ನಗರದ ಶಿರಾಗೇಟ್‌ನ 3ನೇ ವಾರ್ಡಿನ ಹಲವು ಬಡಾವಣೆಗಳಲ್ಲಿ ವಿವಿಧ ಯೋಜನೆಗಳಡಿಯಲ್ಲಿ ರಸ್ತೆ, ಚರಂಡಿ, ಉದ್ಯಾನವನಗಳ ಅಭಿವೃದ್ಧಿ ಸೇರಿ 22 ಕೋಟಿ ರು.ಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಎಲ್ಲವೂ ಪ್ರಗತಿಯಲ್ಲಿವೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ಶಿರಾಗೇಟ್‌ನ 3ನೇ ವಾರ್ಡಿನ ಹಲವು ಬಡಾವಣೆಗಳಲ್ಲಿ ವಿವಿಧ ಯೋಜನೆಗಳಡಿಯಲ್ಲಿ ರಸ್ತೆ, ಚರಂಡಿ, ಉದ್ಯಾನವನಗಳ ಅಭಿವೃದ್ಧಿ ಸೇರಿ 22 ಕೋಟಿ ರು.ಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಎಲ್ಲವೂ ಪ್ರಗತಿಯಲ್ಲಿವೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.ಸಂಬಂಧಿಸಿದ ಅಧಿಕಾರಿಗಳೊಂದಿಗೆ ಗುರುವಾರ 3ನೇ ವಾರ್ಡಿನಲ್ಲಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು, ರಿಂಗ್ ರಸ್ತೆಗೆ ಸಂಪರ್ಕ ಒದಗಿಸುವ ಶಿರಾಗೇಟ್ 80 ಅಡಿ ರಸ್ತೆಯಲ್ಲಿ ಸುಮಾರು 14 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಫುಟ್‌ಬಾತ್, ಸರ್ವೀಸ್ ರಸ್ತೆ ಡಾಂಬರೀಕರಣ, ಚರಂಡಿ ಯುಟಿಲಿಟಿ ಡಕ್ಟ್ ಹಾಗೂ ಕವರಿಂಗ್ ಸ್ಲಾಬ್, ರೋಡ್ ಕ್ರಾಸ್ ಡಕ್ಟ್, ಫುಟ್‌ಬಾತ್, ಕಲ್ವರ್ಟ್ ನಿರ್ಮಾಣ ಕಾಮಗಾರಿ, 1.60 ಕೋಟಿ ರು.ಗಳಲ್ಲಿ ಐ.ಡಿ.ಎಸ್.ಎಂ.ಟಿ ಲೇಔಟ್‌ನ ಎಚ್.ಎಂ.ಎಸ್ ಸ್ಕೂಲ್ ಹಿಂಭಾಗದಲ್ಲಿ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ, ತುಂಗಭದ್ರಾ ಬ್ಲಾಕ್ ಮತ್ತು ಅರಳೀಮರದ ಪಾಳ್ಯದ ಮುಖ್ಯರಸ್ತೆಯಲ್ಲಿ ಯುಟಿಲಿಟಿ ಡಕ್ಟ್ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು, ಸಕಾಲದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಿದರು.

ಅಲ್ಲದೆ, ಎಂ.ಜಿ.ಎನ್.ವಿ.ವೈ. ಯೋಜನೆಯಲ್ಲಿ 2.50 ಕೋಟಿ ರು. ವೆಚ್ಚದಲ್ಲಿ 3ನೇ ವಾರ್ಡಿನ ಚಿಕ್ಕವೀರಯ್ಯನಪಾಳ್ಯದ ಮುಖ್ಯರಸ್ತೆಯಿಂದ ಅರಳೀಮರದಪಾಳ್ಯ ಮುಖ್ಯರಸ್ತೆವರೆಗೆ ಎಸ್.ಸಿ.ಎಸ್.ಪಿ ಯೋಜನೆಯಡಿ ರಸ್ತೆ ಡಾಂಬರೀಕರಣ, ಚರಂಡಿ ಯುಟಿಲಿಟಿ ಡಕ್ಟ್ ಹಾಗೂ ಕವರಿಂಗ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿ, 3.50 ಕೋಟಿ ರು. ವೆಚ್ಚದಲ್ಲಿ ಅರಳೀಮರದಪಾಳ್ಯದ ಅಡ್ಡರಸ್ತೆಗಳು ಮತ್ತು ನಂಜಪ್ಪ ಬಡಾವಣೆ ಅಡ್ಡರಸ್ತೆಗಳಲ್ಲಿ ಮತ್ತು ತುಂಗಭದ್ರಾ ಬ್ಲಾಕ್ ರಸ್ತೆ ಡಾಂಬರೀಕರಣ, ಚರಂಡಿ ಯುಟಿಲಿಟಿ ಡಕ್ಟ್ ಹಾಗೂ ಕವರಿಂಗ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಸಿದರು.

ಅಮೃತ್ ಯೋಜನೆಯಡಿ ಐ.ಡಿ.ಎಸ್.ಎಂ.ಟಿ ಬಡಾವಣೆಯ ಮಳೆ ನೀರು ಕೊಯ್ಲು ಪಾರ್ಕ್ ಅಭಿವೃದ್ಧಿ ಕಾಮಗಾರಿ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿರಾಗೇಟ್‌ನ ಚಂದನ ಪಾರ್ಕ್ ಅಭಿವೃದ್ಧಿ ಕಾಮಗಾರಿ, ಅರಳೀಮರದಪಾಳ್ಯದ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.ಈಗ ತುಮಕೂರು ನಗರದ ಹೊಸ ಬಡಾವಣೆಗಳಲ್ಲಿ ವಸತಿ ಪ್ರಮಾಣ ಹೆಚ್ಚಾಗಿ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಗಾಗಿ ನಗರದಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗಾಗಿ ಸುಮಾರು 350 ಕೋಟಿ ರು. ಅಗತ್ಯವಾಗಿದೆ. ಸರ್ಕಾರದಿಂದ ಅನುದಾನ ನೀಡುವಂತೆ ಜಿಲ್ಲಾ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮುಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಜ್ಯೋತಿಗಣೇಶ್ ಹೇಳಿದರು.ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಎನ್.ಮಹೇಶ್, ಇಂದ್ರಕುಮಾರ್, ಮುಖಂಡರಾದ ಶೇಷಾಚಲಂ, ಪುಟ್ಟರಾಜು, ಭೀಮರಾಜು, ಲಿಂಗಣ್ಣ, ಭಾನು, ದಿನೇಶ್, ರಮೇಶ್ (ಪ್ರಾಂಶುಪಾಲರು), ಡಾ. ರಮೇಶ್, ನೀಲಕಂಠ, ವಿಶ್ವಣ್ಣ, ನಾಗರತ್ನ ಚಾಮಣ್ಣ, ರಮಾದೇವಿ, ಸುಜಾತ, ನೀತು, ದೀಪು, ಪುನೀತ್, ದೇವರಾಜು, ಯತೀಶ್, ಸಿದ್ದರಾಮಣ್ಣ, ಬೊಮಣ್ಣ, ಉಮೇಶ್, ವೆಂಕಟೇಶ್, ರಘುನಾಥ್, ಮಹೇಂದ್ರಕುಮಾರ್ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳಾದ ಅಧೀಕ್ಷಕ ಅಭಿಯಂತರರಾದ ವಿನಯ್, ಇ.ಇ. ಸುರೇಶ್, ಎ.ಇ.ಇ. ರವಿಕುಮಾರ್, ಎ.ಇ.ಇ. ಲಕ್ಷ್ಮಿ, ಎ.ಇ.ಹರೀಶ್ ಸೇರಿದಂತೆ ಬಡಾವಣೆಗಳ ನಾಗರಿಕ ಸಮಿತಿಗಳ ಪ್ರಮುಖರು ಹಾಜರಿದ್ದರು.