ಸಾರಾಂಶ
ಹಾವೇರಿ: ಹುಬ್ಬಳ್ಳಿಯಲ್ಲಿ ನಡೆದ ೨೧ವರ್ಷದ ಅಂಜಲಿ ಅಂಬಿಗೇರ ಹತ್ಯೆಯನ್ನು ಖಂಡಿಸಿ, ಕೂಡಲೇ ಆರೋಪಿಯನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಿಲ್ಲಾ ಗಂಗಾಮತಸ್ಥರ ಸಂಘದಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹುಬ್ಬಳ್ಳಿಯ ಅಜ್ಜಿಯ ಮನೆಯಲ್ಲಿದ್ದ ಅಂಜಲಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪಿಯನ್ನು ಈವರೆಗೂ ಬಂಧಿಸಿಲ್ಲ, ಕೂಡಲೇ ಆರೋಪಿಯನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು. ಕೊಲೆಯಾದ ಯುವತಿ ತಂದೆ-ತಾಯಿಯನ್ನು ಕಳೆದುಕೊಂಡಿದ್ದು, ಅವಳ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದು, ಆ ಮನೆಗೆ ಆಧಾರಸ್ತಂಭವಾಗಿದ್ದಳು. ಕಾರಣ ಆ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಗೃಹಸಚಿವರು ತಕ್ಷಣ ಯುವತಿಯ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ ಬೋವಿ, ತಾಲೂಕು ಅಧ್ಯಕ್ಷ ಚಂದ್ರಶೇಖರ ಜಾಡರ, ಎಲ್ಲಪ್ಪ ಓಲೇಕಾರ, ರಾಮಚಂದ್ರಪ್ಪ ಐರಣಿ, ಪ್ರಮುಖರಾದ ಗಣೇಶ ಬಿಷ್ಠನವರ, ಶಂಕರ್ ಸುತಾರ, ಪುತ್ರರನ್ ಹೊನ್ನಪ್ಪ ದಂಡಿನ್, ಕರಬಸಪ್ಪ ಹಳದೂರು, ನಿಂಗಪ್ಪ ಹೆಗ್ಗಣ್ಣನವರ, ಹೊನ್ನಪ್ಪ ಸಣ್ಣಬಾರ್ಕಿ, ದತ್ತಾತ್ರೇಯ ಬಂಗೇರ, ಸುರೇಶ ಹುಳಬುತ್ತಿ, ಸುನಿಲ್ ಗುಳೆದ, ಜಿತೇಂದ್ರ ಸುಣಗಾರ, ಫಕ್ಕಿರೇಶ್ ಕಳಸೂರ, ಚಿತ್ರಪ್ಪ ಹೊನ್ನತ್ತಿ, ನಾಗರಾಜ ಆಲಕಟ್ಟಿ ಇತರರಿದ್ದರು.