ಸಾರಾಂಶ
Complete the work with quality within the stipulated time: Thunnur
-ರಸ್ತೆ ಮರುಡಾಂಬರೀಕರಣ ಕಾಮಗಾರಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಚಾಲನೆ
----ಕನ್ನಡಪ್ರಭ ವಾರ್ತೆ ಯಾದಗಿರಿ
ಹಳ್ಳಿಗಳ ಅಭಿವೃದ್ಧಿಗೆ ಮುಖ್ಯವಾಗಿ ಸುಗಮ ಸಂಚಾರ ರಸ್ತೆಗಳು ಬೇಕು. ರಸ್ತೆಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಾಗುತ್ತಿದೆ. ನಿಗದಿತ ಅವಧಿಯಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಂಡು ಕಾಮಗಾರಿ ಮುಗಿಸಬೇಕೆಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಅವರು ತಿಳಿಸಿದರು.ಸಮೀಪದ ಖಾನಾಪುರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಹೆದ್ದಾರಿ -15ರ (ವನಮಾರಪಳ್ಳಿ-ರಾಯಚೂರು) ಮನಗನಾಳದಿಂದ ಖಾನಾಪುರದವರೆಗಿನ ಅಂದಾಜು 4 ಕಿಲೋಮೀಟರ್ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
2023-24ನೇ ಸಾಲಿನ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ ಯೋಜನೆಯ 3.60 ಕೋಟಿ ರು.ಗಳ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಇದರಿಂದ ಶಹಾಪುರದಿಂದ ಯಾದಗಿರಿ ಮತ್ತು ಖಾನಾಪುರದಿಂದ ಮನಗನಾಳ ಗ್ರಾಮಸ್ಥರಿಗೆ ಸಂಚಾರಕ್ಕೆ ಭಾರೀ ಅನುಕೂಲವಾಗಲಿದೆ ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಮ್ಮ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಳಹಾರ, ದೇವಿಂದ್ರಪ್ಪ, ಬಂಗಾರಪ್ಪ, ಹೊನ್ನಪ್ಪ, ತಿಪ್ಪಾರಡ್ಡಿ, ಪರಶುರಾಮ್, ಶರಣಪ್ಪ ಎಇಇ ರಾಮು, ರಾಜು ಆಸನಾಳ, ಗುತ್ತೀಗೆದಾರ ಚಂದ್ರಯ್ಯ ದೇವಣಗಾಂವ್ ಇದ್ದರು.
-----ಫೋಟೋ: ಯಾದಗಿರಿ ಸಮೀಪದ ಖಾನಾಪುರದಲ್ಲಿ ನಡೆದ ಮನಗನಾಳದಿಂದ ಖಾನಾಪುರದವರೆಗಿನ ಅಂದಾಜು 4 ಕಿಲೋಮೀಟರ್ ರಸ್ತೆ ಮರುಡಾಂಬರೀಕರಣ ಕಾಮಗಾರಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಚಾಲನೆ ನೀಡಿದರು.17ವೈಡಿಆರ್7