್ಡಬೇಕು. ಇಂಡಿಯನ್ ರೋಡ್ ಕಾಂಗ್ರೆಸ್ ನ ನಿಯಮಾವಳಿಗಳನ್ನು ಇಂಜಿನಿಯರ್ ಗಳು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ರಸ್ತೆ ಸುರಕ್ಷತೆ ಪ್ರಾಧಿಕಾರ ಹಾಗೂ ರಸ್ತೆ ಸುರಕ್ಷತಾ ಸಮಿತಿಗಳು ತಮ್ಮ ಜವಾಬ್ದಾರಿ ನಿರ್ವಹಿಸದ ಕಾರಣ ಸಮಸ್ಯೆ ಎದುರಾಗಿದೆ. ಹಾಗಾಗಿ ಇಂಡಿಯನ್ ರೋಡ್ ಕಾಂಗ್ರೆಸ್ ಗೆ ಪತ್ರ ಬರೆದಿರುವೆ.ಡಾ. ಎಚ್.ಎಂ. ಸದಾನಂದ್ ಏನಿದು ಇಂಡಿಯನ್ ರೋಡ್ ಕಾಂಗ್ರೆಸ್ ಇಂಡಿಯನ್ ರೋಡ್ಸ್ ಕಾಂಗ್ರೆಸ್ ಹೆದ್ದಾರಿ ಎಂಜಿನಿಯರ್‌ಗಳ ಪ್ರಧಾನ ತಾಂತ್ರಿಕ ಸಂಸ್ಥೆಯಾಗಿದ್ದು, ಇದು ರಸ್ತೆಗಳು ಮತ್ತು ಹೆದ್ದಾರಿ, ಪುಟ್ ಪಾತ್ ನಿರ್ಮಾಣಕ್ಕಾಗಿ ಮಾನದಂಡಗಳನ್ನು ರೂಪಿಸಲು ಮತ್ತು ವಿನ್ಯಾಸಗೊಳಿಸಲು ಭಾರತದ ರಾಷ್ಟ್ರೀಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. 1934 ರಲ್ಲಿ ಇದು ಆರಂಭಗೊಂಡಿದೆ. ಪರಿಣತಿಯನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಅದಕ್ಕೆ ಸಂಬಂಧಿಸಿದ ಆಯಾ ಸಂಶೋಧನಾ ಬೆಳವಣಿಗೆಗಳನ್ನು ಒದಗಿಸುತ್ತದೆ.ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಮುಂಭಾಗ ತುರುವನೂರು ಕೂಡು ರಸ್ತೆಗೆ ನಿರ್ಮಿಸಲಾದ ಅವೈಜ್ಞಾನಿಕ ಡಿವೈಡರ್ 20 ಮೀಟರ್ ನಷ್ಟು ತೆರವುಗೊಳಿಸಲು ತಿರ್ಮಾನವಾಗಿದ್ದೂ ಹಾಗೆಯೇ ಉಳಿದಿದೆ.