ಸಾರಾಂಶ
ಪುರಸಭೆ ವ್ಯಾಪ್ತಿಯಲ್ಲಿ ಬರುವ ಅನೇಕ ವಾರ್ಡುಗಳಲ್ಲಿ ಶುದ್ಧ ನೀರು ಪೂರೈಕೆ ಆಗುತ್ತಿಲ್ಲ ಮುಖ್ಯಾಧಿಕಾರಿಗಳು, ಇಂಜನಿಯರ್‌ಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಕ್ರಮ ಮನೆಗಳ ನಿರ್ಮಾಣ ಪರಿಶೀಲಿಸುತ್ತಿಲ್ಲ ಜಾತಿ ತಾರತಮ್ಯತೆ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಂಚೋಳಿ
ಪುರಸಭೆ ವ್ಯಾಪ್ತಿಯಲ್ಲಿ ಬರುವ ಅನೇಕ ವಾರ್ಡುಗಳಲ್ಲಿ ಶುದ್ಧ ನೀರು ಪೂರೈಕೆ ಆಗುತ್ತಿಲ್ಲ ಮುಖ್ಯಾಧಿಕಾರಿಗಳು, ಇಂಜನಿಯರ್‌ಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಕ್ರಮ ಮನೆಗಳ ನಿರ್ಮಾಣ ಪರಿಶೀಲಿಸುತ್ತಿಲ್ಲ ಜಾತಿ ತಾರತಮ್ಯತೆ ನಡೆಸುತ್ತಿದ್ದಾರೆ. ಪುರಸಭೆಯಲ್ಲಿ ಫಾರಂ.ನಂ.೩ ಪಡೆದುಕೊಳ್ಳಲು ಲಂಚತನ ಹೆಚ್ಚಾಗಿದೆ ಎಂದು ನಗರದ ಬಿಜೆಪಿ ಕಾರ್ಯಕರ್ತರು ಶಾಸಕ ಡಾ. ಅವಿನಾಶ ಜಾಧವ್ ಮುಂದೆ ದೂರಿದರು.ಕಲ್ಯಾಣಗಡ್ಡಿಯಲ್ಲಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ ಎಂದರೆ ಇಂಜನಿಯರ ದೇವೇಂದ್ರಪ್ಪ ಕೋರವಾರ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ. ಸಾರ್ವಜನಿಕರ ಅಹವಾಲು ಸರಿಯಾಗಿ ಸ್ಪಂದಿಸುತ್ತಿಲ್ಲ. ಮನೆಗಳ ಆಸ್ತಿಗೆ ಸಂಬಂಧಿಸಿದ ಫಾರಂ. ನಂ೩ ಪಡೆದುಕೊಳ್ಳಲು ಪುರಸಭೆ ಸಿಬ್ಬಂದಿಗಳು ಲಕ್ಷಾಂತರ ರು. ವಸೂಲಿ ಮಾಡುತ್ತಿದ್ದಾರೆ. ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ರಾಜಕುಮಾರ ಪವಾರ ಶಾಸಕರ ಗಮನಕ್ಕೆ ತಂದು ಪುರಶಭೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಸಿಬ್ಬಂದಿಗಳನ್ನು ಕೂಡಲೇ ಬೇರೆಡೆ ವರ್ಗಾವಣೆ ಮಾಡಿರಿ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರ ಅಹವಾಲು ಆಲಿಸಿದ ನಂತರ ಶಾಸಕ ಡಾ. ಅವಿನಾಶ ಜಾಧವ್ ಮಾತನಾಡಿ, ಪುರಸಭೆ ವಾರ್ಡುಗಳಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಅತಿ ಶೀಘ್ರವಾಗಿ ಪುರಸಭೆ ಕಚೇರಿಯ ಆವರಣದಲ್ಲಿ ಜನಸ್ಪಂದನಾ ಸಭೆ ನಡೆಸುತ್ತೇನೆಂದು ಭರವಸೆ ನೀಡಿದರು.ಬಿಜೆಪಿ ಹಿರಿಯ ಮುಖಂಡರಾದ ಕೆ.ಎಂ. ಬಾರಿ, ಭೀಮಶೆಟ್ಟಿ ಮುರುಡಾ, ಅಶೋಕ ಚವ್ಹಾಣ, ರಾಮರೆಡ್ಡಿ ಪಾಟೀಲ, ಹಣಮಂತ ಭೋವಿ, ಸಚಿನ ಸುಂಕದ ಇನ್ನಿತರಿದ್ದರು.