5 ವರ್ಷದಲ್ಲಿ ಸಾಗರ ಕ್ಷೇತ್ರ ಸಮಗ್ರ ಅಭಿವೃದ್ಧಿ: ಶಾಸಕ ಬೇಳೂರು ಭರವಸೆ

| Published : Mar 12 2024, 02:01 AM IST

ಸಾರಾಂಶ

ಸಾಗರ ವಿಧಾನಸಭಾ ಕ್ಷೇತ್ರ ಐದು ವರ್ಷದಲ್ಲಿ ಸಮಗ್ರ ಅಭಿವೃದ್ಧಿಯಾಗಲಿದೆ. ಹಿಂದಿನ ಸರ್ಕಾರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದ ಆನಂದಪುರ, ಯಡೇಹಳ್ಳಿ, ಆಚಾಪುರ ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಕಂಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಆಡಳಿತ ಬಂದಾಗಿನಿಂದ ಕ್ಷೇತ್ರದ ಎಲ್ಲೆಡೆ ಹೆಚ್ಚಿನ ಅಭಿವೃದ್ಧಿ ಕಾಣುತ್ತಿದೆ ಎಂದು ಆನಂದಪುರದಲ್ಲಿ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ಆನಂದಪುರ: ಸಾಗರ ವಿಧಾನಸಭಾ ಕ್ಷೇತ್ರ ಐದು ವರ್ಷದಲ್ಲಿ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಆನಂದಪುರದಲ್ಲಿ ಸೋಮವಾರ ನೂತನ ಬಸ್ ನಿಲ್ದಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದ ಆನಂದಪುರ, ಯಡೇಹಳ್ಳಿ, ಆಚಾಪುರ ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಕಂಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಆಡಳಿತ ಬಂದಾಗಿನಿಂದ ಕ್ಷೇತ್ರದ ಎಲ್ಲೆಡೆ ಹೆಚ್ಚಿನ ಅಭಿವೃದ್ಧಿ ಕಾಣುತ್ತಿದೆ ಎಂದರು.

ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ₹60 ಲಕ್ಷ, ಗೌತಮಪುರ ಆರೋಗ್ಯ ಕೇಂದ್ರಕ್ಕೆ ₹40 ಲಕ್ಷ, ₹36 ಲಕ್ಷ ವೆಚ್ಚದಲ್ಲಿ ಇಸ್ಲಾಂಪುರ, ಕೈರಾ ಮತ್ತು ಕೆರೆ ಹಿತ್ತಲು ಗ್ರಾಮಗಳಲ್ಲಿ ಮೂರು ಸಮುದಾಯ ಭವನಗಳ ಉದ್ಘಾಟನೆ ನಡೆದಿದೆ ಎಂದು ತಿಳಿಸಿದರು.

ಮಳೆ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಜನರು ನೀರನ್ನು ಮಿತವಾಗಿ ಬಳಸಬೇಕು. ಕುಡಿಯುವ ನೀರಿನ ಕೊರತೆ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಂತೆ ಪಿಡಿಒಗಳಿಗೆ ಆದೇಶಿಸಿದರು.

ಈ ಸಂದರ್ಭ ಜಿಪಂ ಮಾಜಿ ಸದಸ್ಯ ಅನಿತಾ ಕುಮಾರಿ, ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷೆ ರೂಪ ನಾಗರಾಜ್, ಸದಸ್ಯರಾದ ಸಿರಿಜಾನ್, ಗಜೇಂದ್ರ ಯಾದವ್, ರಾಘವೇಂದ್ರ, ಕಾಂಗ್ರೆಸ್ ಪ್ರಮುಖರಾದ ರೆಹಮತುಲ್ಲಾ, ಉಮೇಶ, ಸೋಮಶೇಖರ್ ಲಗ್ಗೆರೆ ಮತ್ತಿತರರು ಇದ್ದರು.

- - - -1ಎಎನ್,ಪಿ1:

ಆನಂದಪುರದಲ್ಲಿ ₹10 ಲಕ್ಷ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ಕಾಮಗಾರಿಗೆ ಅರಣ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಗುದ್ದಲಿ ಪೂಜೆ ನೆರವೇರಿಸಿದರು.