ಬೆಳೆ ಹಾನಿ ಪರಿಹಾರ ಒದಗಿಸುವಂತೆ ಒತ್ತಾಯ

| Published : Oct 24 2024, 12:47 AM IST

ಬೆಳೆ ಹಾನಿ ಪರಿಹಾರ ಒದಗಿಸುವಂತೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳೆ ವಿಮಾ ಕಂಪನಿಯಿಂದ ಮಧ್ಯಂತರ ಪರಿಹಾರ ಬೇಗನೇ ದೊರಕಿಸಿಕೊಡಬೇಕು

ಗದಗ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರೈತರ ಮುಂಗಾರು ಹಾಗೂ ಹಿಂಗಾರು ಬೆಳೆಗಳು ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರದಿಂದ ಬೆಳೆ ಪರಿಹಾರ ಹಾಗೂ ಬೆಳೆ ವಿಮಾ ಕಂಪನಿಯಿಂದ ಮಧ್ಯಂತರ ಪರಿಹಾರ ತಕ್ಷಣವೇ ಒದಗಿಸಬೇಕೆಂದು ಒತ್ತಾಯಿಸಿ ರೈತ ಹಿತಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಗದಗ ತಾಲೂಕಿನಲ್ಲಿ ಮುಂಗಾರು ಬೆಳೆಗಳಾದ ಗೋವಿನಜೋಳ, ಹತ್ತಿ, ಶೇಂಗಾ, ಮೇಣಸಿನಗಿಡ, ಈರುಳ್ಳಿ ಸೇರಿದಂತೆ ಇನ್ನಿತರ ಬೆಳೆಗಳು ನಿರಂತರ ಮಳೆಗೆ ಕೊಳೆ ರೋಗ ಬಾಧಿಸಿ ನಾಶವಾಗಿ ಅಪಾರ ಹಾನಿಯಾಗಿದೆ. ಕಟಾವು ಹಂತದಲ್ಲಿ ಬೆಳೆ ಹಾಳಾಗಿದ್ದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿ ಸಂಕಷ್ಟದಲ್ಲಿದ್ದಾರೆ.

ಕೈಗೆ ಮಾರುಕಟ್ಟೆಯಲ್ಲಿ ಬೆಲೆಯು ಬಂದಿಲ್ಲ ಮತ್ತು ಗೋವಿನ ಜೋಳ ಬೆಳೆಯು ನೆಲೆಕ್ಕೆ ಬಿದ್ದು ಮೊಳಕೆ ಬಿಡುತ್ತಿದೆ, ಶೇಂಗಾ ಭೂಮಿ ಪಾಲಾಗಿದೆ, ಇನ್ನು ತೋಟಗಾರಿಕೆ ಬೆಳೆಗಳಾದ ಕೆಂಪು ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆ ನೆಲಕ್ಕೆ ಬಿದ್ದು ಕೊಳೆತು ಹೋಗುತ್ತಿದೆ.ಇಷ್ಟೆಲ್ಲ ಹಾನಿಯಾಗಿ ನಮ್ಮ ತಾಲೂಕಿನ ರೈತರಿಗೆ ಯಾವುದೇ ಬೆಳೆಗಳು ಕೈಗೆ ಬರುವ ಭರವಸೆ ಇಲ್ಲದಂತಾಗಿದೆ. ಆದ್ದರಿಂದ ತಾವು ಸರ್ಕಾರದಿಂದ ಎಲ್ಲ ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆ ವಿಮಾ ಕಂಪನಿಯಿಂದ ಮಧ್ಯಂತರ ಪರಿಹಾರ ಬೇಗನೇ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಈ ವೇಳೆ ರೈತರಾದ ಬಸಪ್ಪ ಕಲ್ಲಬಂಡಿ, ವಿರುಪಾಕ್ಷಪ್ಪ ಅಕ್ಕಿ, ಕರಬಸಯ್ಯ ನಾಲವತವಾಡಮಠ, ಕಳಕಪ್ಪ ರೇವಡಿ, ಈಶ್ವರಪ್ಪ ಗುಜುಮಾಗಡಿ, ಮಂಜುನಾಥ ಕೋಳಿವಾಡ, ವಿರುಪಾಕ್ಷಪ್ಪ ಕೋಳಿವಾಡ ಸೇರಿದಂತೆ ರೈತರು ಇದ್ದರು.