ಸಾರಾಂಶ
ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದುಕೊಂಡು ನಿಮಗೆ ಕಲಿಸಿದ ಗುರುಗಳ ಕೀರ್ತಿ ತರಬೇಕೆಂದು ಉಪನ್ಯಾಸಕ ಎನ್.ಎಂ. ಬಡಿಗೇರ ಹೇಳಿದರು.
ನರಗುಂದ:ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದುಕೊಂಡು ನಿಮಗೆ ಕಲಿಸಿದ ಗುರುಗಳ ಕೀರ್ತಿ ತರಬೇಕೆಂದು ಉಪನ್ಯಾಸಕ ಎನ್.ಎಂ. ಬಡಿಗೇರ ಹೇಳಿದರು. ಅವರು ಶನಿವಾರ ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಗುಣಮಟ್ಟ ಸುಧಾರಣೆಗಾಗಿ ಪಾಲಕರ ಸಭೆಯಲ್ಲಿ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಯ ಗುಣಮಟ್ಟ ಸುಧಾರಣೆಗಾಗಿ ಮಕ್ಕಳ ಕಡ್ಡಾಯ ಹಾಜರಾತಿ, ಉತ್ತಮ ಬೋಧನಾ ವ್ಯವಸ್ಥೆ ನಿರ್ಮಾಣ ಅಗತ್ಯವಾದದ್ದು, ಈ ನಿಟ್ಟಿನಲ್ಲಿ ಉಪನ್ಯಾಸಕರು ಮತ್ತು ಪಾಲಕ/ಪೋಷಕರು ತಮ್ಮ ಮಕ್ಕಳ ಕಡೆಗೆ ಗಮನ ಹರಿಸುವುದು ಬಹಳಷ್ಟು ಮುಖ್ಯವಾದದ್ದು ಎಂದು ಹೇಳಿದರು. ಎ.ವ್ಹಿ. ಪಾಟೀಲರವರು ಮಾತನಾಡಿ, ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಸಂಸ್ಥೆಯೊಂದಿಗೆ ಪಾಲಕ/ಪೋಷಕರು ಕೈಜೋಡಿಸುವ ಮೂಲಕ ಮಕ್ಕಳ ಭವಿಷ್ಯತ್ತನ್ನು ಬದಲಿಸಿಕೊಳ್ಳಬೇಕೆಂದರು.
ಸಂಸ್ಥೆಯ ಕಾರ್ಯದರ್ಶಿ ಎಂ.ವ್ಹಿ. ಪಾಟೀಲ ಮಾತನಾಡಿ, ಮಕ್ಕಳ ಪರೀಕ್ಷಾ ತಯಾರಿಗಾಗಿ ನಾವು ನೀವೆಲ್ಲರೂ ಹೊಣೆಗಾರರಾಗಿ ಜವಾಬ್ದಾರಿಯಿಂದ ಮುನ್ನಡೆಯಬೇಕಾಗಿದೆ ಎಂದು ವಿದ್ಯಾರ್ಥಿಗಳಗೆ ಜೊತೆ ಚರ್ಚಿಸಿದರು. ಪ್ರಾಚಾರ್ಯರರಾದ ಎಂ.ಜಿ. ಭೋಗಾರ ಮಾತನಾಡಿ, ಮಕ್ಕಳನ್ನು ಪ್ರತಿದಿನ ಕಾಲೇಜಿಗೆ ಕಡ್ಡಾಯವಾಗಿ ಕಳುಹಿಸುವ ಮೂಲಕ ತಮ್ಮ ವೈಯಕ್ತಿಕ ಕೆಲಸಗಳನ್ನು ಪರೀಕ್ಷಾ ಸಮಯದಲ್ಲಿ ಮಕ್ಕಳಿಂದ ದೂರವಿಡಿ ಎಂದು ಪಾಲಕರಿಗೆ ತಿಳಿಸಿದರು. ಸಂಸ್ಥಾಪಕ ಅಧ್ಯಕ್ಷ ವ್ಹಿ.ಬಿ. ಪಾಟೀಲ, ನಿರ್ದೇಶಕರಾದ ಎ.ವ್ಹಿ. ಪಾಟೀಲ, ಎಂ.ವ್ಹಿ. ಪಾಟೀಲ, ಶಿವಾನಂದ ತೆಗ್ಗಿನಮನಿ, ಶ್ರೀದೇವಿ ಬಸವರಡ್ಡಿ, ಜಿ.ಎಂ.ಕುರಿ, ವಿ.ಸಿ. ಜಾಲಿಹಾಳ, ಆರ್.ವಿ. ನಾಯ್ಕರ, ಪಿ.ವಿ. ಕುರಹಟ್ಟಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಎನ್.ಎ. ಕಿತ್ತೂರು ಸ್ವಾಗತಿಸಿದರು. ಬಿ.ಆರ್. ಕುರಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎಂ. ದಳವಾಯಿ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))