ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಗಂಡಸಿ ಹ್ಯಾಂಡ್‌ಪೋಸ್ಟ್‌ನಲ್ಲಿ ರಾಜ್ಯ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರ 68ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು, ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರ ಸಮ್ಮುಖದಲ್ಲಿ ಆಚರಿಸಲಾಯಿತು.ಕೆಎಂಎಸ್ ಅಭಿಮಾನಿಗಳ ಬಳಗದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಪುಷ್ಪವೃಷ್ಠಿಯೊಂದಿಗೆ ಶಾಸಕರನ್ನು ವೇದಿಕೆಗೆ ಕರೆತಂದು ಗೌರವಿಸಲಾಯಿತು. ಆಕರ್ಷಕ ಎಲ್‌ಇಡಿ ಅಲಂಕೃತ ವೇದಿಕೆಯಲ್ಲಿ ಪೂರ್ವಸಿದ್ಧವಾಗಿ ಇಡಲಾಗಿದ್ದ ಬೃಹತ್ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಸಮಾರಂಭಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಅಭಿಮಾನಿಗಳು ಘೋಷಣೆ ಕೂಗಿ, ಹಾರ ಹಾಕಿ, ಹೂವಿನ ಮಳೆ ಸುರಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್, ಮಾಜಿ ಶಾಸಕ ಪುಟ್ಟೇಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹುಚ್ಚೇಗೌಡ, ಉಪಾಧ್ಯಕ್ಷ ಬಿಳಿ ಚೌಡಯ್ಯ ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಭಾಗವಹಿಸಿ ಶಿವಲಿಂಗೇಗೌಡರಿಗೆ ಶುಭಾಶಯ ಕೋರಿದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನ್ನನ್ನು ರಾಜಕೀಯವಾಗಿ ಬೆಳೆಸಿದವರು ಈ ಕ್ಷೇತ್ರದ ಜನತೆ. ಅವರ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ. ನೀವು ನನಗೆ ನೀಡಿದ ಶಕ್ತಿಯನ್ನು ಬಳಸಿಕೊಂಡು ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ಸಾವಿರಾರು ಕೋಟಿ ರು. ವೆಚ್ಚದಲ್ಲಿ ನೂರಾರು ಜನಪರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ತೃಪ್ತಿ ನನಗಿದೆ. ಮುಂದೆಯೂ ನಿಮ್ಮ ಶಾಸಕನಾಗಿ ಮಾತ್ರವಲ್ಲ, ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಆಯೋಜಕರಾದ ಚಿಕ್ಕಯರಗನಾಳು ಮಲ್ಲೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಜಯರಾಂ, ನಿರ್ದೇಶಕ ಹೊನ್ನಕುಮಾರನಹಳ್ಳಿ ರಾಮಚಂದ್ರು, ಮಲ್ಲೇನಹಳ್ಖಿ ಶಿವಶಂಕರಸ್ವಾಮಿ, ಮಲ್ಲಾಪುರ ಮಂಜುರಾಜು, ನಾಗರಹಳ್ಳಿ ಕೃಷ್ಣೇಗೌಡ, ಧರ್ಮಣ್ಣ, ವೆಂಕಟೇಶ, ಗಿರಿ, ಸೀನಣ್ಣ, ಗಂಡಸಿ ಅಯ್ಯಣ್ಣ, ನಾಗರಾಜಣ್ಣ, ಮುಂಜೇನಹಳ್ಖಿ ಜೆಟ್ಟಿಗೌಡ, ಚಗಚಗೆರೆ ಈಶ್ವರಪ್ಪ, ಕೊಂಡೆನಾಳು ರಾಜು, ಆಗ್ರೋಬಾಬು, ಮಹದೇವರಹಳ್ಳಿ ಸ್ವಾಮಣ್ಣ, ಮುದುಡಿ ಶಿವಪ್ಪ, ಬಾಗೇಶಪುರ ಈರೇಗೌಡ ಸೇರಿದಂತೆ

ಇತರರು ಇದ್ದರು.