ಹೆಬ್ರಿ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

| Published : Feb 20 2025, 12:46 AM IST

ಹೆಬ್ರಿ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಹೆಬ್ರಿ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಸಾಹಿತ್ಯ ನಗರಕ್ಕೆ ಸೀಮಿತವಾಗದೆ ಹಳ್ಳಿ ಹಳ್ಳಿಯವರೂ ಸಾಹಿತ್ಯದ ಸವಿಯುಣ್ಣುವಂತಾಗಬೇಕು ಎಂಬುದು ಸಾಹಿತ್ಯ ಸಮ್ಮೇಳನದ ಆಶಯವಾಗಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್‌ ಹೇಳಿದ್ದಾರೆ.

ಶಿವಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಹೆಬ್ರಿ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಒಗ್ಗಟ್ಟೇ ಮೂಲಮಂತ್ರವಾಗಿದೆ. ಸಾಹಿತ್ಯ ಕ್ಕೆ ಅಪಾಯ ಎದುರಾದರೆ ಸಾಹಿತ್ಯ ಪರಿಷತ್ತು ಖಂಡಿಸುತ್ತದೆ. 31 ಜಿಲ್ಲೆಗಳು, ತಾಲೂಕುಗಳಲ್ಲಿ , ಹೋಬಳಿಗಳಲ್ಲೂ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯದ ಕೆಲಸ ಮಾಡುತ್ತಿದೆ ಎಂದರು.

ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶ್ರೀ ನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮ್ಮೇಳನಕ್ಕೆ ಶ್ರಮಿಸಿದ ಎಲ್ಲರನ್ನೂ ಸ್ಮರಿಸಿದರು.

ಸಮ್ಮೇಳನದ ಅಧ್ಯಕ್ಷೆ ಜಯಲಕ್ಷ್ಮಿ ಅಭಯಕುಮಾರ್ ಪ್ರತಿಸ್ಪಂದನೆ ನೀಡಿ, ಐದನೇ ಸಾಹಿತ್ಯ ಸಮ್ಮೇಳನ ಭಾವೈಕ್ಯತೆಯ ಸಮ್ಮೇಳನವಾಗಿದೆ ಎಂದು ಬಣ್ಣಿಸಿದರು.

ಸಾಹಿತ್ಯ ಪೋಷಕಿ ಸರೋಜ ಪುಂಡಲೀಕ ಹಾಲಂಬಿ ಮಾತನಾಡಿ, ಹತ್ತನೆ ತರಗತಿಯ ಬಳಿಕದ ಶಿಕ್ಷಣ ಕನ್ನಡ ಮಾಧ್ಯಮದಿಂದಲೆ ನಡೆಸಲು ಶಿಕ್ಷಕರು ಪ್ರೋ ತ್ಸಾಹಿಸಬೇಕು ಎಂದರು

ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷಪ್ರ ಭಾಕರ ಶೆಟ್ಟಿ ಕೊಂಡಳ್ಳಿ ಹಾಜರಿದ್ದರು.

ಸಭೆಯಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಪೂಜಾರಿ, ಮುಖ್ಯೋಪಾಧ್ಯಾಯಿನಿ ಗುಲಾಬಿ, ಶಂಕರ ದೇವಸ್ಥಾನದ ವಿಶ್ವನಾಥ ನಾಯಕ್, ಗುರುಪ್ರಸಾದ್ ಕೊಡಂಚ , ಗ್ರಾಮಾ ಆಡಳಿತಾಧಿಕಾರಿ ರಾಚಪ್ಪಾಜಿ, ಪಿಡಿಒ ಅಶೋಕ್, ತಾ.ಪಂ ಮಾಜಿ ಅಧ್ಯಕ್ಷ ರಮೇಶ್‌ ಕುಮಾರ್ , ಉದ್ಯಮಿಗಳಾದ ಐತು ಕುಲಾಲ್, ಸತೀಶ್ ಕಿಣಿ , ಗೋಪಿನಾಥ್ ಭಟ್ ಮುನಿಯಾಲು, ಶಿವಶಂಕರ ನಾಯಕ್, ಮಹಾಬಲೇಶ್ವರ ಅಡಿಗ, ಜಯಲಕ್ಷ್ಮಿ ಪ್ರಭು, ರಾಮಕೃಷ್ಣ ಭಟ್, ಗ್ರಾಮ ಪಂಚಾಯತಿ ಸದಸ್ಯ ಸುಮಿತ್ರಾ ನಾಯ್ಕ್ , ಗ್ರಾ.ಪಂ ಉಪಾಧ್ಯಕ್ಷ ಶಂಕರ ಬಡ್ಕಿಲ್ಲಾಯ, ಶಿಕ್ಷಕ ರಮಾನಂದ ಶೆಟ್ಟಿ, ಉದ್ಯಮಿ‌ಮೋಹನ್ ದಾಸ್ ನಾಯಕ್, ಗ್ರಾ.ಪಂ ಅಧ್ಯಕ್ಷೆ ಶೋಭ ಶೆಟ್ಟಿ ಮೊದಲಾದವರು ಇದ್ದರು.

ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ್ ಕೆ. ಶಿವಪುರ‌ ಸ್ವಾಗತಿಸಿದರು. ಶಿಕ್ಷಕಿ ಸುಕೇತ ಭಂಡಾರಿ, ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.