ರೈಲು ಮಾರ್ಗ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ರೋಹಿತ್ ಜೈನ್

| Published : Dec 14 2024, 12:48 AM IST

ಸಾರಾಂಶ

ಬೆಂಗಳೂರು- ಪುಣೆ ಜಂಕ್ಷನ್ ರೈಲು ಮಾರ್ಗದಲ್ಲಿ ಬಾಕಿಯಿರುವ ದ್ವಿಪಥ ಮಾರ್ಗ ಮತ್ತು ವಿದ್ಯುದೀಕರಣ ಕಾಮಗಾರಿಯಲ್ಲಿ ಇದೇ ಡಿಸೆಂಬರ್ ಒಳಗೆ ಮುಗಿಸುವಂತೆ ನೈರುತ್ಯ ರೈಲ್ವೆ ಮ್ಯಾನೇಜರ್ ಅವರಿಗೆ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಮನವಿ ಮಾಡಿದ್ದಾರೆ.

ದಾವಣಗೆರೆ: ಬೆಂಗಳೂರು- ಪುಣೆ ಜಂಕ್ಷನ್ ರೈಲು ಮಾರ್ಗದಲ್ಲಿ ಬಾಕಿಯಿರುವ ದ್ವಿಪಥ ಮಾರ್ಗ ಮತ್ತು ವಿದ್ಯುದೀಕರಣ ಕಾಮಗಾರಿಯಲ್ಲಿ ಇದೇ ಡಿಸೆಂಬರ್ ಒಳಗೆ ಮುಗಿಸುವಂತೆ ನೈರುತ್ಯ ರೈಲ್ವೆ ಮ್ಯಾನೇಜರ್ ಅವರಿಗೆ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಮನವಿ ಮಾಡಿದ್ದಾರೆ. ಬೆಂಗಳೂರು-ಪುಣೆ ಜಂಕ್ಷನ್ ಹಾಗೂ ಪುಣೆ ಜಂಕ್ಷನ್‌ನಿಂದ ಮುಂದೆ ಪ್ರತಿದಿನ ಸುಮಾರು 40 ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲು ಗಾಡಿಗಳು ಸಾಗುತವೆ. ಈ ಮಾರ್ಗದ ರೈಲು ಹಳಿಗಳ ಮೇಲೆ ಒತ್ತಡ ಜಾಸ್ತಿ ಆಗಿದೆ. ಪ್ರಯಾಣಿಕರ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತಿದೆ. ಆದ್ದರಿಂದ ಬೆಂಗಳೂರು- ಪುಣೆ ಜಂಕ್ಷನ್ ಮಾರ್ಗದ ಬಾಕಿ ಇರುವ (ಮಿರಜ್, ಸಾಂಗ್ಲಿ, ಪುಣೆ) ರೈಲು ಮಾರ್ಗವನ್ನು ಮಾರ್ಚ್ 2025 ರೊಳಗೆ ಆದ್ಯತೆ ಮೇರೆಗೆ ಆದಷ್ಟು ಬೇಗನೆ ದ್ವಿಪಥ ಮಾರ್ಗ ಹಾಗೂ ವಿದ್ಯುದೀಕರಣ ಮುಗಿಸಿ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು. ಬೆಳಗಾವಿ-ಬೆಂಗಳೂರು ವಯಾ ದಾವಣಗೆರೆ - ಸೆಮಿ ಹೈ ಸ್ಪೀಡ್ ರೈಲು ವಂದೇ ಭರತ್ ರೈಲ್‌ ಅನ್ನು ಆದಷ್ಟು ಬೇಗ ಓಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.