ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆ ಅಧಿವೇಶನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನ ಬದಲು ದೇವರನ್ನು ಜಪಿಸಿದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು ಎಂಬ ಹೇಳಿಕೆ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವರ ಬಣ) ದೇವರಹಿಪ್ಪರಗಿ ತಾಲೂಕು ಘಟಕದಿಂದ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಜಿಲ್ಲಾ ಸಂಚಾಲಕ ಹುಯೋಗಿ ತಳ್ಳೊಳ್ಳಿ ಮಾತನಾಡಿ, ಅಂಬೇಡ್ಕರ್ ಅವರು ಶೋಷಿತ ಸಮಾಜಕ್ಕೆ ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ಹಾಗೂ ದೇಶದ ಪ್ರತಿಯೊಬ್ಬ ಪ್ರಜೆಗೆ ನ್ಯಾಯಯುತ ಬದುಕು ಕೊಟ್ಟವರು. ಅವರ ಬಗ್ಗೆ ಇಂತಹ ಹೇಳಿಕೆ ಸಲ್ಲದು. ಅವರ ಬಗ್ಗೆ ಕನಿಷ್ಠ ಜ್ಞಾನ ಇಲ್ಲದೆ ಹೇಳಿಕೆ ನೀಡಿರುವುದು. ಅಮಿತ ಶಾ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಹಿರಂಗವಾಗಿ ದೇಶದ ಜನರ ಕ್ಷಮೆಯಾಚಿಸಬೇಕು. ಸಂವಿಧಾನದಿಂದಲೇ ನೀವೆಲ್ಲ ಅಧಿಕಾರ ಪಡೆದುಕೊಂಡಿದ್ದೀರಿ ಶಾ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.ಈ ವೇಳೆ ಮುಖಂಡರಾದ ಉಮೇಶ ರೂಗಿ, ಬಸವರಾಜ ತಳಕೇರಿ, ಶಿವಾನಂದ ಇಂಗಳಗಿ, ಕಮಲಸಾಬ ಕಾಟಮಳ್ಳಿ, ಸಿದ್ದಾರ್ಥ ಮುಳಸಾವಳಗಿ, ಶಿವಾನಂದ ವಾಲಿಕಾರ, ಪ್ರಭು ಅಂಕಲಗಿ, ನಿಂಗರಾಜು ಮಣ್ಣೂರ, ರಾಘು ತಳವಾರ, ಪ್ರಕಾಶ ರೊಟ್ಟಿ, ಜಾನು ಗುಡಿಮನಿ, ಮುರುಘೇಂದ್ರ ಯಾಳವಾರ, ಮೌನೇಶ ನಾಟೀಕಾರ, ಬಸಯ್ಯ ಹಿರೇಮಠ, ಸಾಹೇಬಣ್ಣ ದಳಪತಿ, ಪ್ರಶಾಂತ ದೊಡ್ಡಮನಿ ಸೇರಿದಂತೆ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.