ಗಾಜಾದಲ್ಲಿ ಇಸ್ರೇಲಿನ ಮಾನವ ಹತ್ಯಾಕಾಂಡವನ್ನು ಖಂಡಿಸಿ ಎಡಪಕ್ಷಗಳಿಂದ ರಾಷ್ಟ್ರೀಯ ಸೌಹಾರ್ದತಾ ದಿನ ಆಚರಣೆಯಲ್ಲಿ ಸಿಪಿಐ ಮತ್ತು ಸಿಪಿಐಎಂ ನೇತೃತ್ವದಲ್ಲಿ ನಗರದ ಮಹಾವೀರ ವೃತ್ತದಲ್ಲಿ ಘೋಷಣೆ ಕೂಗಿದರು. ಬಿಜೆಪಿ ಕೇಂದ್ರ ಸರ್ಕಾರವು ಪ್ಯಾಲೆಸ್ಟೀನ್‌ ಕುರಿತು ಭಾರತದ ದೀರ್ಘಕಾಲೀನ ಅಧಿಕೃತ ನಿಲುವಿಗೆ ಎಳ್ಳು ನೀರು ಬಿಟ್ಟಿದೆ. ಭಾರತ ಸರ್ಕಾರವು ತನ್ನ ಚಾರಿತ್ರಿಕವಾದ - ಪ್ಯಾಲೆಸ್ತೀನರ ಜೊತೆಗೆ ನಿರ್ಣಾಯಕವಾಗಿ ನಿಲ್ಲುವ ಧೋರಣೆಯನ್ನು ಕೈಬಿಟ್ಟು ಇಸ್ರೇಲನ್ನು ಓಲೈಸುವ ಕೆಲಸವನ್ನು ಮಾಡುತ್ತಿದೆ. ಮತ್ತು ಭಾರತವನ್ನು ಇಸ್ರೇಲ್ ಮತ್ತು ಅಮೇರಿಕದ ಮಿತ್ರ ದೇಶಗಳಾಗಿ ನೋಡುವಂತೆ ಮಾಡಿದೆ ಎಂದರು.

ಹಾಸನ: ಗಾಜಾದಲ್ಲಿ ಇಸ್ರೇಲಿನ ಮಾನವ ಹತ್ಯಾಕಾಂಡವನ್ನು ಖಂಡಿಸಿ ಎಡಪಕ್ಷಗಳಿಂದ ರಾಷ್ಟ್ರೀಯ ಸೌಹಾರ್ದತಾ ದಿನ ಆಚರಣೆಯಲ್ಲಿ ಸಿಪಿಐ ಮತ್ತು ಸಿಪಿಐಎಂ ನೇತೃತ್ವದಲ್ಲಿ ನಗರದ ಮಹಾವೀರ ವೃತ್ತದಲ್ಲಿ ಘೋಷಣೆ ಕೂಗಿದರು.ಇದೇ ವೇಳೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್.ಆರ್‌. ನವೀನ್ ಕುಮಾರ್ ಮಾತನಾಡಿ, ಎರಡು ವರ್ಷಗಳಿಂದ ಸತತವಾಗಿ ಇಸ್ರೇಲ್ ನಡೆಸುತ್ತಿರುವ ಬಾಂಬುಗಳ ದಾಳಿ, ಮಿಲಿಟರಿ ಆಕ್ರಮಣದಿಂದ ಪ್ಯಾಲೆಸ್ತೀನಿಯರು ಹಿಂದೆಂದೂ ಕಂಡರಿಯದ ಮಾನವ ದುರಂತವನ್ನು ಅನುಭವಿಸುವಂತಾಗಿದೆ ಎಂದರು. ಬಿಜೆಪಿ ಕೇಂದ್ರ ಸರ್ಕಾರವು ಪ್ಯಾಲೆಸ್ಟೀನ್‌ ಕುರಿತು ಭಾರತದ ದೀರ್ಘಕಾಲೀನ ಅಧಿಕೃತ ನಿಲುವಿಗೆ ಎಳ್ಳು ನೀರು ಬಿಟ್ಟಿದೆ. ಭಾರತ ಸರ್ಕಾರವು ತನ್ನ ಚಾರಿತ್ರಿಕವಾದ - ಪ್ಯಾಲೆಸ್ತೀನರ ಜೊತೆಗೆ ನಿರ್ಣಾಯಕವಾಗಿ ನಿಲ್ಲುವ ಧೋರಣೆಯನ್ನು ಕೈಬಿಟ್ಟು ಇಸ್ರೇಲನ್ನು ಓಲೈಸುವ ಕೆಲಸವನ್ನು ಮಾಡುತ್ತಿದೆ. ಮತ್ತು ಭಾರತವನ್ನು ಇಸ್ರೇಲ್ ಮತ್ತು ಅಮೇರಿಕದ ಮಿತ್ರ ದೇಶಗಳಾಗಿ ನೋಡುವಂತೆ ಮಾಡಿದೆ ಎಂದರು. ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಡೋಂಗ್ರೆ, ಹಿರಿಯ ದಲಿತ ಮುಖಂಡರಾದ ಎಚ್.ಕೆ.ಸಂದೇಶ್, ಧರ್ಮೇಶ್, ಎಂ.ಜಿ.ಪೃಥ್ವಿ, ಅನ್ಸರ್, ಸಮೀರ್, ಇರ್ಶಾದ್ ಅಹಮದ್ ದೇಸಾಯಿ, ಧರ್ಮರಾಜ್, ಅರವಿಂದ್, ರಮೇಶ್ ಮುಂದಾದವರು ಇದ್ದರು.